ಐಟಿಐ, ಡಿಪ್ಲೋಮಾ, ಎಂಜಿನಿಯರಿಂಗ್ ಪಾಸ್ ಆದವರಿಗೆ ECIL ನಲ್ಲಿ ಉದ್ಯೋಗ, ನಡೆಯಲಿದೆ ಸಂದರ್ಶನ

 

 

ಸುದ್ದಿ ಕಣಜ.ಕಾಂ | KARNATAKA | JOB JUNCTION
ಬೆಂಗಳೂರು: (ECIL Recruitment 2022) ಎಲೆಕ್ಟ್ರಾನಿಕ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (Electronics Corporation of India Limited) 19 ಟೆಕ್ನಿಕಲ್ ಆಫಿಸರ್ (Technical Officer) ಮತ್ತು ಸೈಂಟಿಫಿಕ್ ಅಸಿಸ್ಟೆಂಟ್ (Scientific Assistant) ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದ್ದು, ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಸಂದರ್ಶನ ನಡೆಯಲಿದೆ. ಆಸಕ್ತರು ಭಾಗವಹಿಸಬಹುದು.
ಹುದ್ದೆಗಳಿಗೆ ಲಿಖಿತ ಪರೀಕ್ಷೆ, ಟ್ರೇಡ್ ಟೆಸ್ಟ್ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಏಪ್ರಿಲ್ 12ರಂದು ದೇಶದ ವಿವಿಧೆಡೆ ಸಂದರ್ಶನ ನಡೆಯಲಿದ್ದು, ಕರ್ನಾಟಕದ ಅಭ್ಯರ್ಥಿಗಳಿಗೆ Bengaluru & Kaiga (South Zone/B): No. 1/1, 2nd floor, LIC Building, Sampige Road, Malleswaram, Bengaluru – 560003ನಲ್ಲಿ ನಡೆಯಲಿದೆ. ಆಸಕ್ತರು ಅಗತ್ಯ ದಾಖಲೆಗಳೊಂದಿಗೆ ಹಾಜರಾಗತಕ್ಕದ್ದು.

JOBS FB Link

ಸಂಸ್ಥೆ ಎಲೆಕ್ಟ್ರಾನಿಕ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಇಸಿಐಎಲ್)
ಹುದ್ದೆಗಳ ಸಂಖ್ಯೆ 19
ಉದ್ಯೋಗ ಸ್ಥಳ ದೇಶಾದ್ಯಂತ
ವೇತನ ಶ್ರೇಣಿ ಮಾಸಿಕ 18,824 ರಿಂದ 25,000
ಹುದ್ದೆ ಹೆಸರು ಹುದ್ದೆಗಳ ಸಂಖ್ಯೆ
ಟೆಕ್ನಿಕಲ್ ಆಫಿಸರ್ 13
ಸೈಂಟಿಫಿಕ್ ಅಸಿಸ್ಟೆಂಟ್ 4
ಸೀನಿಯರ್ ಆರ್ಟಿಸನ್ 1
ಜೂನಿಯರ್ ಆರ್ಟಿಸನ್ 1
ಒಟ್ಟು 19

READ | ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಗ್ರಿ ಪಾಸ್ ಆದವರಿಗೆ AIATSLನಲ್ಲಿ ಉದ್ಯೋಗ, 1,184 ಹುದ್ದೆಗಳಿಗೆ ನಡೆಯಲಿದೆ ಸಂದರ್ಶನ

ವಿದ್ಯಾರ್ಹತೆ ಮತ್ತು ವಯೋಮಿತಿ ವಿವರ

  • ಟೆಕ್ನಿಕಲ್ ಆಫಿಸರ್ ಹುದ್ದೆಗೆ ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯೂನಿಕೇಷನ್ ಎಂಜಿನಿಯರಿಂಗ್/ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ನಲ್ಲಿ ಪದವಿ. ಗರಿಷ್ಠ 30 ವರ್ಷ
  • ಸೈಂಟಿಫಿಕ್ ಅಸಿಸ್ಟೆಂಟ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್/ ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯೂನಿಕೇಷನ್ ಎಂಜಿನಿಯರಿಂಗ್/ ಎಲೆಕ್ಟ್ರಿಕಲ್. ಗರಿಷ್ಠ 30 ವರ್ಷ
  • ಸೀನಿಯರ್ ಹಾಗೂ ಜೂನಿಯರ್ ಆರ್ಟಿಸನ್ ಹುದ್ದೆಗೆ ಐಟಿಐ ವಿದ್ಯಾರ್ಹತೆ ಹೊಂದಿರಬೇಕು. ಗರಿಷ್ಠ 25 ವರ್ಷ. ಮೇಲಿನ ಎಲ್ಲ ಹುದ್ದೆಗಳಿಗೆ ವಯೋಮಿತಿ ಸಡಿಲೀಕರಣ ಅನ್ವಯವಾಗಲಿದ್ದು, ಮಾಹಿತಿಗಾಗಿ ಅಧಿಸೂಚನೆಯನ್ನು ಓದಿ.

NOTIFICATION

APPLICATION FORM

WEBSITE

error: Content is protected !!