
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕೆಎಂಎಫ್ ಈ ಮಟ್ಟಕ್ಕೆ ಬೆಳೆಯಲು ರೇವಣ್ಣರ ಕೊಡುಗೆ ದೇವೇಗೌಡರ ಕುಟುಂಬದ ಪಾತ್ರ ದೊಡ್ಡದಿದೆ. ನಮ್ಮ ಕುಟುಂಬದವರ ಬಗ್ಗೆ ಮಾತನಾಡುವ ಬಗ್ಗೆ ಎಚ್ಚರವಿರಲಿ. ಜಯದೇವ ಆಸ್ಪತ್ರೆ ಇಂದು ಹೇಗಿದೆ ಇದಕ್ಕೆ ಕಾರಣ ದೇವೇಗೌಡರ ಕುಟುಂಬ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (HD Kumarswamy) ಹೇಳಿದರು.
ಪಂಚರತ್ನ ಯಾತ್ರೆ ವೇಳೆ ನಡೆದ ಮಾಧ್ಯಮಗೊಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿರುವ ಕುಟುಂಬ ರಾಜಕಾರಣದ ಬಗ್ಗೆ ಅಮಿತ್ ಶಾ ಚರ್ಚೆ ಮಾಡಲ್ಲ. ಆ ಪಕ್ಷದ ಶಾಸಕರು ಏನೆಲ್ಲ ಚರ್ಚೆ ಮಾಡುತ್ತಾರೋ ಅದನ್ನು ನಿಯಂತ್ರಿಸುವ ಯೋಗ್ಯತೆಗೆ ಇಲ್ಲ. ಹೀಗಿರುವಾಗ, ನಮ್ಮ ಪಕ್ಷ ಹಾಗೂ ಕುಟುಂಬದ ಬಗ್ಗೆ ಚರ್ಚೆ ಮಾಡುವ ನೈತಿಕತೆ ಏನಿದೆ? ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ಅದನ್ನು ಮೊದಲು ನೋಡಲಿ ಎಂದು ಹೇಳಿದರು.

READ | ಎಸ್.ಎಸ್.ಎಲ್.ಸಿ ಪಾಸ್ ಆದವರಿಗೆ ಶಿವಮೊಗ್ಗದಲ್ಲಿ ಉದ್ಯೋಗ ಅವಕಾಶ
ಪೂರ್ಣಾವಧಿ ಸರ್ಕಾರ ಕೊಡಿ
ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣಕ್ಕೆ ಪಡೆದ ಜಮೀನಿಗೆ ಪರಿಹಾರ ನೀಡಿಲ್ಲ. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಒಂದು ಸಮಸ್ಯೆ ಇದೆ. ಇದಕ್ಕೆ ಶಾಶ್ವತ ಪರಿಹಾರ ನೀಡಲು ಪೂರ್ಣಾವಧಿ ಸರ್ಕಾರ ಬೇಕು ಎಂದರು.
ಕಳೆದ ಮೂರು ಚುನಾವಣೆಗಿಂತ ಈ ಬಾರಿ ಜೆಡಿಎಸ್ ಅಲೆ ಹೆಚ್ಚಾಗಿದೆ. ಜನ ಸೇರುತ್ತಾರೆ ಮತ ಹಾಕಲ್ಲ ಎಂಬ ಆರೋಪಗಳು ಕೇಳಿಬರುತ್ತಿದ್ದು, ಈ ಬಾರಿ ಸಂಪೂರ್ಣ ಬೆಂಬಲ ನೀಡುತ್ತಾರೆ ಎಂದರು.
ನಾನು ಒಂದು ವರ್ಷ ಮೊದಲೇ ಗೆಲ್ಲುವ ವಿಧಾನಸಭಾ ಕ್ಷೇತ್ರಗಳನ್ನ ಗುರುತಿಸಿರುವೆ. 125 ಕ್ಷೇತ್ರದಲ್ಲಿ ಗೆದ್ದೇ ಗೆಲ್ಲುತ್ತೇನೆ. ಹೀಗಾಗಿ, ಮೂರು ತಿಂಗಳ ಮೊದಲೇ ಸಂಘಟನೆ ಮಾಡುತ್ತಿದ್ದೇನೆ. ಎಲ್ಲ ಪಕ್ಷಗಳು ಚುನಾವಣೆ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. 72 ವಿಧಾನಸಭಾ ಕ್ಷೇತ್ರಗಳಲ್ಲಿ ನಾನೇ ಖುದ್ದು ಭೇಟಿ ಮಾಡಿದ್ದೇನೆ. ರಥಯಾತ್ರೆ ಮೂಲಕ ನಿತ್ಯ 40 ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದೇನೆ ಎಂದು ತಿಳಿಸಿದರು.
ಉತ್ತಮ ಆರೋಗ್ಯಕ್ಕೆ ಸೌಲಭ್ಯವುಳ್ಳ ಆಸ್ಪತ್ರೆ
ರಾಜ್ಯದ ಜನರಿಗೆ ಉತ್ತಮ ಆರೋಗ್ಯ ಕೊಡಬೇಕಾದರೆ ಸಕಲ ಸೌಲಭ್ಯವುಳ್ಳ ಆಸ್ಪತ್ರೆ ಕಲ್ಪಿಸುವುದು ನಮ್ಮ ಉದ್ದೇಶ. ಅನಾರೋಗ್ಯ ಸಮಸ್ಯೆ ಹೇಳಿಕೊಂಡು ನಿತ್ಯ ನೂರಾರು ಜನರು ಬರುತ್ತಾರೆ. ಇಂತಹ ಬಡವರಿಗೆ ನಿತ್ಯ ನಾನು ಹೇಗೆ ಹಣ ಕೊಡಲಿ? ನಾನು ವಿದ್ಯಾಸಂಸ್ಥೆ ಕಟ್ಟಿಲ್ಲ, ಕಟ್ಟಡ ಕಟ್ಟಲ್ಲ. ಸರ್ಕಾರ ಮಾಡಿರುವ ಸಾಲಕ್ಕೆ ಪ್ರತಿವರ್ಷ ಸಾವಿರಾರು ಕೋಟಿ ಬಡ್ಡಿ ಕಟ್ಟಬೇಕು ಎಂದು ಹೇಳಿದರು.
ಎಂಎಲ್‌ಸಿ ಭೋಜೇಗೌಡ, ಮಾಜಿ ಶಾಸಕಿ ಶಾರದಾ ಪೂರ್‍ಯನಾಯ್ಕ್, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ಉಪಸ್ಥಿತರಿದ್ದರು.
ವಿ.ಐ.ಎಸ್.ಎಲ್.ಗೆ ಗಣಿಯೂ ಕೊಟ್ಟಾಯ್ತು, 6 ಸಾವಿರ ಕೋಟಿಯಲ್ಲಿ 6 ರೂ. ಕೂಡ ಬರಲಿಲ್ಲ: ಬಾಲಕೃಷ್ಣ ಗುಟುರ್