ಶಿರಾಳಕೊಪ್ಪದಲ್ಲಿ‌ ಕ್ರಿಕೆಟ್ ವಿಚಾರವಾಗಿ ಸ್ನೇಹಿತರಲ್ಲೇ ಮಾರಾಮಾರಿ

 

 

ಸುದ್ದಿ ಕಣಜ.ಕಾಂ | TALUK | CRIME NEWS
ಶಿಕಾರಿಪುರ: ಕ್ರಿಕೆಟ್ ವಿಚಾರವಾಗಿ ಸ್ನೇಹಿತರ‌ನಡುವೆಯೇ ಜಗಳವಾಗಿದ್ದು, ಮಾತಿಗೆ ಮಾತು ಬೆಳೆದು ಪರಸ್ಪರ ಮಾರಾಮಾರಿ ಮಾಡಿಕೊಂಡಿರುವ ಘಟನೆ ಶಿರಾಳಕೊಪ್ಪದ ಡಾಬಾವೊಂದರ ಬಳಿ ನಡೆದಿದೆ.
ಶಿಕಾರಿಪುರ ತಾಲೂಕಿನ ಕೋಡಿಹಳ್ಳಿಯ ರಜನಿಕಾಂತ್ (34) ಎಂಬಾತನ ಮೇಲೆ ಅರುಣ್ ಕುಮಾರ್, ರಾಕೇಶ್ ಎಂಬುವವರುಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

READ | ಟ್ಯಾಂಕ್ ಮೊಹಲ್ಲಾದಲ್ಲಿ ವೃದ್ಧನ ಮೇಲೆ ಯುವಕ ಅಟ್ಯಾಕ್

ಬಸ್ ಹತ್ತಿಸಿ ಹಿಂದಿರುಗುವಾಗ ಘಟನೆ
ರಜನಿಕಾಂತ್ ಅವರು ಸ್ನೇಹಿತ ಕೋಡಿಹಳ್ಳಿ ರವಿ ಅವರಿಗೆ ಬೆಂಗಳೂರು ಬಸ್ ಹತ್ತಿಸಲು ಶಿರಾಳಕೊಪ್ಪಕ್ಕೆ‌ ಬಂದಿದ್ದಾರೆ. ಬಸ್ ಹತ್ತಿಸಿ ವಾಪಸ್ ತೆರಳುವಾಗ ಡಾಬಾಕ್ಕೆ ಊಟಕ್ಕೆಂದು ತೆರಳಿದ್ದಾರೆ. ಆಗ ಕ್ರಿಕೆಟ್ ವಿಚಾರವಾಗಿ ಗಲಾಟೆ ನಡೆದಿದೆ. ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

error: Content is protected !!