ಶಿವಮೊಗ್ಗದಲ್ಲಿ ಭಾರೀ ಮಳೆ, ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು, ಶುರುವಾಯ್ತು ರೆಸ್ಕ್ಯೂ ಆಪರೇಷನ್

Shivamogga rain

 

 

ಸುದ್ದಿ ಕಣಜ.ಕಾಂ | DISTRICT | SHIVAMOGGA RAIN
ಶಿವಮೊಗ್ಗ: ಚಂಡಮಾರುತದಿಂದಾಗಿ ನಿರಂತರ ಮಳೆ ಸುರಿಯುತ್ತಿದ್ದು, ನಗರದ ಹಲವು ಪ್ರದೇಶಗಳಿಗೆ ನೀರು ನುಗ್ಗಿದೆ. ಅಗ್ನಿಶಾಮಕ ದಳದಿಂದ ಸಾರ್ವಜನಿಕರ ರಕ್ಷಣಾ ಕಾರ್ಯ ಕೂಡ ನಡೆಸಲಾಗುತ್ತಿದೆ.
ಹವಾಮಾನ ಇಲಾಖೆ ನೀಡಿದ ಮುನ್ಸೂಚನೆಯಂತೆ ಜಿಲ್ಲೆಯಾದ್ಯಂತ ಬಿಟ್ಟೂ ಬಿಡದೇ ನಿರಂತರ ಮಳೆ ಸುರಿಯುತ್ತಿದೆ. ಹೀಗಾಗಿ, ತಗ್ಗುಪ್ರದೇಶಗಳಿಗೆ ನೀರು ನುಗ್ಗಿದ್ದು, ಮನೆಯೊಳಗಡೆಯೂ ನೀರು ತುಂಬಿಕೊಂಡಿದೆ. ಅದನ್ನು ಹೊರಗಡೆ ತೆಗೆಯುವುದಕ್ಕಾಗಿ ಹರಸಾಹಸ ಪಡಸಲಾಗುತ್ತಿದೆ.

READ | ಶಿವಮೊಗ್ಗದಲ್ಲಿ ರೆಡ್ ಅಲರ್ಟ್, ಇಂದೆಷ್ಟು ಮಳೆಯಾಗುವ ಸಾಧ್ಯತೆ ಇದೆ?

ನಗರ ಅಮೀರ್ ಅಹ್ಮದ್ ವೃತ್ತ, ಬಿ.ಎಚ್.ರಸ್ತೆಯಲ್ಲು ಸಹ ಒಂದು ಅಡಿಯಷ್ಟು ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿರುವ ರಸ್ತೆಗಳಂತೂ ಅಕ್ಷರಶಃ ಕೆರೆಗಳಾಗಿ ಮಾರ್ಪಟ್ಟಿವೆ. ಗುಂಡಿಗಳಿಂದಾಗಿ ಜನಸಂಚಾರಕ್ಕೆ ತೊಂದರೆಯಾಗಿದೆ.
ಎಲ್ಲೆಲ್ಲಿ ಏನೇನು ಅನಾಹುತ
ಆರ್.ಎಂ.ಎಲ್.ನಗರದ ರಸ್ತೆಗಳು ಜಲಾವೃತಗೊಂಡಿದ್ದು, ಮನೆಯೊಳಗಡೆ ನೀರು ನುಗ್ಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯ ಬೆಳಗ್ಗೆಯಿಂದ ನಡೆಸುತ್ತಿದ್ದಾರೆ. ಅಮೀರ್ ಅಹ್ಮದ್ ಕಾಲೋನಿಯ ನೂರಡಿ ರಸ್ತೆಯ ಬಸವನಗುಡಿ ಭಾಗದಲ್ಲಿಯೂ ರಸ್ತೆಯ ನೀರಿನಿಂದ ತುಂಬಿಕೊಂಡಿದೆ.
ನಗರದೊಳಗಡೆಯಿಂದ ಹರಿದುಹೋಗುವ ಚಾನಲ್ ಗಳು ಭರ್ತಿಯಾಗಿದ್ದು, ಹಲವೆಡೆ ಮುಳುಗಡೆ ಭೀತಿ ಎದುರಾಗಿದೆ. ಮಳೆ ಇದೇ ರೀತಿ ಮುಂದುವರಿಯುವ ಸಾಧ್ಯತೆ ಇರುವುದರಿಂದ ಮತ್ತಷ್ಟು ಸಮಸ್ಯೆಯಾಗಲಿದೆ.
ವಿದ್ಯಾನಗರ, ಗೋಪಾಳ, ಊರುಗಡೂರು ಬೈಪಾಸ್ ಬಳಿಯ ಹೈಟೆಕ್ ಲೇಔಟ್ ಸಂಪೂರ್ಣ ಜಲಾವೃತವಾಗಿದೆ. ಸೇರಿದಂತೆ ಹಳೇ ಶಿವಮೊಗ್ಗದ ಹಲವು ಬಡಾವಣೆಗಳಲ್ಲಿ ಮಳೆ ಸಾಕಷ್ಟು ಅನಾಹುತ ಮಾಡಿದೆ.

RML Nagar Rainfall

https://suddikanaja.com/2021/11/14/rain-fall-in-shivamogga-3/

Leave a Reply

Your email address will not be published. Required fields are marked *

error: Content is protected !!