| HIGHLIGHTS |
- ಕರ್ತವ್ಯ ಪ್ರಜ್ಞೆ ಮೆರೆದ ನಾಲ್ವರು ಸಿಬ್ಬಂದಿ ಸನ್ಮಾನ
- ತಾಳಗುಪ್ಪ- ಮೈಸೂರು ಎಕ್ಸ್’ಪ್ರೆಸ್ ರೈಲಿನ ಅಸಿಸ್ಟೆಂಟ್ ಲೋಕೋ ಪೈಲಟ್’ಗೆ ಗೌರವ
ಸುದ್ದಿ ಕಣಜ.ಕಾಂ | KARNATAKA | 08 SEP 2022
ಶಿವಮೊಗ್ಗ: ಆನಂದಪುರ( Anandapuram)- ಜಂಬಗಾರು(Jambagaru) ರೈಲ್ವೆ ನಿಲ್ದಾಣದ ಬಳಿ ಸಂಭವಿಸಬಹುದಾಗಿದ್ದ ಅಪಘಾತವನ್ನು ತಡೆದಿದು ಕರ್ತವ್ಯ ಮೆರೆದ ಅಸಿಸ್ಟೆಂಟ್ ಲೋಕೋ ಪೈಲಟ್(Asst. Loco Pilot)ಗೆ ನೈರುತ್ಯ ರೈಲ್ವೆ(SOUTH WESTERN RAILWAY)ಯಿಂದ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
READ | ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ, ರಾರಾಜಿಸಿ ಹರ್ಷನ ಫೋಟೊ, ಮೊಳಗಿದ ಜೈಶ್ರೀರಾಮ್ ಘೋಷಣೆ
ಅರಸಿಕೆರೆ ಡಿಪೋದ ಅಸಿಸ್ಟೆಂಟ್ ಲೋಕೋ ಪೈಲಟ್ ಸೆಲ್ವ ಗಣಪತಿ ಅವರಿಗೆ ಪ್ರಶಸ್ತಿ ನೀಡಲಾಗಿದೆ. ಇವರು 2022ರ ಜುಲೈ 16ರಂದು ತಾಳಗುಪ-ಮೈಸೂರು ಎಕ್ಸ್ ಪ್ರೆಸ್ ರೈಲು( Mysuru-Talguppa Express) (ರೈಲ್ವೆ ಸಂಖ್ಯೆ 16206) ಜೋರಾಗಿ ಅಲುಗಾಡಿದ ಅನುಭವವಾಗಿದೆ. ತಕ್ಷಣ ಜಾಗೃತರಾದ ಸೆಲ್ವ ಗಣಪತಿ (Selva Ganapathi) ಅವರು ನಿಲ್ದಾಣಕ್ಕೆ ಮಾಹಿತಿ ನೀಡಿದ್ದರು. ಸಂಬಂಧಪಟ್ಟ ಎಂಜಿನಿಯರ್’ಗಳು ಸ್ಥಳಕ್ಕೆ ಭೇಟಿ ನೀಡಿ ರಿಪೇರಿ ಕಾರ್ಯಕೈಗೊಂಡಿದ್ದರು. ಇವರ ಸಮಯ ಮತ್ತು ಕರ್ತವ್ಯ ಪ್ರಜ್ಞೆಯಿಂದ ಅನಾಹುತವೊಂದು ಕೂದಲೆಳೆಯಲ್ಲಿ ತಪ್ಪಿತ್ತು.
ಒಟ್ಟು ನಾಲ್ವರಿಗೆ ಪ್ರಶಸ್ತಿ ಪ್ರದಾನ
ಯಡಮಂಗಲ ರೈಲ್ವೆ ನಿಲ್ದಾಣದ ರೈಲ್ವೆ ಮಾಸ್ಟರ್ ದೇವೇಂದ್ರ ಭಗತ್, ಹೊಳಲ್ಕೆರೆ ಸ್ಟೇಷನ್ ಮಾಸ್ಟರ್ ಬಿ.ಆರ್.ನಾಗರಾಜ್, ಟ್ರ್ಯಾಕ್ ಮೆಂಟೇನರ್ ರವೀಂದ್ರ ಪಟ್ನಂ ಅವರಿಗೆ ನೈರುತ್ಯ ರೈಲ್ವೆ ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್ ಸನ್ಮಾನಿಸಿದ್ದಾರೆ.
https://suddikanaja.com/2021/09/21/shivamogga-railway-station/