ಸೊರಬದಲ್ಲಿ ವಿದ್ಯುತ್ ತಗುಲಿ ಪವರ್ ಮ್ಯಾನ್ ಸಾವು

 

 

ಸುದ್ದಿ ಕಣಜ.ಕಾಂ | TALUK | CRIME NEWS
ಸೊರಬ: ವಿದ್ಯುತ್ ತಗುಲಿ ಪವರ್ ಮ್ಯಾನ್(power man)ವೊಬ್ಬರು ಶುಕ್ರವಾರ ಮೃತಪಟ್ಟಿದ್ದಾರೆ. ತಾಲೂಕಿನ ದುಗೂರು ಗ್ರಾಮದಲ್ಲಿ ಘಟನೆ ನಡೆದಿದೆ.

ವಿದ್ಯುತ್ ಮಾರ್ಗ ಕೆಲಸದ ವೇಳೆ ಶಾಕ್
ಗದಗ ಜಿಲ್ಲೆಯ ಗಜೇಂದ್ರಗಢ (gajendragad) ಮೂಲದ ಉಳವಿ (ulavi) ಮೆಸ್ಕಾಂ (MESCOM) ಶಾಖೆಯ ಪವರ್ ಮ್ಯಾನ್ ರವಿ ಬೀರಪ್ಪ ಚವ್ಹಾಣ್ (32) ಮೃತ ವ್ಯಕ್ತಿ. ಇವರು ಸಂಜೆ ಹೊತ್ತಿನಲ್ಲಿ ದುಗೂರು ಸಮೀಪದ 11 ಕೆವಿ ವಿದ್ಯುತ್ ಮಾರ್ಗದ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ತಗುಲಿದೆ. ತಕ್ಷಣ ರವಿ ಅವರನ್ನು ಸಾಗರದ ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾರೆ.

error: Content is protected !!