ಹಿಜಾಬ್, ಕೇಸರಿ ಶಾಲು ವಿವಾದ, ಶಿವಮೊಗ್ಗದಲ್ಲಿ ಖಾಕಿ ಖದರ್

 

 

ಸುದ್ದಿ ಕಣಜ.ಕಾಂ | DISTRICT | ROUTE MARCH
ಶಿವಮೊಗ್ಗ: ಹಿಜಾಬ್ ವಿಚಾರವಾಗಿ ಇತ್ತೀಚೆಗೆ ನಗರದಲ್ಲಿ ನಡೆದ ಗಲಾಟೆ ಹಿನ್ನೆಲೆ ಪೊಲೀಸರು ಕಳೆದ ಮೂರು ದಿನಗಳಿಂದ ರೂಟ್ ಮಾರ್ಚ್ ಮಾಡುತಿದ್ದಾರೆ. ಭಾನುವಾರ ಕೂಡ ನಗರದ ವಿವಿಧೆಡೆ ರೌಂಡ್ಸ್ ಹಾಕುವ ಮೂಲಕ ಖಾಕಿ ಖದರ್ ಅನ್ನು ತೋರಿಸಲಾಯಿತು.

VIDEO REPORT | ಶಿವಮೊಗ್ಗದಲ್ಲಿ ಖಾಕಿ ರೌಂಡ್ಸ್, ಶಿವಮೊಗ್ಗದಲ್ಲಿ ಶಾಲೆಗಳ ಪುನರಾರಂಭದ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದೇನು?

READ | ಶಿವಮೊಗ್ಗದ ಶಾಲೆಗಳ ಸುತ್ತ ನಿಷೇಧಾಜ್ಞೆ ಜಾರಿ, ಡಿಸಿ ಮಾಡಿರುವ ಮನವಿ ಏನು?

ಎಲ್ಲೆಲ್ಲಿ ನಡೆಯಿತು ರೂಟ್ ಮಾರ್ಚ್?
ಶಾಂತಿ ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಸಂಜೆ ಪೊಲೀಸ್ ಇಲಾಖೆಯಿಂದ ರೂಟ್ ಮಾರ್ಚ್ ಮಾಡಲಾಯಿತು. ಸೈರನ್
ಪೊಲೀಸ್ ಮೈದಾನದಿಂದ ಪ್ರಾರಂಭವಾದ ರೂಟ್ ಮಾರ್ಚ್ ಮಿಳಘಟ್ಟ ಕ್ರಾಸ್, ಬುದ್ಧ ನಗರ, ಸೌಭಾಗ್ಯ ಕಲ್ಯಾಣ ಮಂದಿರ, ಆರ್‍ಎಂಎಲ್ ನಗರ ಮುಖ್ಯ ರಸ್ತೆ, ಟೆಂಪೊ ಸ್ಟಾಂಡ್, ವಿಜಯ ಗ್ಯಾರೇಜು, ಕ್ಲಾರ್ಕ್ ಪೇಟೆ, ಅಜದ್ ನಗರ, ರವಿ ವರ್ಮಾ ಸ್ಟ್ರೀಟ್, ಸಿದ್ದಯ್ಯ ಸರ್ಕಲ್, ಎಂಕೆಕೆ ರೋಡ್, ಮೆಹಬೂಬ್ ಗಲ್ಲಿ ತರಕಾರಿ ಮಾರ್ಕೆಟ್, ಗಾಂಧಿ ಬಜಾರ್, ಆರ್‍ಎಸ್ ಪಾರ್ಕ್, ತಿರುಪಯಳ್ಳನ ಕೇರಿ, ಲಷ್ಕರ್ ಮೊಹಲ್ಲಾ, ಸಿಎಲ್ ರಾಮಣ್ಣ ರೋಡ್, ಕೃಷ್ಣ ಕೆಫೆ, ಎಎ ಸರ್ಕಲ್ ಮೂಲಕ ಡಿಎಆರ್ ಪೊಲೀಸ್ ಮೈದಾನದಲ್ಲಿ ಸಂಪನ್ನಗೊಂಡಿತು.

https://www.suddikanaja.com/2022/02/07/hijab-saffron-controversy-has-begun-in-shimoga-the-clash-between-students-of-sahyadri-college-atncc-and-tirthahalli-government-degree-college-on-monday/

error: Content is protected !!