SSLC ಪಾಸ್ ಆದವರಿಗೆ ಶಿಕಾರಿಪುರದಲ್ಲಿ ಉದ್ಯೋಗ, VRW ಹುದ್ದೆಗೆ ಈಗಲೇ ಅರ್ಜಿ ಸಲ್ಲಿಸಿ

 

 

ಸುದ್ದಿ ಕಣಜ.ಕಾಂ | TALUK | JOB JUNCTION
ಶಿಕಾರಿಪುರ: ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಅಂಗವಿಕಲರ ಗ್ರಾಮೀಣ ಪುನರ್ವಸತಿ ಕಾರ್ಯಕ್ರಮ ಯೋಜನೆಗೆ ಶಿಕಾರಿಪುರದ 8 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ (ವಿ.ಆರ್.ಡಬ್ಲ್ಯೂ) ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಗೌರವಧನ ಆಧಾರದ ಮೇರೆಗೆ ತಾತ್ಕಾಲಿಕವಾಗಿ ಆಯ್ಕೆ ಮಾಡಲು ಸ್ಥಳೀಯ ಅರ್ಹ ವಿಕಲಚೇತನರು ಅರ್ಜಿ ಸಲ್ಲಿಸುವಂತೆ ತಿಳಿಸಲಾಗಿದೆ.

JOBS FB Linkಯಾವ ಪಂಚಾಯಿತಿಗಳಲ್ಲಿ ಹುದ್ದೆ ಖಾಲಿ
ಶಿಕಾರಿಪುರ ತಾಲೂಕಿನ ಹಾರೋಗೊಪ್ಪ, ತರಲಘಟ್ಟ, ಕಲ್ಮನೆ, ಬಳ್ಳಿಗಾವಿ, ಬಗನಕಟ್ಟೆ, ಮುದ್ದನಹಳ್ಳಿ, ಮುಡುಬಸಿದ್ದಾಪುರ ಮತ್ತು ಹೋತನಕಟ್ಟೆ ಗ್ರಾಮ ಪಂಚಾಯತಿಗಳಲ್ಲಿ ವಿ.ಆರ್.ಡಬ್ಲ್ಯೂ. ಹುದ್ದೆಗಳು ಖಾಲಿ ಇವೆ.

READ | KPTCL ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಇಂದಿನಿಂದ ಆರಂಭ, ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ವಿದ್ಯಾರ್ಹತೆ, ವಯೋಮಿತಿ
10ನೇ ತರಗತಿ ಉತ್ತೀರ್ಣ ಹೊಂದಿರುವ 18 ರಿಂದ 45 ವರ್ಷದೊಳಗಿನ ಸ್ಥಳೀಯ ಅರ್ಹ ವಿಕಲಚೇತನರು ನಿಗದಿತ ನಮೂನೆ ಅರ್ಜಿಗಳನ್ನು ತಾಲೂಕು ಪಂಚಾಯಿತಿಯ ಎಂ.ಆರ್.ಡಬ್ಲ್ಯೂ ಅವರಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಫೆಬ್ರವರಿ 28ರೊಳಗೆ ಸಲ್ಲಿಸುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ನಿಗದಿತ ನಮೂನೆ ಅರ್ಜಿ ಮತ್ತು ಮಾಹಿತಿಗಾಗಿ ಹುಚ್ಚರಾಯಪ್ಪ (ಎಂ.ಅರ್.ಡಬ್ಲ್ಯೂ) ಮೊಬೈಲ್ ಸಂಖ್ಯೆ 9741161346ಗೆ ಸಂಪರ್ಕಿಸುವುದು.

error: Content is protected !!