ಶಿವಮೊಗ್ಗದ ಎನ್.ಟಿ ರಸ್ತೆಯಲ್ಲಿ ಮರ್ಡರ್, ಇಬ್ಬರು ಅರೆಸ್ಟ್

 

 

ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಟಿಪ್ಪುನಗರದ ನಿವಾಸಿ ಜಿಕೃಲ್ಲಾ ಖಾನ್ (28) ಕೊಲೆ ಪ್ರಕರಣ ಸಂಬಂಧ ಇಬ್ಬರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಟೆಂಪೋ ಸ್ಟಾಂಡ್ 3ನೆ ತಿರುವು ನಿವಾಸಿ ನಬೀಲ್ ಅಲಿಯಾಸ್ ಗಜ(20), ಮಂಜುನಾಥ ಬಡಾವಣೆಯ ಇಮ್ರಾನ್ ಅಲಿಯಾಸ್ ಟ್ವಿಸ್ಟ್(30) ಬಂಧಿತರು.

READ | ಲವ್, ಸೆಕ್ಸ್, ಧೋಖಾ, ಅತಿಥಿ ಉಪನ್ಯಾಸಕಿ ಆತ್ಮಹತ್ಯೆ

ಹಳೆ ದ್ವೇಷದಿಂದ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ
ಈತ ಫಲಕ್ ಶಾದಿ ಮಹಲ್ ರಸ್ತೆಯ ಪಕ್ಕದಲ್ಲಿ ನಿಂತಿದ್ದಾಗ ಟ್ವಿಸ್ಟ್ ಇಮ್ರಾನ್ ಮತ್ತು ಗ್ಯಾಸ್ ಇಮ್ರಾನ್ ಅವರುಗಳು ಹಳೆ ದ್ವೇಷದ ಹಿನ್ನೆಲೆಯಲ್ಲಿ ಶಹಬಾಜ್, ರುಮಾನ್, ವಸೀಮ್, ಕಾಲಾ ವಸೀಮ್ ಮತ್ತು ನಬೀಲ್ ಅವರೊಂದಿಗೆ ಸೇರಿ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.
ಜಿಕೃಲ್ಲಾ ಖಾನ್ ಹಾಗೂ ಗ್ಯಾಸ್ ಇಮ್ರಾನ್ ಗೂ ಈ ಹಿಂದೆ ಕಾರ್ ಪಾರ್ಕಿಂಗ್ ಮಾಡುವ ವಿಚಾರವಾಗಿ ಜಗಳವಾಗಿತ್ತು. ನಂತರ ಗ್ಯಾಸ್ ಇಮ್ರಾನ್ ನ ತಂದೆ ಅಯೂಬ್ ಖಾನ್ ಅವರು ಜಿಕೃಲ್ಲಾ ಖಾನ್ ಗ್ಯಾಸ್ ಅಂಗಡಿಗೆ ಬಂದು ಮೊಬೈಲ್ ಕಿತ್ತುಕೊಂಡು ಹೋಗಿರುವುದಾಗಿ ದೂರು ನೀಡಿದ್ದರು. ಟ್ವಿಸ್ಟ್ ಇಮ್ರಾನ್ ನೊಂದಿಗೂ ಕೂಡ ಸಣ್ಣ ಪುಟ್ಟ ವಿಚಾರಗಳಿಗೆ ಜಗಳವಾಗಿರುತ್ತದೆ. ಹಳೆ ವೈಷಮ್ಯ ಹಿನ್ನೆಲೆ ಶನಿವಾರ ರಾತ್ರಿ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಗಾಯಗೊಂಡ ಜಿಕೃಲ್ಲಾಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ‌. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಆರೋಪಿಗಳ‌ ವಿರುದ್ಧ ಐಪಿಸಿ ಕಲಂ 143, 147, 148, 302, 114 ಸಹಿತ 149 ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

error: Content is protected !!