ರಕ್ಷಣೆಗೆಂದು‌ ನೇಮಿಸಿದ ಕಾವಲುಗಾರನಿಂದಲೇ ಲಕ್ಷಾಂತರ ಮೌಲ್ಯದ ನಾಟಾ ಸಾಗಣೆ,‌ ಇಬ್ಬರು ಅರೆಸ್ಟ್

ಸುದ್ದಿ ಕಣಜ.ಕಾಂ | DISTRICT | CRIME NEWS
ಸಾಗರ: ಕರೂರು ಹೋಬಳಿ ನಾಡಕಿರುವಾಸೆ ಗ್ರಾಮದ ಎಂ.ಪಿ.ಎಂ ಗೆ ಸೇರಿದ ಅಕೇಶಿಯ (acacia) ಮರಗಳ ನೆಡುತೋಪಿನ ರಕ್ಷಣೆಗೆ ನೇಮಿಸಿದ ಕಾವಲುಗಾರನೇ ಲಕ್ಷಾಂತರ ಮೌಲ್ಯದ ನಾಟಾಗಳನ್ನು‌ ಸಾಗಿಸಿದ್ದು, ಪ್ರಕರಣ‌ ಸಂಬಂಧ ಇಬ್ಬರನ್ನು‌ ಬಂಧಿಸಲಾಗಿದೆ.
ಕರೂರು ಗ್ರಾಮ ಮಂಜುನಾಥ(54), ಸಾಗರದ ಮಣಿಕಂಠ(27) ಬಂಧಿತರು. ಆರೋಪಿತರಿಂದ ಲಾರಿಗಳಲ್ಲಿ ತುಂಬಿದ್ದ ಒಟ್ಟು 30 ಮೆಟ್ರಿಕ್ ಟನ್ ಅಕೇಶಿಯ ಹಾಗೂ ನೀಲಗಿರಿ ಮರದ ತುಂಡುಗಳನ್ನು ಮತ್ತು ಕೃತ್ಯಕ್ಕೆ ಉಪಯೋಗಿಸಿದ 2 ಲಾರಿ ಹಾಗೂ 1 ಕಾರನ್ನು ವಶಕ್ಕೆ‌ ಪಡೆಯಲಾಗಿದೆ.

READ | ಪಿಎಸ್‍ಐ ನೇಮಕಾತಿ ಹಗರಣ, ಪ್ರಿಯಾಂಕ್ ಖರ್ಗೆ ವಿರುದ್ಧ ಗೃಹ ಸಚಿವ ಆರಗ ಜ್ಞಾನೇಂದ್ರ ವಾಗ್ದಾಳಿ

ಕಾವಲುಗಾರನಿಂದಲೇ‌ ಮರಗಳ ಕಟಾವು
ಮಂಜುನಾಥ ಎಂಬುವವರನ್ನು ಕಾವಲುಗಾರರನ್ನಾಗಿ ನೇಮಕ ಮಾಡಿಲಾಗಿರುತ್ತದೆ. ಈತ ಮೇ 15 ರಂದು ಇಲಾಖೆಯ ಅಧಿಕಾರಿಗಳ ಗಮನಕ್ಕೆ ಬಾರದಂತೆ ಅಂದಾಜು ₹1,50,000 ಮೌಲ್ಯದ ಸುಮಾರು 30 ಮೆಟ್ರಿಕ್ ಟನ್ ಅಕೇಶಿಯಾ ಮರಗಳನ್ನು ಅಕ್ರಮವಾಗಿ ಕಟಾವು ಮಾಡಿಸಿ ಮರದ ತುಂಡುಗಳನ್ನು 2 ಲಾರಿಯಲ್ಲಿ ಲೋಡ್ ಮಾಡಿ ಕಳ್ಳತನದಿಂದ ಸಾಗಾಣಿಕೆ ಮಾಡಲಾಗಿದೆ. ಈ ಪ್ರಕರಣ‌ ಸಂಬಂಧ ಸಹಾಯಕ ಅರಣ್ಯ ಅಧಿಕಾರಿಗಳು ಎಂಪಿಎಂ ಅವರು ನೀಡಿದ ದೂರಿನ ಮೇರೆಗೆ ಐಪಿಸಿ ಕಲಂ 381, 409 ರೀತ್ಯಾ ಪ್ರಕರಣ ದಾಖಲಿಸಲಾಗಿದೆ. ನಂತರ ಕಾರ್ಗಲ್ ಪೊಲೀಸ್ ಠಾಣೆ ಪಿಎಸ್ಐ ಹಾಗೂ ಸಿಬ್ಬಂದಿ ತಂಡವು ಪ್ರಕರಣದ ತನಿಖೆಯನ್ನು ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

BHADRAVATI | ಮೂರು ವರ್ಷದಿಂದ ಅಂಡರ್ ಗ್ರೌಂಡ್ ಆಗಿದ್ದ ಹೆದ್ದಾರಿ ಕಳ್ಳರನ್ನು ಬಂಧನ

Leave a Reply

Your email address will not be published.