ಮಲವಗೊಪ್ಪ ಬಳಿ ನಿತ್ರಾಣಗೊಂಡಿದ್ದ ನವಿಲು ರಕ್ಷಣೆ, ತ್ಯಾವರೆಕೊಪ್ಪಕ್ಕೆ ಹಸ್ತಾಂತರ

 

 

ಸುದ್ದಿ ಕಣಜ.ಕಾಂ | DISTRICT | WILD LIFE
ಶಿವಮೊಗ್ಗ: ನಿತ್ರಾಣ ಸ್ಥಿತಿಯಲ್ಲಿ ಪತ್ತೆಯಾದ ರಾಷ್ಟ್ರಪಕ್ಷಿ ನವಿಲನ್ನು ರಕ್ಷಿಸಿ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹ ಧಾಮಕ್ಕೆ ಹಸ್ತಾಂತರ ಮಾಡಲಾಗಿದೆ.
ಉಂಬ್ಳೆಬೈಲು ವಲಯ ವ್ಯಾಪ್ತಿಯ ಮಲವಗೊಪ್ಪ ಗ್ರಾಮದ ಕಾಂತರಾಜು ಅವರ ತೋಟದ ಹತ್ತಿರ ನೀರನ್ನು ಅರಸಿ ಬಂದ ನವಿಲೊಂದು ನಿತ್ರಾಣ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ತಕ್ಷಣ ಅರಣ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಲಾಗಿದೆ. ಅವರು ಬಂದು ರಕ್ಷಿಸಿದ್ದಾರೆ.

READ | ನಾಳೆಯಿಂದ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಶಿವಮೊಗ್ಗದಲ್ಲಿ ರೇಡಿಯೋ ಪಾಠ, ಯಾವ್ಯಾವ ವಿಷಯ ಬೋಧನೆ

ಪ್ರಥಮ ಚಿಕಿತ್ಸೆ ಬಳಿಕ ಸಿಂಹ ಧಾಮಕ್ಕೆ ಶಿಫ್ಟ್
ಕಾಲಿಗೆ ಗಾಯಗೊಂಡಿದ್ದರಿಂದ ನವಿಲನ್ನು ತಕ್ಷಣ ಪಶು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮುಂದಿನ ಕ್ರಮಕ್ಕಾಗಿ ಹುಲಿ ಮತ್ತು ಸಿಂಹಧಾಮ ಶಿವಮೊಗ್ಗಕ್ಕೆ ಸಾಗಿಸಲಾಗಿದೆ.
ಉಂಬ್ಳೆಬೈಲು ಆರ್.ಎಫ್.ಓ ಆರ್.ಟಿ.ಮಂಜುನಾಥ್, ಸೋಗಾನೆ ಡಿವೈಆರ್.ಎಫ್.ಓಗಳಾದ ನವೀನ್ ಹೂಗಾರ, ಅಬ್ದುಲ್ ಕರೀಂ, ಎಫ್.ಜಿ. ಕೀಜರ್ ಅಲಿ, ರಾಜಶೇಖರ್, ಸುದರ್ಶನ್, ಕೃಷ್ಣಮೂರ್ತಿ ಇತರರು ಕಾರ್ಯಾಚರಣೆ ಮಾಡಿದ್ದಾರೆ.

error: Content is protected !!