ಸ್ಕೂಟಿಯಲ್ಲಿಟ್ಟಿದ್ದ 2.40 ಲಕ್ಷ ರೂ. ನಾಪತ್ತೆ, ಸಿಸಿ ಟಿವಿಯಲ್ಲಿ ಖದೀಮರ ದೃಶ್ಯ ಸೆರೆ

 

 

ಸುದ್ದಿ ಕಣಜ.ಕಾಂ | TALUK | CRIME NEWS
ತೀರ್ಥಹಳ್ಳಿ: ಸ್ಕೂಟಿಯಲ್ಲಿ ಇಡಲಾಗಿದ್ದ 2.40 ಲಕ್ಷ ರೂಪಾಯಿ ಹಣವನ್ನು ಕಳವು ಮಾಡಿರುವ ಘಟನೆ ಮುಖ್ಯ ಬಸ್ ನಿಲ್ದಾಣದಲ್ಲಿ ನಡೆದಿದೆ. ಇದರ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಹೆದ್ದೂರು ಸಮೀಪದ ಸಂತೆಕೊಪ್ಪ ನಿವಾಸಿ ಸುಧಾಕರ್ ಎಂಬುವವರು ಹಣ ಕಳೆದುಕೊಂಡಿದ್ದಾರೆ.

ಸಾಲ ಮರುಪಾವತಿಗೆ ತಂದಿದ್ದ ಹಣ
ಬ್ಯಾಂಕ್ ಸಾಲವನ್ನು ಮರುಪಾವತಿ ಮಾಡಬೇಕು ಎಂಬ ಉದ್ದೇಶದಿಂದ ಪಟ್ಟಣದ ಡಿಸಿಸಿ ಬ್ಯಾಂಕ್ ಶಾಖೆಯಿಂದ 2.40 ಲಕ್ಷ ರೂಪಾಯಿಯನ್ನು ಡ್ರಾ ಮಾಡಿಕೊಂಡು ಬಂದಿದ್ದ ಸುಧಾಕರ್ ಅವರು ಸ್ಕೂಟಿಯಲ್ಲಿ ಹಣವನ್ನು ಇಟ್ಟು ಬಟ್ಟೆ ಖರೀದಿಸುವುದಕ್ಕಾಗಿ ಅಂಗಡಿಗೆ ತೆರಳಿದ್ದಾರೆ. ಆ ವೇಳೆ ಕಳ್ಳತನ ಮಾಡಲಾಗಿದೆ. ವಾಪಸ್ ಬಂದು ನೋಡಿದಾಗ ಹಣ ಇರಲಿಲ್ಲ.
ಸಿಸಿ ಟಿವಿಯಲ್ಲಿ ಕಳ್ಳತನ ಸೆರೆ
ಸುಧಾಕರ್ ಅವರು ಬ್ಯಾಂಕ್ ನಿಂದ ಹಣವನ್ನು ಡ್ರಾ ಮಾಡಿಕೊಂಡು ಬರುವುದನ್ನು ನಾಲ್ವರು ಗಮನಿಸಿದ್ದಾರೆ. ಅವರ ಮೇಲೆಯೇ ಕಣ್ಣಿಟ್ಟು ಹಿಂಬಾಲಿಸಿದ್ದಾರೆ. ಅವರು ಸ್ಕೂಟಿಯಲ್ಲಿ ಹಣವಿಟ್ಟು ಹೋಗಿದ್ದನ್ನು ಗಮನಿಸಿಯೇ ಕೃತ್ಯ ಎಸಗಲಾಗಿದೆ ಎಂದು ಹೇಳಲಾಗಿದೆ.
ಹಣ ದೋಚಿದವರು ತಮಿಳುನಾಡಿನ ಮೂಲದವರೆಂದು ಶಂಕೆ ವ್ಯಕ್ತಪಡಿಸಲಾಗಿದದೆ. ಕಳ್ಳತನದ ದೃಶ್ಯವು ಬಸ್ ನಿಲ್ದಾಣದ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿರುವುದರಿಂದ ಪೊಲೀಸರ ತನಿಖೆಗೆ ಅನುಕೂಲವಾಗಲಿದೆ.

error: Content is protected !!