| HIGHLIGHTS |
- ಭದ್ರಾವತಿಯಲ್ಲಿ ಅದ್ಧೂರಿಯಾಗಿ ನಡೆದ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ
- ಶಾಸಕ ಬಿ.ಕೆ. ಶಾಸಕ ಸಂಗಮೇಶ್ವರ್ ಅವರು ಗಣಪತಿಗೆ ಪೂಜೆ ಸಲ್ಲಿಸುವ ಮೂಲಕ ರಾಜಬೀದಿ ಉತ್ಸವಕ್ಕೆ ಚಾಲನೆ
- ಮೆರವಣಿಗೆಯಲ್ಲಿ ರಾರಾಜಿಸಿದ ಹರ್ಷನ ಫೋಟೊ, ಮೊಳಗಿದ ಜೈಶ್ರೀರಾಮ್ ಘೋಷಣೆ
ಸುದ್ದಿ ಕಣಜ.ಕಾಂ | TALUK | 08 SEP 2022
ಭದ್ರಾವತಿ: ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಯು ಗುರುವಾರ ಬೆಳಗ್ಗೆ ಆರಂಭಗೊಂಡಿದ್ದು, ಸಾವಿರಾರು ಜನರು ಪಾಲ್ಗೊಂಡಿದ್ದಾರೆ.
ಹಿಂದೂ ಮಹಾಸಭಾ- ಹಿಂದೂ ರಾಷ್ಟ್ರಸೇನಾ ವತಿಯಿಂದ ಹೊಸಮನೆಯಲ್ಲಿ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ವಿಸರ್ಜನಾ ಪೂರ್ವ ರಾಜಬೀದಿ ಉತ್ಸವಕ್ಕೆ ಭದ್ರಾವತಿ ಶಾಸಕ ಬಿ.ಕೆ.ಶಾಸಕ ಸಂಗಮೇಶ್ವರ್ ಚಾಲನೆ ನೀಡಿದರು.
ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಗೆ ಶಿವಮೊಗ್ಗ ಸಜ್ಜಾಗಿದೆ. ಗಾಂಧಿ ಬಜಾರ್’ನಲ್ಲಿ ಮಹಾಭಾರತ ಸನ್ನಿವೇಶದ ಪ್ರವೇಶದ್ವಾರ ನಿರ್ಮಾಣ ಮಾಡಲಾಗಿದೆ. ಯುವಪೀಳಿಗೆ ಇದಕ್ಕೆ ಫಿದಾ ಆಗಿದ್ದು, ಇದರ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ವಿಡಿಯೋ ನೋಡಿ (video report)
READ | ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಗೆ ಶಿವಮೊಗ್ಗ ಸಜ್ಜು, ಎಲ್ಲೆಡೆ ಕೇಸರಿ ಬಾವುಟ
ಹೇಗೆ ಸಾಗಲಿದೆ ಮೆರವಣಿಗೆ?
ಮರವಣಿಗೆಯು ಶಿವಾಜಿ ವೃತ್ತಕ್ಕೆ ತೆರಳಿ ಅಲ್ಲಿಂದ ಹೊಸಮನೆ ಮುಖ್ಯರಸ್ತೆಯ ಮೂಲಕ ಸಾಗಿ ರಂಗಪ್ಪ ವೃತ್ತ, ಮಾಧವಾಚಾರ್ ವೃತ್ತ, ಹಾಲಪ್ಪ ವೃತ್ತ, ಬಸ್ ನಿಲ್ದಾಣ, ಹುತ್ತಾಕ್ಕೆ ತೆರಳಲಿದೆ. ತರೀಕೆರೆ ರಸ್ತೆ, ಗಾಂಧಿ ವೃತ್ತ ಮಾರ್ಗವಾಗಿ ಸಾಗಲಿದೆ. ನಗರಸಭೆ ಮುಂಭಾಗದ ಭದ್ರಾ ನದಿಯಲ್ಲಿ ವಿಸರ್ಜನೆ ಮಾಡಲಾಗುವುದು.
ಬೆಳಗ್ಗೆ ಪ್ರಾರಂಭಗೊಂಡಿರುವ ಮೆರವಣಿಗೆಯಲ್ಲಿ ವೀರಗಾಸೆ, ಮಂಗಳವಾದ್ಯಕಟ್ಟಲಾಗಿದೆ. ಸಾಂಸ್ಕೃತಿಕ ತಂಡಗಳೊಂದಿಗೆ ಸಾಗಿದೆ.
ಗಣಪತಿ ವಿಸರ್ಜನೆ ಹಿನ್ನೆಲೆಯಲ್ಲಿ ಭದ್ರಾವತಿಯ ಪ್ರಮುಖ ರಸ್ತೆಗಳಲ್ಲಿ ಬಂಟಿಂಗ್ಸ್ ಕಟ್ಟಲಾಗಿದೆ. ಮೆರವಣಿಗೆ ಸಾಗುವಾಗ ಗಣಪತಿ ಮೂರ್ತಿಗೆ ಬೃಹತ್ ಹಾರಗಳನ್ನು ಹಾಕಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರಸಾದ, ಲಡ್ಡು ಕೂಡ ವಿತರಣೆ ಮಾಡಲಾಗುತ್ತಿದೆ.
ಮೆರವಣಿಗೆಯಲ್ಲಿ ರಾರಾಜಿಸಿದ ಹರ್ಷನ ಫೋಟೊ
ಫೆಬ್ರವರಿ 20ರಂದು ಭಾರತಿ ಕಾಲೋನಿ ಕ್ರಾಸ್ ಬಳಿ ಬರ್ಬರವಾಗಿ ಹತ್ಯೆಯಾದ ಬಜರಂಗ ದಳ ಕಾರ್ಯಕರ್ತ ಹರ್ಷ(Harsha)ನ ಚಿತ್ರ ಮೆರವಣಿಗೆಯಲ್ಲಿ ರಾರಾಜಿಸಿತ್ತು. ಜೈಶ್ರೀರಾಮ್ ಎಂಬ ಘೋಷಣೆಗಳು ಮೊಳಗಿತು.
https://suddikanaja.com/2022/08/31/hindu-mahasabha-ganapati-installed-in-shivamogga/