ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕಾರ್ಮಿಕ‌‌‌ ಸಾವು

Shivamogga taluk

 

 

ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ನೆಲ ಸಮತಟ್ಟು ಮಾಡುವ (soil compressor) ಯಂತ್ರದ‌ ಕೆಳಗೆ ಸಿಲುಕಿ ಕಾರ್ಮಿಕನೊಬ್ಬ ಭಾನುವಾರ ಮೃತಪಟ್ಟಿದ್ದಾನೆ.
ವಿಮಾನ ನಿಲ್ದಾಣದಲ್ಲಿ‌ ಕೆಲಸ ಮಾಡುವಾಗ ಗದಗ ಮೂಲದ ಮಲ್ಲಿಕಾರ್ಜುನ(20) ಎಂಬಾತ ಮೃತಪಟ್ಟಿದ್ದಾನೆ. ಯಂತ್ರ ನೆಲವನ್ನು ಸಮತಟ್ಟು ಮಾಡುವಾಗ ಮಲ್ಲಿಕಾರ್ಜುನ ಎದುರು ಬಂದಿದ್ದಾನೆ. ಆಗ ಆತನ ಮೇಲೆ ಯಂತ್ರ ಹರಿದಿದೆ.
ಕಾರ್ಮಿಕ ಮೃತಪಟ್ಟಿದ್ದೇ ಆತನ ಕುಟುಂಬಕ್ಕೆ ‌ಮಾಹಿತಿ ನೀಡಲಾಗಿದೆ. ಇದುವರೆಗೆ ಶವವನ್ನು ಹಸ್ತಾಂತರಿಸಿಲ್ಲ.‌ ಕುಟುಂಬದವರು ತುಂಗಾನಗರ ಪೊಲೀಸ್ ಠಾಣೆಗೆ ಆಗಮಿಸಿದ್ದು, ದೂರು ನೀಡಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!