ತಾಯಿಯ ತಿಥಿಗೆ ಹೋದಾಗ ಮನೆಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

 

 

ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ತಾಯಿಯ ತಿಥಿಗೆ ಹೋದಾಗ ಮನೆಯ ಕಿಟಕಿ ಒಡೆದು ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ಕಳವು ಮಾಡಿದ ಘಟನೆ ಬಸವನಗುಡಿ ಬಡಾವಣೆಯಲ್ಲಿ ಇತ್ತೀಚೆಗೆ ನಡೆದಿದೆ. ಮನೆಯಲ್ಲಿದ್ದ 5.26 ಲಕ್ಷ ರೂಪಾಯಿ ಮೌಲ್ಯದ 263 ಗ್ರಾಂ ಚಿನ್ನಾಭರಣ, 1.50 ಲಕ್ಷ ರೂಪಾಯಿ ನಗದು ಕಳ್ಳತನ ಮಾಡಲಾಗಿದೆ.

READ | ಯುವ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಎಫ್‍ಐಆರ್

ಗೋಕರ್ಣಕ್ಕೆ ಹೋದಾಗ ಘಟನೆ
ತಾಯಿಯ ತಿಥಿ ಕಾರ್ಯಕ್ಕೆಂದು ಗೋಕರ್ಣಕ್ಕೆ ಹೋದಾಗ ಕಳ್ಳರು ಬಾಲ್ಕನಿಯ ಕಿಟಕಿಗಳನ್ನು ಒಡೆದು ಒಳಗೆ ಪ್ರವೇಶಿಸಿದ್ದಾರೆ. ನಂತರ ಚಿನ್ನಾಭರಣ, ನಗದು ಕಳ್ಳತನ ಮಾಡಿದ್ದದಾರೆ. ಊರಿಂದ ವಾಪಸ್ ಬಂದು ನೋಡಿದಾಗ ಕಳ್ಳತನವಾಗಿರುವುದು ಗಮನಕ್ಕೆ ಬಂದಿದ್ದು, ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!