ತಾಳಗುಪ್ಪ-ಮೈಸೂರು ಎಕ್ಸ್ ಪ್ರೆಸ್ ರೈಲಿನ ನಿಲುಗಡೆ ಸಮಯದಲ್ಲಿ ತುಸು ಬದಲಾವಣೆ

 

 

ಸುದ್ದಿ ಕಣಜ.ಕಾಂ | KARNATAKA | RAILWAY NEWS
ಶಿವಮೊಗ್ಗ: ತಾಳಗುಪ್ಪ-ಮೈಸೂರು ಎಕ್ಸ್‍ಪ್ರೆಸ್ ರೈಲಿನ ನಿಲುಗಡೆ ಸಮಯದಲ್ಲಿ ತುಸು ಬದಲಾವಣೆ ಮಾಡಲಾಗಿದೆ. ಸಾಗರ ಜಂಬಗಾರು ನಿಲ್ದಾಣದಲ್ಲಿ ನಿಲುಗಡೆಯ ಸಮಯವನ್ನು ಹೆಚ್ಚಳ ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ಸಿಪಿಆರ್.ಒ ತಿಳಿಸಿದ್ದಾರೆ.
ಫೆಬ್ರವರಿ 10ರಿಂದ ಆಗಸ್ಟ್ 9ರ ವರೆಗೆ ಆರು ತಿಂಗಳ ಅವಧಿಗೆ ಪ್ರಾಯೋಗಿಕ ಆಧಾರದ ಮೇಲೆ ಪಾರ್ಸಲ್ ಲೋಡಿಂಗ್ ಅನ್ನು ಹೆಚ್ಚಿಸಲು ಸಾಗರ ಜಂಬಗಾರು ರೈಲ್ವೆ ನಿಲ್ದಾಣದಲ್ಲಿ ರೈಲು ಸಂಖ್ಯೆ 16227/16228 ರೈಲಿನ ನಿಲುಗಡೆ ಸಮಯವನ್ನು 2 ನಿಮಿಷದಿಂದ 5 ನಿಮಿಷಕ್ಕೆ ಹಚ್ಚಿಸಲು ನಿರ್ಧರಿಸಲಾಗಿದೆ.

READ | ಶಿವಮೊಗ್ಗದಲ್ಲಿ ಹಿಜಾಬ್ ವಿವಾದ, ಗಾರೆಯವನ ಮೇಲೂ ಅಟ್ಯಾಕ್, ಪೊಲೀಸ್ ವಾಹನ ಪೀಸ್ ಪೀಸ್, ಇನ್ನೇನೆನಾಯ್ತು?

  • ರೈಲು ಸಂಖ್ಯೆ 16227 ಮೈಸೂರು – ತಾಳಗುಪ್ಪ ಎಕ್ಸ್ ಪ್ರೆಸ್ ರೈಲು ಸಾಗರ ಜಂಬಗಾರು ನಿಲ್ದಾಣಕ್ಕೆ ಬೆಳಗ್ಗೆ 6.30/06.32 ಬದಲಾಗಿ ಬೆಳಗ್ಗೆ 6.30/ 6.35 ಆಗಮಿಸಿ/ನಿರ್ಗಮಿಸುತ್ತದೆ.
  • ರೈಲು ಸಂಖ್ಯೆ 16228 ತಾಳಗುಪ್ಪ- ಮೈಸೂರು ಎಕ್ಸ್ ಪ್ರೆಸ್ ರೈಲು ಸಾಗರ ಜಂಬಗಾರು ನಿಲ್ದಾಣಕ್ಕೆ ಸಂಜೆ 8.36/08.38 ಬದಲಾಗಿ ಸಂಜೆ 8.36/ 8.41 ಆಗಮಿಸಿ/ ನಿರ್ಗಮಿಸುತ್ತದೆ.

https://www.suddikanaja.com/2021/10/14/short-movie-ondu-preeti-eradu-kanasu/

error: Content is protected !!