ಈಶ್ವರಪ್ಪ ಅವರಿಗಾಗಿ ಕೋಟೆ ಮಾರಿಕಾಂಬ ದೇವಸ್ಥಾನದಲ್ಲಿ 101 ಈಡುಗಾಯಿ ಸಮರ್ಪಿಸಿದ ಮಹಿಳೆಯರು

 

 

ಸುದ್ದಿ ಕಣಜ.ಕಾಂ | DISTRICT | KS ESHWARAPPA
ಶಿವಮೊಗ್ಗ: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ದೋಷ ವಿಮೋಚನೆಗೊಳ್ಳಲಿ ಎಂದು ಪ್ರಾರ್ಥಿಸಿ ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನದಲ್ಲಿ ಮಂಗಳವಾರ 101 ಈಡುಗಾಯಿಗಳನ್ನು ಸಮರ್ಪಿಸಲಾಯಿತು.

ಮಾರಿಕಾಂಬ ಟ್ರಸ್ಟ್ ನ ಮಹಿಳಾ ಸಂಯೋಜಕರು ಈಶ್ವರಪ್ಪ ಅವರಿಗಾಗಿ ವಿಶೇಷ ಪೂಜೆ ಸಲ್ಲಿಸಿದರು. ಯಾವುದೇ ಕಪ್ಪು ಚುಕ್ಕೆ ಇಲ್ಲದೇ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಈಗ ಅಂಟಿಕೊಂಡಿರುವ ಆರೋಪಗಳಿಂದ ಹೊರಬೇಕೆಂದು ಅಮ್ಮನವರಲ್ಲಿ ಪ್ರಾರ್ಥನೆ ಮಾಡಲಾಯಿತು.
ಪ್ರಮುಖರಾದ ಸೀತಾಲಕ್ಷ್ಮಿ, ಅನಿತಾ ಮಂಜುನಾಥ್, ಲಕ್ಷ್ಮಿ ಶಂಕರನಾಯ್ಕ್, ಸುನೀತಾ ಮೋಹನ್, ಮಂಜುಳಾ, ಪ್ರೀತಾ ಬಾಬು, ಕೆಂಪಮ್ಮ, ನಾಗವೇಣಿ, ಮಾಲಾ, ವರಲಕ್ಷ್ಮಿ, ಶಕುಂತಲ, ರಶ್ಮಿ, ಅನಿತಾ ಉಪಸ್ಥಿತರಿದ್ದರು.

error: Content is protected !!