ಶಿವಮೊಗ್ಗ-ಭದ್ರಾವತಿ ರಸ್ತೆ ಬಂದ್, ಪರ್ಯಾಯ ಮಾರ್ಗದ ಮಾಹಿತಿ ಇಲ್ಲಿದೆ

 

 

ಸುದ್ದಿ ಕಣಜ.ಕಾಂ | DISTRICT | ROB WORK
ಶಿವಮೊಗ್ಗ: ಶಿವಮೊಗ್ಗ-ಭದ್ರಾವತಿ ಮಧ್ಯೆ ಬರುವ ರೈಲ್ವೆ ಕ್ರಾಸಿಂಗ್ ಗೇಟ್ ನಂ.34 ರಲ್ಲಿ ರೈಲ್ವೆ ಓವರ್ ಬ್ರಿಡ್ಜ್(ROB) ಕಾಮಗಾರಿ ತ್ವರಿತಗತಿಯಿಂದ ಪೂರ್ಣಗೊಳ್ಳಬೇಕಾಗಿರುವುದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯುಂಟಾಗದಂತೆ ಕಾಮಗಾರಿ ಪೂರ್ಣಗೊಳ್ಳುವವರೆಗೆ ಕೆಳಕಂಡಂತೆ ಪರ್ಯಾಯ ಮಾರ್ಗಗಳಲ್ಲಿ ವಾಹನಗಳು ಸಂಚರಿಸಲು ಅವಕಾಶ ಕಲ್ಪಿಸಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಆದೇಶಿಸಿದ್ದಾರೆ.

READ | ನಾಳೆಯಿಂದ ಶಿವಮೊಗ್ಗ-ಭದ್ರಾವತಿ ನಡುವಿನ ರೈಲ್ವೆ ಬ್ರಿಡ್ಜ್ ಕ್ಲೋಸ್, 2 ಪರ್ಯಾಯ ಮಾರ್ಗದ ಮಾಹಿತಿ ಇಲ್ಲಿದೆ

ಪರ್ಯಾಯ ಮಾರ್ಗದ ಮಾಹಿತಿ
ಶಿವಮೊಗ್ಗದಿಂದ ಭದ್ರಾವತಿ ಕಡೆಗೆ ಸಂಚರಿಸುವ ಮಿನಿ ನಗರ ಸಾರಿಗೆ ಬಸ್ ಗಳು, ಕಾರು, ಟ್ಯಾಕ್ಸಿ ಮತ್ತು ಲಘು ವಾಹನಗಳು ಕಡದಕಟ್ಟೆ ವಿದ್ಯಾಧಿರಾಜ ಸಭಾ ಭವನ ಪಕ್ಕದ ರಸ್ತೆಯಿಂದ ಹೆಬ್ಬಂಡಿ ಮಾರ್ಗವಾಗಿ ಲಕ್ಷ್ಮಿಪುರ ಹಾಗೂ ಬಿಳಕಿ ಕ್ರಾಸ್ ಮೂಲಕ ಸಂಚರಿಸುವುದು. ಎಲ್ಲ ರೀತಿಯ ಭಾರೀ ವಾಹನಗಳು ಉಂಬ್ಳೆಬೈಲ್ ರಸ್ತೆ ಮೂಲಕ-ಕೃಷ್ಣಪ್ಪ ವೃತ್ತ-ಸಿದ್ದಾಪುರ ಸರ್ಕಲ್-ಬಿಳಕಿ ಕ್ರಾಸ್ ಮುಖಾಂತರ ಸಂಚರಿಸುವುದು.

error: Content is protected !!