ಮನೆ ಸಮೀಪದ ಕಾಡಿನಲ್ಲಿ ವಿಷ ಸೇವಿಸಿ ರೈತ ಆತ್ಮಹತ್ಯೆ

 

 

ಸುದ್ದಿ ಕಣಜ.ಕಾಂ | TALUK | CRIME NEWS
ಹೊಸನಗರ: ತಾಲೂಕಿನ ಮಂಡ್ರಿ ಗ್ರಾಮದ ರೈತರೊಬ್ಬರು ಸಾಲಬಾಧೆಯಿಂದ ಮೃತಪಟ್ಟಿದ್ದಾರೆ.
ನಾಗರಾಜ್(58) ಮೃತ ರೈತ. ಇವರು ಮನೆಯ ಸಮೀಪದ ಕಾಡಿನಲ್ಲಿ ವಿಷ ಸೇವಿಸಿದ್ದರು. ತಕ್ಷಣ ಅಸ್ವಸ್ಥಗೊಂಡ ಇವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಜಮೀನು ಅಭಿವೃದ್ಧಿಗೋಸ್ಕರ ಬ್ಯಾಂಕ್ ಮತ್ತು ಸಹಕಾರ ಸಂಘಗಳಲ್ಲಿ ಸಾಲ ಮಾಡಿದ್ದರು. ಹೊಸನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!