ಸುದ್ದಿ ಕಣಜ.ಕಾಂ | CITY | POWER CUT
ಶಿವಮೊಗ್ಗ: ನಗರ ವ್ಯಾಪ್ತಿಯಲ್ಲಿ ಎರಡು ದಿನ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹರಿಕಸಬೇಕು ಎಂದು ಮೆಸ್ಕಾಂ ಮನವಿ ಮಾಡಿದ್ದಾರೆ.
ಆಲ್ಕೊಳ ವಿದ್ಯುತ್ ವಿತರಣೆ ಕೇಂದ್ರದ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಏಪ್ರಿಲ್ 24ರಂದು ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ ನೀಲ ಮೇಘಮ್ ಲೇಔಟ್, ರಾಜ್ ಮಹಲ್ ಬಡಾವಣೆ, ಪೊಲೀಸ್ ಲೇಔಟ್, ಎಲ್.ಐ.ಸಿ.ಕಚೇರಿ, ಗೋಪಾಳಗೌಡ ಬಡಾವಣೆ ಎ.ಬಿ.ಸಿ.ಡಿ.ಇ.ಎಫ್ ಬ್ಲಾಕ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ನ.ಉ.ವಿ.-3ರ ಎಇಇ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏ.25ರಂದು ವಿದ್ಯುತ್ ವ್ಯತ್ಯಯ
ಮಂಡ್ಲಿ ವಿದ್ಯುತ್ ವಿತರಣೆ ಕೇಂದ್ರದ ವ್ಯಾಪ್ತಿಯಲ್ಲಿ ಗಾಜನೂರು, ರಾಮಿನಕೊಪ್ಪ, ಹಾಯ್‍ಹೊಳೆ ಮಾರ್ಗದಲ್ಲಿ ನಿರಂತರ ಜ್ಯೋತಿ ಕೇಬಲ್ ಬದಲಾಯಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಏಪ್ರಿಲ್ 25 ರಂದು ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ಗಾಜನೂರು, ಹೊಸಳ್ಳಿ, ರಾಮೇನಕೊಪ್ಪ, ಕಲ್ಲೂರು, ಹೊಸಹೊನ್ನಾಪುರ, ಆಗಸವಳ್ಳಿ, ಲಕ್ಷ್ಮೀಪುರ, ಹರಕೆರೆ, ಪೇಪರ್ ಪ್ಯಾಕೇಜ್, ಶಂಕರ ಕಣ್ಣಿನ ಆಸ್ಪತ್ರೆ, ಹಳೇಮಂಡ್ಲಿ, ಅಮೃತ್ ರೈಸ್‍ಮಿಲ್, ಮಂಜುನಾಥ ರೈಸ್‍ಮಿಲ್, ಬೆನಕೇಶ್ವರ ರೈಸ್‍ಮಿಲ್, ಬಿ.ಡಿ.ಎಂ.ರೈಸ್‍ಮಿಲ್, ನಾರಾಯಣ ಹೃದಯಾಲಯ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.