ಹಿಜಾಬ್-ಕೇಸರಿ ಶಾಲು ವಿವಾದ, ಶಿವಮೊಗ್ಗದಲ್ಲಿ ಇಂದು ದಾಖಲಾದ ಎಫ್.ಐ.ಆರ್ ಎಷ್ಟು?

 

 

ಸುದ್ದಿ ಕಣಜ.ಕಾಂ | DISTRICT | HIJAB-SAFFRON CONTROVERSY 
ಶಿವಮೊಗ್ಗ: ಹಿಜಾಬ್-ಕೇಸರಿ ಶಾಲು ವಿವಾದದ ಬೆನ್ನಲ್ಲೇ ನಗರದ ವಿವಿಧೆಡೆ ಅಹಿತಕರ ಘಟನೆಗಳು ನಡೆದಿದ್ದು, ಜಿಲ್ಲೆಯಾದ್ಯಂತ ಇಂದು ಒಟ್ಟು ಐದು ಪ್ರಕರಣಗಳು ದಾಖಲಾಗಿವೆ.

  • ಕೇಸ್ ನಂಬರ್ 1
    ಬಾಪೂಜಿ ನಗರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲ್ಲು ತೂರಾಟ ಮಾಡಿದ ಗುಂಪಿನ ವಿರುದ್ಧ ಪ್ರಕರಣ ದಾಖಲಾಗಿದೆ.
  • ಕೇಸ್ ನಂಬರ್ 2
    ಬಾಪೂಜಿ ನಗರದ ಕಾಲೇಜಿನಲ್ಲಿ ನಡೆದ ಕಲ್ಲು ತೂರಾಟ ವೇಳೆ ಪೊಲೀಸ್ ವಾಹನ ಜಖಂಗೊಂಡಿದೆ. ಈ ಬಗ್ಗೆ ಸುಮೋಟೊ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
  • ಕೇಸ್ ನಂಬರ್ 3
    ಟ್ಯಾಂಕ್ ಮೊಹಲ್ಲಾದಲ್ಲಿ ಚೇತನ್ ಎಂಬ ಯುವಕನ ಮೇಲೆ ಗುಂಪೊಂದು ದಾಳಿ ಮಾಡಿದೆ. ಈ ಬಗ್ಗೆ ಕೋಟೆ ಠಾಣೆಯಲ್ಲಿ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.
  • ಕೇಸ್ ನಂಬರ್ 4
    ಸಾಗರದಲ್ಲಿ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮೇಲೆ ಕಲ್ಲು ತೂರಾಟವಾಗಿದ್ದು, ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.
  • ಕೇಸ್ ನಂಬರ್ 5
    ಶಿಕಾರಿಪುರ ಪಟ್ಟಣದಲ್ಲಿ ಖಾಸಗಿ ಬಸ್ ವೊಂದರ ಮೇಲೆ ಪ್ರತಿಭಟನಾನಿರತ ವಿದ್ಯಾರ್ಥಿಗಳು ಕಲ್ಲು ತೂರಾಟ ಮಾಡಿ ಸಾರ್ವಜನಿಕ ಆಸ್ತಪಾಸ್ತಿ ಹಾನಿ ಮಾಡಿದ್ದು, ಪ್ರಕರಣ ದಾಖಲಾಗಿದೆ.

READ | ಶಿವಮೊಗ್ಗದಲ್ಲಿ 144 ಜಾರಿ, ಎಷ್ಟು ಜನ ದಿನ ಇರಲಿದೆ ನಿಷೇಧಾಜ್ಞೆ

READ | ಹಿಜಾಬ್ ವಿವಾದ, ಶಿವಮೊಗ್ಗದಲ್ಲಿ ಲಾಠಿ ಚಾರ್ಜ್, ಕಲ್ಲು ತೂರಾಟ, ಉದ್ವಿಗ್ನ ಸ್ಥಿತಿ, ಸ್ಥಳದಲ್ಲೇ ಬೀಡು ಬಿಟ್ಟ ಡಿಸಿ, ಎಸ್‍ಪಿ

READ | ಶಿವಮೊಗ್ಗ ಉದ್ವಿಗ್ನ ಸ್ಥಿತಿಯ ಬಗ್ಗೆ ಉಸ್ತುವಾರಿ ಸಚಿವರೇನು ಹೇಳಿದ್ದಾರೆ?

READ | ರಾಜ್ಯದಾದ್ಯಂತ ಶಾಲೆ, ಕಾಲೇಜುಗಳಿಗೆ ಮೂರು ದಿನ ರಜೆ

READ | ಹಿಜಾಬ್-ಕೇಸರಿ ಶಾಲು ಸಂಘರ್ಷ, ಶಿವಮೊಗ್ಗದಲ್ಲಿ ಬಿಗುವಿನ ವಾತಾವರಣ, ಇಂದು ಎಲ್ಲೆಲ್ಲಿ ಏನೇನಾಯ್ತು?

https://www.suddikanaja.com/2022/02/07/hijab-saffron-controversy-has-begun-in-shimoga-the-clash-between-students-of-sahyadri-college-atncc-and-tirthahalli-government-degree-college-on-monday/

error: Content is protected !!