Union Budget 2022-23, 5G, ಕೃಷಿ, ಉದ್ಯಯ, ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ, ಕೇಂದ್ರ ಬಜೆಟ್ ನಲ್ಲಿ ಜನಸಾಮಾನ್ಯರಿಗೆ ಸಿಕ್ಕಿದ್ದೇನು? ಇಲ್ಲಿವೆ ಹೈಲೈಟ್ಸ್

 

 

ಸುದ್ದಿ ಕಣಜ.ಕಾಂ | NATIONAL NEWS | UNION BUDGET 
ನವದೆಹಲಿ: ಕೇಂದ್ರ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಔಪಚಾರಿಕ ಒಪ್ಪಿಗೆಯ ನಂತರ ಸಂಸತ್ ನಲ್ಲಿ 2022-23ನೇ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಎಲ್ಲರನ್ನೂ ಒಳಗೊಂಡ ಬಜೆಟ್ ಇದಾಗಿದ್ದು, ಕೃಷಿ, ಶಿಕ್ಷಣ, ಉದ್ಯಮ, ಉದ್ಯೋಗ, ಜೀವನವನ್ನು ಇನ್ನಷ್ಟು ಸ್ಮಾರ್ಟ್ ಆಗಿಸುವ ಹೀಗೆ ಹತ್ತು ಹಲವು ವಿಚಾರಗಳನ್ನು ಬಜೆಟ್ ನಲ್ಲಿ ಮಂಡಿಸಿದ್ದಾರೆ. ಅವುಗಳ ಹೈಲೈಟ್ಸ್ ಇಲ್ಲಿದೆ.

READ | ಎಸ್ಸೆಸ್ಸೆಲ್ಸಿ ಪಾಸ್ ಆದವರಿಗೆ ಕೆಸಿಸಿ ಬ್ಯಾಂಕ್ ನಲ್ಲಿ ಉದ್ಯೋಗ, ಆಕರ್ಷಕ ಸಂಬಳ, ಈಗಲೇ ಅರ್ಜಿ ಸಲ್ಲಿಸಿ

2022 ಕೇಂದ್ರ ಬಜೆಟ್ ಹೈಲೈಟ್ಸ್

  1. ಜಮೀನು ನೋಂದಣಿ ಡಿಜಿಟಲೀಕರಣಕ್ಕೆ ಒನ್ ನೇಷನ್ ಒನ್ ರೆಜಿಸ್ಟ್ರೇಷನ್ ಜಾರಿ. ದೇಶದ 8 ಭಾಷೆಗಳಲ್ಲಿ ಏಕ ರೂಪದ ಆಸ್ತಿ ನೋಂದಣಿ ವ್ಯವಸ್ಥೆ
  2. ಎಂಎಸ್.ಎಂಇಗಳಿಗೆ 6 ಕೋಟಿ ರೂಪಾಯಿ ನೀಡಿಕೆ. ಉದ್ಯಮಗಳ ನೋಂದಣಿಗೆ ಏಕ ಗವಾಕ್ಷಿ ಪದ್ಧತಿ
  3. ನಗರ ಮೂಲಸೌಕರ್ಯಗಳ ಅಭಿವೃದ್ಧಿಗೆ ಯೋಜನೆ
  4. ಹೈಲೆವಲ್ ಅರ್ಬನ್ ಕಮಿಟಿ ಸ್ಥಾಪನೆ
  5. ದೂರಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಗಾಗಿ 5ಜಿ ತರಂಗಾತ ಹರಾಜು, 2022ರಿಂದಲೇ 5 ಸೇವೆ ಲಭ್ಯ
  6. ಗುತ್ತಿಗೆದಾರರ ಇ ಬಿಲ್ ಸ್ಕೀಮ್ ಜಾರಿ
  7. ದೇಶದ ಪ್ರತಿ ಹಳ್ಳಿಗಳಿಗೆ ಒಎಫ್‍ಸಿ (ಆಪ್ಟಿಕಲ್ ಫೈಬರ್) ವ್ಯವಸ್ಥೆ
  8. ಎಲ್‍ಪಿಜಿ ಸಿಲಿಂಡರ್ ಬೆಲೆ ಇಳಿಕೆ, ವಿಮಾನಯಾನ ಏರಿಕೆ ಸಾಧ್ಯತೆ
  9. DRDO ಜೊತೆ ಸ್ಥಳೀಯ ಕಂಪನಿಗಳ ಸಹಭಾಗಿತ್ವದಲ್ಲಿ ರಕ್ಷಣಾ ಇಲಾಖೆಯಲ್ಲಿ ಶೇ.68ರಷ್ಟು ಸ್ಥಳೀಯವಾಗಿ ಖರೀದಿ
  10. ಭಾರತ್ ನೆಟ್ ಯೋಜನೆ 2025ರೊಳಗೆ ಪೂರ್ಣ
  11. ಯುವಪೀಳಿಗೆ ಸಂಶೋಧನೆಗೆ ಒತ್ತು
  12. ಸೋಲಾರ್ ವಿದ್ಯುತ್ ಉತ್ಪಾದನೆಗೆ 19,500 ಕೋಟಿ ರೂ. 10 ವಲಯಗಳಲ್ಲಿ ಕ್ಲೀನ್ ಎನರ್ಜಿ ಯೋಜನೆ ಜಾರಿ, 2023ರೊಳಗೆ 280 ಗಿಗಾ ವ್ಯಾಟ್ ಸೋಲಾರ್ ಶಕ್ತಿ ಉತ್ಪಾದನೆ ಯೋಜನೆ ಗುರಿ
  13. ಎಸ್‍ಸಿ, ಎಸ್‍ಟಿ ರೈರಿಗೆ ಆರ್ಥಿಕ ನೆರವು
  14. ದೇಶದಾದ್ಯಂತ ಎಲೆಕ್ಟ್ರಿಕ್ ವಾಹನಗಳಿಗೆ ಒತ್ತು. ನಗರ ಪ್ರದೇಶಗಳಲ್ಲಿ ಬ್ಯಾಟರಿ ಬದಲಾವಣೆ ಕೇಂದ್ರ
  15. ಹೊಸ ತಂತ್ರಜ್ಞಾನಗಳೊಂದಿಗೆ ಚಿಪ್ ಒಳಗೊಂಡ ಇ-ಪಾಸ್ ಪೋರ್ಟ್ ಮುಂದಿನ ವರ್ಷದಿಂದ ಲಭ್ಯ
  16. ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ 48 ಕೋಟಿ ರೂಪಾಯಿ
  17. ಹರ್ ಘರ್ ನಲ್ ಜಲ್ ಯೋಜನೆಗೆ 60 ಸಾವಿರ ಕೋಟಿ ರೂ. ಈ ಯೋಜನೆ ಅಡಿ ದೇಶದ 3.8 ಕೋಟಿ ಮನೆಗಳಿಗೆ ನೀರು
  18. ದೇಶದ 2 ಲಕ್ಷ ಅಂಗನವಾಡಿಗಳು ಮೇಲ್ದರ್ಜೆಗೇರಿಸಲು ಕ್ರಮ
  19. ಪ್ರಧಾನಿ ಇ ವಿದ್ಯಾ ಯೋಜನೆ ಅಡಿಯಲ್ಲಿ 200 ಟಿವಿ ಚಾನಲ್ ಗಳ ಮೂಲಕ 1ರಿಂದ 12ನೇ ತರಗತಿವರೆಗೆ ಒನ್ ಕ್ಲಾಸ್, ಒನ್ ಟಿವಿ ಚಾನಲ್ ಜಾರಿ
  20. ವಿಶ್ವದರ್ಜೆಯ ಡಿಜಿಟಲ್ ಯುನವರ್ಸಿಟಿ ಸ್ಥಾಪನೆಗೆ ಕ್ರಮ
  21. ಶೂನ್ಯ ಬಂಡವಾಳ, ನೈಸರ್ಗಿಕ ಕೃಷಿಗೆ ಆದ್ಯತೆ
  22. ಕನಿಷ್ಠ ಬೆಂಬಲ ಬೆಲೆ ಯೋಜನೆಗೆ 2.87 ಕೋಟಿ ರೂ. ಮೀಸಲು
  23. 2023ರ ಅಂತರ ರಾಷ್ಟ್ರೀಯ ಸಿರಿ ಧಾನ್ಯ ವರ್ಷವೆಂದು ಘೋಷಣೆ
  24. ಸಾರಿಗೆ ಮೂಲಸೌಕರ್ಯ ಹೆಚ್ಚಿಸಲು 20 ಸಾವಿರ ಕೋಟಿ ರೂ. ಮೀಸಲು
  25. ಮುಂದಿನ 3 ವರ್ಷದಲ್ಲಿ 400 ವಂದೇ ಭಾರತ್ ಹೊಸ ರೈಲುಗಳ ಆರಂಭ

https://www.suddikanaja.com/2021/03/08/karnataka-state-budget-cm-bsy-announcemany-scheme-to-shivamogga/

error: Content is protected !!