ಪ್ರತಿಭಟನೆ ಬೆನ್ನಲ್ಲೇ ಸಹ್ಯಾದ್ರಿ ಕಾಲೇಜು ಹಾಸ್ಟೆಲ್‍ಗೆ ಕುವೆಂಪು ವಿವಿ ಕುಲಸಚಿವರ ಭೇಟಿ, ನೀಡಿದ ಭರವಸೆಗಳೇನು?

 

 

ಸುದ್ದಿ ಕಣಜ.ಕಾಂ | CITY | SAHYADRI COLLEGE
ಶಿವಮೊಗ್ಗ: ನಗರದ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಸೋಮವಾರ ಬೆಳಗ್ಗೆ ವಿದ್ಯಾರ್ಥಿಗಳು ಭಾರೀ ಸಂಖ್ಯೆಯಲ್ಲಿ ಸೇರಿ ದಿಢೀರ್ ಪ್ರತಿಭಟನೆ ಮಾಡಿದ ಬೆನ್ನಲ್ಲೇ ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವೆ ಜಿ.ಅನುರಾಧ ಅವರು ಭೇಟಿ ನೀಡಿದರು.
ಹಾಸ್ಟೆಲ್ ಗೆ ಭೇಟಿ ನೀಡಿದ್ದೇ ವಿದ್ಯಾರ್ಥಿನಿಯರ ಅಹವಾಲುಗಳನ್ನು ಸ್ವೀಕರಿಸಿದ್ದಾರೆ. ಅಲ್ಲಿರುವ ವ್ಯವಸ್ಥೆಯನ್ನು ಖುದ್ದು ಪರಿಶೀಲಿಸಿದ್ದಾರೆ. ಆಹಾರ ಸಿದ್ಧಪಡಿಸುವ ಕೋಣೆಯನ್ನೂ ವೀಕ್ಷಿಸಿದ್ದಾರೆ.

READ | ಭದ್ರಾವತಿಯಲ್ಲಿ ಭಾರೀ ಶಬ್ದಕ್ಕೆ ನಲುಗಿದ ಜನ, ಸುಟ್ಟು ಭಸ್ಮವಾದ ಮನೆ

ಆಹಾರ ನಿಲಯದ ಬೇಡಿಕೆ ಇದ್ದರೆ ವರದಿ ಸಲ್ಲಿಸಿ
ಪ್ರತ್ಯೇಕ ಆಹಾರ ನಿಲಯದ ಕಟ್ಟಡ ನಿರ್ಮಾಣದಂತಹ ಬೇಡಿಕೆಗಳಿದ್ದರೆ ವಿಶ್ವವಿದ್ಯಾಲಯಕ್ಕೆ ವರದಿ ಸಲ್ಲಿಸಲು ಪ್ರಾಂಶುಪಾಲರಿಗೆ ಅನುರಾಧ ಸೂಚನೆ ನೀಡಿದರು.
ಹಾಸ್ಟೆಲ್ ನಲ್ಲಿ ಆಹಾರದ ಗುಣಮಟ್ಟ ಕಾಯ್ದುಕೊಳ್ಳುವುದು, ಹಾಸ್ಟೆಲ್ ನ ಶುಚಿತ್ವ ಕಾಪಾಡುವುದು, ಮತ್ತಿತರ ಸಣ್ಣ ಪುಟ್ಟ ಸಮಸ್ಯೆಗಳಿಗೆ ಸಮಿತಿಯ ಮೂಲಕ ಶೀಘ್ರ ಪರಿಹಾರ ಒದಗಿಸಲಾಗುವುದು ಎಂದರು.
ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಡಾ.ವಾಗ್ದೇವಿ, ಡಾ. ವೀಣಾ, ಡಾ. ರಮೇಶ್ ಬಾಬು, ಡಾ. ರಾಜೇಶ್ವರಿ ಉಪಸ್ಥಿತರಿದ್ದರು.

https://www.suddikanaja.com/2020/11/29/cm-announced-1-crore-to-kuvempu-university/

error: Content is protected !!