5ಜಿ ಟಾವರ್ ಸ್ಥಾಪನೆ ಅಗ್ರಿಮೆಂಟ್ ಕಳುಹಿಸಿ ಲಕ್ಷಾಂತರ ರೂ. ಮೋಸ

 

 

ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: 5ಜಿ ಟಾವರ್ ಸ್ಥಾಪನೆಯ ಹೆಸರಿನಲ್ಲಿ 2.29 ಲಕ್ಷ ರೂ. ಪಡೆದ ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ತಾಲೂಕಿನ ಬಿದಿರೆ ವ್ಯಕ್ತಿಯೊಬ್ಬರು ಮೋಸ ಹೋಗಿದ್ದಾರೆ. ಇವರಿಗೆ ಫೆಬ್ರವರಿ 26ರ ಬೆಳಗ್ಗೆ ಸಂದೇಶ ಬಂದಿದ್ದು, ಅದರಲ್ಲಿ ಜಮೀನಿನ ಮಹಡಿಯ ಮೇಲೆ 5ಜಿ ಟಾವರ್ ಹಾಕಲು ಅವಕಾಶ ನೀಡಿದರೆ, 60 ಲಕ್ಷ ರೂ. ಮುಂಗಡ ಹಾಗೂ ಮಾಸಿಕ 50,000 ರೂಪಾಯಿ ಬಾಡಿಗೆ ನೀಡುವುದಾಗಿ ತಿಳಿಸಲಾಗಿತ್ತು.

ಮೋಸ ಹೋಗಿದ್ದು ಹೇಗೆ?
ಒಂದುವೇಳೆ, ಟಾವರ್ ಸ್ಥಾಪನೆಗೆ ಆಸಕ್ತಿ ಹೊಂದಿದ್ದರೆ ಸಂದೇಶದಲ್ಲಿ ನಮೂದಿಸಿದ್ದ ಫೋನ್ ಪೇ ಸಂಖ್ಯೆಗೆ 1,100 ರೂಪಾಯಿ ಹಣ ಸಂದಾಯ ಮಾಡುವಂತೆ ತಿಳಿಸಲಾಗಿತ್ತು. ಅದರಂತೆ, ಹಣವನ್ನು ಕಳುಹಿಸಿದ್ದಾರೆ.
ಮಾರ್ಚ್ 16ರ ಸಂಜೆ ಬಿದಿರೆಯ ವ್ಯಕ್ತಿಗೆ ರೆಜಿಸ್ಟ್ರಾರ್ ಪೋಸ್ಟ್ ಬಂದಿದ್ದು, ಅದರಲ್ಲಿ ಅಗ್ರಿಮೆಂಟ್ ಮಾಡಿರುವ ಪ್ರತಿ ಮತ್ತು ಗ್ರಾಹಕರ ಅರ್ಜಿಯ ಪ್ರತಿಯನ್ನು ಕಳುಹಿಸಲಾಗಿತ್ತ. ಅದರಲ್ಲಿ ಮುಂಬೈ ವಿಳಾಸವಿತ್ತು. ವಿವಿಧ ಚಾರ್ಜ್ ಗಳಿದ್ದು ಅದಕ್ಕಾಗಿ ಹಣ ಸಂದಾಯ ಮಾಡುವಂತೆ ತಿಳಿಸಲಾಗಿದೆ. ಅದನ್ನು ನಂಬಿ ಹಂತ ಹಂತವಾಗಿ ಒಟ್ಟು 2,29,599 ರೂಪಾಯಿ ವಿವಿಧ ಖಾತೆಗೆ ಕಳುಹಿಸಿದ್ದಾರೆ. ಹಣ ಪಡೆದ ಬಳಿಕ ಟಾವರ್ ಸ್ಥಾಪಿಸದೇ ಹಣವನ್ನೂ ವಾಪಸ್ ನೀಡದೇ ಮೋಸ ಮಾಡಲಾಗಿದೆ ಎಂದು ದೂರು ನೀಡಲಾಗಿದೆ. ಶಿವಮೊಗ್ಗ ಎಸ್.ಇ.ಎನ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!