Arrest | ಭದ್ರಾವತಿ ಪೊಲೀಸರ ಭರ್ಜರಿ ಕಾರ್ಯಾಚರಣೆ, ಆರೋಪಿ ಅರೆಸ್ಟ್, ಆತನ ಬಳಿ ಸಿಕ್ಕಿದ್ದೇನು?

Bike theft

 

 

ಸುದ್ದಿ ಕಣಜ.ಕಾಂ ಭದ್ರಾವತಿ
BHADRAVATHI: ಭದ್ರಾವತಿ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದು, ಆತನ ಬಳಿಯಿಂದ ಎರಡು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗ ಮತ್ತು ಭದ್ರಾವತಿ ಠಾಣೆ ವ್ಯಾಪ್ತಿಯಲ್ಲಿ ಕಳವಾಗಿದ್ದ ಎರಡು ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಭದ್ರಾವತಿಯ ಬೆಳಕಟ್ಟೆ ಗ್ರಾಮದ ಪ್ರಭು ಅಲಿಯಾಸ್ ಕೋಳಿ(28) ಎಂಬಾತನನ್ನು ಬಂಧಿಸಲಾಗಿದೆ.

READ | ಶಿವಮೊಗ್ಗದ ಸ್ಪಾ ಮೇಲೆ ಪೊಲೀಸರ ದಿಢೀರ್ ದಾಳಿ, ಮುಂದೇನಾಯ್ತು?

ಆರೋಪಿ ಬಳಿ ಸಿಕ್ಕಿದವು ಎರಡು ದ್ವಿಚಕ್ರ ವಾಹನ
ಆರೋಪಿತನಿಂದ ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆಯ (Bhadravathi Old Town Police station) 1 ಮತ್ತು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ (Shimoga rural police station) 1 ದ್ವಿಚಕ್ರ ವಾಹನ ಕಳ್ಳತನ ಪ್ರಕರಣ ಸೇರಿ ಒಟ್ಟು 2 ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು 80 ಸಾವಿರ ರೂ. ಮೌಲ್ಯದ 2 ದ್ವಿ ಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಎಟಿಎಂ ಮುಂದೆ ನಿಲ್ಲಿಸಿದ್ದ ಬೈಕ್ ಕಳವು
ಜೂ.15ರಂದು ಭದ್ರಾವತಿಯ ಅನ್ವರ್ ಕಾಲೋನಿಯ ವ್ಯಕ್ತಿಯೊಬ್ಬರು ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೆನರಾ ಬ್ಯಾಂಕ್ ಎಟಿಎಂ ಮುಂದೆ ತಮ್ಮ ಟಿವಿಎಸ್ ವಿಕ್ಟರ್ ಬೈಕ್ ಅನ್ನು ನಿಲ್ಲಿಸಿದ್ದರು. ಅದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಪ್ರಕರಣ ದಾಖಲಾಗಿತ್ತು.
ಪ್ರಕರಣ ಬೇಧಿಸಿದ ತಂಡ
ಪ್ರಕರಣದಲ್ಲಿ ಕಳವಾದ ಬೈಕ್ ಮತ್ತು ಆರೋಪಿತರ ಪತ್ತೆಗಾಗಿ ಎಸ್‍ಪಿ ಮಿಥುನ್ ಕುಮಾರ್, ಹೆಚ್ಚುವರಿ ಎಸ್.ಪಿ. ಅನಿಲ್ ಕುಮಾರ್ ಭೂಮರಡ್ಡಿ ಮಾರ್ಗದರ್ಶನದಲ್ಲಿ ಭದ್ರಾವತಿ ಉಪ ವಿಭಾಗದ ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕ ಜಿತೇಂದ್ರ ಕುಮಾರ ದಯಮ, ಭದ್ರಾವತಿ ನಗರ ವೃತ್ತದ ಸಿಪಿಐ ರಾಘವೇಂದ್ರ ಕಾಂಡಿಕೆ ಮಾರ್ಗದರ್ಶನದಲ್ಲಿ ಪಿಎಸ್.ಐ ಶರಣಪ್ಪ ಹಂಡ್ರುಗಲ್ ನೇತೃತ್ವದ ಹಾಲಪ್ಪ, ಚಿನ್ನ ನಾಯಕ್, ಮೌನೇಶ್, ನಾರಾಯಣಸ್ವಾಮಿ, ಚಿಕ್ಕಪ್ಪ, ವಿಜಯ್ ಕುಮಾರ್ ಅವರನ್ನು ಒಳಗೊಂಡ ತಂಡವನ್ನು ರಚಿಸಲಾಗಿತ್ತು. ತಂಡವು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Online Fraud | ಆನ್’ಲೈನ್ ಉದ್ಯೋಗ ನಂಬಿ ಎರಡನೇ ದಿನದಲ್ಲಿ 3.31 ಲಕ್ಷ ರೂ. ಕಳೆದುಕೊಂಡ ಯುವಕ!

error: Content is protected !!