ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಉತ್ತರ ಕನ್ನಡ ಜಿಲ್ಲೆಯಲ್ಲಿ ಜನರ ನಿದ್ದೆ ಗೆಡಿಸಿರುವ ಕ್ಯಾಸನೂರು ಅರಣ್ಯ ಕಾಯಿಲೆ (ಕೆ.ಎಫ್.ಡಿ) ಈಗ ಶಿವಮೊಗ್ಗ ಜಿಲ್ಲೆಯಲ್ಲೂ ಉಲ್ಬಣಿಸಿದೆ.
ಭಾನುವಾರವೊಂದೇ ದಿನ 11 ಜನರಿಗೆ ಕೆ.ಎಫ್.ಡಿ ಪಾಸಿಟಿವ್ ಬಂದಿದೆ. ಶಿವಮೊಗ್ಗದಲ್ಲಿ ಕಾಯಿಲೆಯ ಳ್ಷಣ ಹೊಂದಿರುವ ಒಟ್ಟು 18 ಜನರ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರಲ್ಲಿ 11 ಪಾಸಿಟಿವ್ ಬಂದಿವೆ.
READ | ಮಲೆನಾಡಿಗರಿಗೆ ಶುಭ ಸುದ್ದಿ, ಶೀಘ್ರವೇ ಬರಲಿದೆ ಕೆ.ಎಫ್.ಡಿಗೆ ಹೊಸ ಲಸಿಕೆ
ಮತ್ತೆ ಹಾಟ್ ಸ್ಪಾಟ್ ಗಳಲ್ಲೇ ಆತಂಕ
ಜಿಲ್ಲೆಯಲ್ಲಿ ತೀರ್ಥಹಳ್ಳಿ ಮತ್ತು ಹೊಸನಗರ ಹಾಟ್ ಸ್ಪಾಟ್ ಆಗಿದ್ದು, ಮತ್ತೆ ಇದೇ ತಾಲೂಕುಗಳಲ್ಲಿ ಪ್ರಕರಣಗಳು ದೃಢಪಟ್ಟಿವೆ. ತೀರ್ಥಹಳ್ಳಿಯಲ್ಲಿ ಮೂರು ಹಾಗೂ ಹೊಸನಗರದಲ್ಲಿ ಎಂಟು ಪಾಸಿಟಿವ್ ಬಂದಿವೆ.
ರಾಜ್ಯದಲ್ಲಿ ಕೆ.ಎಫ್.ಡಿ ಹೆಚ್ಚಳ
ರಾಜ್ಯದ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಪ್ರಸ್ತುತ ಕೆ.ಎಫ್.ಡಿ. ಹಾಟ್ ಸ್ಪಾಟ್ ಗಳಾಗಿದ್ದು, ಈ ಎಲ್ಲ ಜಿಲ್ಲೆಗಳಲ್ಲಿ ಮಾದರಿ ಪರೀಕ್ಷೆ ನಡೆಸಲಾಗುತ್ತಿದೆ. ಭಾನುವಾರದಂದು 19 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಅದರಲ್ಲಿ 11 ದೃಢಪಟ್ಟಿವೆ.
ರಾಜ್ಯದಲ್ಲಿ ಒಟ್ಟು 64 ಕೆ.ಎಫ್.ಡಿ. ಪ್ರಕರಣಗಳು ದೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳಿವೆ. ಒಬ್ಬರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.