ಹಸುವಿನ ಕಾಲು ಕತ್ತರಿಸಿದ ಕಿಡಿಗೇಡಿಗಳು

 

 

ಸುದ್ದಿ ಕಣಜ.ಕಾಂ | TALUK | CRIME NEWS
ಶಿವಮೊಗ್ಗ: ಮೇಯಲು ಕಾಡಿಗೆ ಹೋದ ಹಸುವಿನ ಕಾಲಿಗೆ ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ತಾಲೂಕಿನ ಚೋರಡಿಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.

READ | ಇದುವರೆಗೆ ಅಕ್ರಮವಾಗಿ ಸಾಗಿಸುತಿದ್ದ 370 ಕ್ವಿಂಟಾಲ್ ಪಡಿತರ ಅಕ್ಕಿ ಸೀಜ್, ನಡೆಯಲಿದೆ ಬಹಿರಂಗ ಹರಾಜು

ಚೋರಡಿ ಸಮೀಪದ ಹೊರಬೈಲು ಗ್ರಾಮದ ನಾಗರಾಜ್ ಎಂಬುವವರಿಗೆ ಸೇರಿದ ಹಸುವಿನ ಕಾಲನ್ನು ಕತ್ತರಿಸಲಾಗಿದೆ. ಶುಕ್ರವಾರ ಎಂದಿನಂತೆ ಮೇಯುವುದಕ್ಕಾಗಿ ಹಸುಗಳನ್ನು ಕಾಡಿಗೆ ಬಿಟ್ಟಿದ್ದಾರೆ. ಹಸುಗಳು ವಾಪಸ್ ಬಂದಿದ್ದು ಒಂದು ಮಾತ್ರ ಮನೆಗೆ ಮರಳಿರಲಿಲ್ಲ‌. ಮಾರನೇ ದಿನ ಹೋಗಿ ವೀಕ್ಷಿಸಲಾಗಿ ಹೊಲವೊಂದರಲ್ಲಿ ಹಸು ಕಂಡುಬಂದಿದೆ. ಹತ್ತಿರ ಹೋಗಿ ನೋಡಿದಾಗ ಹಸುವಿನ ಕಾಲು ಕತ್ತರಿಸಿರುವುದು ಗಮನಕ್ಕೆ ಬಂದಿದೆ.

error: Content is protected !!