ಬಿಜೆಪಿ ಮುಖಂಡ ಭಾನುಪ್ರಕಾಶ್ ಪುತ್ರನಿದ್ದ ಕಾರಿನ ಮೇಲೆ ಅಟ್ಯಾಕ್, ಕೆಲಹೊತ್ತು ಉದ್ವಿಗ್ನ ಸ್ಥಿತಿ

ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ನಗರದ ಹೊರವಲಯದಲ್ಲಿರುವ ಇಂದಿರಾನಗರ ಬಳಿ ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಂಚಾಲಕ ಭಾನುಪ್ರಕಾಶ್ ಅವರ ಪುತ್ರನಿದ್ದ ಕಾರಿನ ಮೇಲೆ ಶುಕ್ರವಾರ ರಾತ್ರಿ ಅಟ್ಯಾಕ್ ಮಾಡಲಾಗಿದೆ. ಈ ಘಟನೆಯ ಬಗ್ಗೆ ಮಾಹಿತಿ ಗೊತ್ತಾಗಿದ್ದೇ ಮತ್ತೂರು ಗ್ರಾಮಸ್ಥರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ.
ಭಾನುಪ್ರಕಾಶ್ ಅವರ ಪುತ್ರ ಹರಿಕೃಷ್ಣ ಅವರಿದ್ದ ಕಾರಿನ ಮೇಲೆ ಬೈಕ್ ನಲ್ಲಿ ಬಂದ ಕೆಲವರು ದಾಳಿ ಮಾಡಿದ್ದಾರೆ. ಇವರು ಶಿವಮೊಗ್ಗದಿಂದ ಮತ್ತೂರಿಗೆ ಹೋಗುತ್ತಿದ್ದಾಗ ಘಟನೆ ನಡೆದಿದೆ.

READ | ಶಿವಮೊಗ್ಗದಲ್ಲಿ ಇಂದಿನಿಂದ ‘ಪುನೀತ್ ರಾಜಕುಮಾರ್ ಕಪ್’ ರಾಷ್ಟ್ರಮಟ್ಟದ ಫುಟ್ಬಾಲ್ ಪಂದ್ಯಾವಳಿ, ವಿವಿಧ ರಾಜ್ಯಗಳ ತಂಡಗಳು ಭಾಗಿ

ಕೆಲಹೊತ್ತಲ್ಲೇ ಖಾಕಿ ಸರ್ಪಗಾವಲು
ಕಾರಿನ ಮೇಲೆ ದಾಳಿ ಮಾಡಿದ ಪರಿಣಾಮ ಹಿಂಬದಿಯ ಗಾಜು ಪುಡಿಪುಡಿಯಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ನಗರದಲ್ಲಿರುವ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ತುಂಗಾನಗರ ಪೊಲೀಸರು ಘಟನೆಯ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಇದುವರೆಗೆ ಕಿಡಿಗೇಡಿಗಳ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.