ಎಸ್ಸೆಸ್ಸೆಲ್ಸಿನಲ್ಲಿ ಪಾಸಾಗಿದ್ದರೆ ಸಾಕು, ಬಿಎಂಟಿಸಿನಲ್ಲಿ ಉದ್ಯೋಗ, 300 ಹುದ್ದೆಗಳ ನೇಮಕಾತಿ

 

 

ಸುದ್ದಿ ಕಣಜ.ಕಾಂ | KARNATAKA | JOB JUNCTION 
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ನಲ್ಲಿ ತಾಂತ್ರಿಕ ವೃತ್ತಿಗಳಲ್ಲಿ ಪೂರ್ಣಾವಧಿ ಶಿಶಿಕ್ಷು ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹರು ಕೂಡಲೇ ಅರ್ಜಿ ಸಲ್ಲಿಸಬಹುದು.
ವಯೋಮಿತಿ ಮತ್ತು ವಿದ್ಯಾರ್ಹತೆ
ದಿನಾಂಕ 30-03-2022ರಂದು ಕನಿಷ್ಠ 16 ವರ್ಷ ತುಂಬಿರಬೇಕು. ಮತ್ತು 26 ವರ್ಷ ಮೀರಿರಬಾರದು. ಎಸ್ಸೆಸ್ಸೆಲ್ಸಿ ಅಥವಾ ಐಟಿಐ (ಮೆಕ್ಯಾನಿಕ್ ಡೀಸಲ್ ಹಾಗೂ ಫಿಟ್ಟರ್ ವೃತ್ತಿ)ಯಲ್ಲಿ ಉತ್ತೀರ್ಣರಾಗಿರಬೇಕು.

JOBS FB Link

READ | ಇಂಡಿಯನ್ ಬ್ಯಾಂಕ್ ನಲ್ಲಿ 202 ಹುದ್ದೆಗಳು ಖಾಲಿ, ಕೂಡಲೇ ಅರ್ಜಿ ಸಲ್ಲಿಸಿ

ತರಬೇತಿ ಭತ್ಯೆ
ಎಸ್ಸೆಸ್ಸೆಲ್ಸಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ 6,000 ರೂಪಾಯಿ ಹಾಗೂ ಐಟಿಐ ತೇರ್ಗಡೆಯಾದವರಿಗೆ 7,000 ರೂಪಾಯಿ ತರಬೇತಿ ಭತ್ಯೆ ನೀಡಲಾಗುವುದು.

ಅರ್ಜಿ ಸಲ್ಲಿಕೆಗೆ ಹೇಗೆ, ಇವುಗಳನ್ನು ಗಮನಿಸಿ

  1. ಅಭ್ಯರ್ಥಿಗಳು ವೆಬ್ ಪೋರ್ಟಲ್ www.apprenticeshipindia.gov.in ನಲ್ಲಿ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ನಿರ್ದೇಶನಾಲಯ, ನವದೆಹಲಿ ಅವರು ಶಿಶಿಕ್ಷು ತರಬೇತಿ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಅಂತರ್ಜಾಲ ಪೋರ್ಟಲ್ ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಬೇಕು. ಹೀಗಾಗಿ, ವೆಬ್ ಪೋರ್ಟಲ್ ನಲ್ಲಿ ನೋಂದಾಯಿಸುವುದು ಕಡ್ಡಾಯವಾಗಿರುತ್ತದೆ.
  2. ನೋಂದಾಯಿಸಿದ ಬಳಿಕ ಸಲ್ಲಿಸಿರುವ ಅರ್ಜಿಯ ಪ್ರತಿಯೊಂದಿಗೆ ಇತ್ತೀಚಿನ 2 ಭಾವಚಿತ್ರ, ಸಂಬಂಧಪಟ್ಟ ಎಲ್ಲ ಮೂಲ ದಾಖಲಾತಿಗಳಾದ ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಆಧಾರ್ ಲಿಂಕ್ ಬ್ಯಾಂಕ್ ಖಾತೆಯ ಪ್ರತಿ, ಐಟಿಐ ತೇರ್ಗಡೆ ಹೊಂದಿದ್ದಲ್ಲಿ ಅದರ ಮೂಲ ಅಂಕಪಟ್ಟಿಯೊಂದಿಗೆ ಮಾರ್ಚ್ 30ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯೊಳಗೆ ಬಿಎಂಟಿಸಿ, ತರಬೇತಿ ಕೇಂದ್ರ, 2ನೇ ಮಹಡಿ, ಶಾಂತಿನಗರ ಬಸ್ ನಿಲ್ದಾಣ, ಬೆಂಗಳೂರು ಇಲ್ಲಿ ಖುದ್ದಾಗಿ ಮೂಲ ದಾಖಲಾತಿಗಳ ಒಂದು ಸೆಟ್ ಜೆರಾಕ್ಸ್ ಪ್ರತಿಗಳನ್ನು ಸಹ ತರಬೇಕು. ಅಪೂರ್ಣ ಅಥವಾ ವಿಳಂಬವಾಘಿ ಸಲ್ಲಿಸಿರುವ ಅರ್ಜಿಗಳನ್ನು ಆಯ್ಕೆಗೆ ಪರಿಗಣಿಸುವುದಿಲ್ಲ.
  3. ಅಭ್ಯರ್ಥಿಗಳಿಗೆ ಸಂಬಂಧಪಟ್ಟ ಎಲ್ಲ ಮಾಹಿತಿಯನ್ನು ಪೋರ್ಟಲ್ ಮೂಲಕ ನೇರವಾಗಿ ಅವರ ಇಮೇಲ್ ಗೆ ಕಳುಹಿಸಲಾಗುವುದು. ಹೀಗಾಗಿ, ಅವರ ಸ್ವಂತದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ನಮೂದಿಸಬೇಕು.
  4. ಅಭ್ಯರ್ಥಿಗಳು ವೆಬ್ ಸೈಟ್ ನಲ್ಲಿ ತರಬೇತಿ ಪಡೆಯುವ ಸಂಸ್ಥೆ ಮತ್ತು ಬಿಟಿಪಿ (Establishment
    and Basic Training Provider- BTP) ಆಯ್ಕೆ ಮಾಡುವಾಗ ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್ ಪೋರ್ಟ್ ಕಾರ್ಪೋರೇಷನ್ ಆಯ್ಕೆ ಮಾಡಿಕೊಳ್ಳಬೇಕು.
ವೃತ್ತಿಯ ಹೆಸರು ತರಬೇತಿ ಅವಧಿ ಒಟ್ಟು ಹುದ್ದೆ
ಎಸ್ಸೆಸ್ಸೆಲ್ಸಿ ಪಾಸ್ ಐಟಿಐ ಪಾಸ್
ಮೆಕ್ಯಾನಿಕಲ್ ಡೀಸೆಲ್ 2 ವರ್ಷ 1 ವರ್ಷ 250
ಫಿಟ್ಟರ್ 2 ವರ್ಷ 1 ವರ್ಷ 50
ಒಟ್ಟು ಹುದ್ದೆಗಳು 300

NOTIFICATION

OFFICIAL WEBSITE

https://www.suddikanaja.com/2021/07/08/madhukranti-web-portal/

error: Content is protected !!