ಸಿಇಟಿ ಪರೀಕ್ಷೆ ಎದುರಿಸುವುದಕ್ಕೆ ಅಳುಕು ಇದೆಯೇ, ಹಾಗಾದರೆ, ಈ ಕಾರ್ಯಾಗಾರಕ್ಕೆ ಹಾಜರಾಗಿ

JNNCE

 

 

ಸುದ್ದಿ ಕಣಜ.ಕಾಂ | DISTRICT | EDUCATION CORNER 
ಶಿವಮೊಗ್ಗ: ನಗರದ ಜೆ.ಎನ್.ಎನ್. ಎಂಜಿನಿಯರಿಂಗ್ ಕಾಲೇಜಿನ ರಾಸಾಯನ ವಿಜ್ಞಾನ ವಿಭಾಗದ ವತಿಯಿಂದ ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಜೂನ್ 6 ಮತ್ತು 7ರಂದು ಆನ್ ಲೈನ್ ಮೂಲಕ ಸಿಇಟಿ, ಕಾಮೆಡ್-ಕೆ ಪರೀಕ್ಷೆ ಎದುರಿಸುವುದು ಹೇಗೆ? ಶಿಕ್ಷಣ ತಜ್ಞರಿಂದ ಎರಡು ದಿನಗಳ ಉಚಿತ ಮಾಹಿತಿ ಕಾರ್ಯಾಗಾರ ಏರ್ಪಡಿಸಲಾಗಿದೆ.
ಎರಡು ದಿನಗಳ ಈ ಕಾರ್ಯಾಗಾರದಲ್ಲಿ ಸಿಇಟಿ ಮತ್ತು ಕಾಮೆಡ್-ಕೆ ಪರೀಕ್ಷೆಯಲ್ಲಿ ಎದುರಾಗಬಹುದಾದ ಗಣಿತ ವಿಜ್ಞಾನ, ಭೌತ ವಿಜ್ಞಾನ, ರಾಸಾಯನ ವಿಜ್ಞಾನದ ಕುರಿತಾಗಿ ಹಾಗೂ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸುವ ಕುರಿತು ಶಿಕ್ಷಣ ತಜ್ಞರು ಮಾಹಿತಿ ನೀಡಲಿದ್ದಾರೆ. ಜೊತೆಗೆ ಅಣಕು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

READ | ಇಂದು ವಿಶ್ವ ಸೈಕಲ್‌ ದಿನ‌, ಸೈಕಲ್ ದಿನದ ವಿಶೇಷವೇನು? ಸೈಕಲ್‌ ತುಳಿಯುವ ಮುನ್ನ ವಹಿಸಬೇಕಾದ ಎಚ್ಚರಿಕೆಗಳೇನು?

ಸಂಪನ್ಮೂಲ ವ್ಯಕ್ತಿಗಳು
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರಿನ ಬಾಸ್ಕೊ ಅಕಾಡೆಮಿಯ ಪ್ರೊ.ಅನಿಲ್ ಮ್ಯಾಸ್ಕರೆನಾಸ್, ದಾವಣಗೆರೆ ವಿದ್ವತ್ ಅಕಾಡೆಮಿ ನಿರ್ದೇಶಕರಾದ ಪ್ರೊ.ಕೆ.ವಿ.ಆದಿನಾರಾಯಣ, ಶಿವಮೊಗ್ಗ ಆದಿಚುಂಚನಗಿರಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಸ್.ವಿ.ಗುರುರಾಜ್, ಪೇಸ್ ಕಾಲೇಜಿನ ಉಪನ್ಯಾಸಕರಾದ ಪ್ರೊ.ಎಸ್.ಜಿ. ಕೇಶವಮೂರ್ತಿ ಭಾಗವಹಿಸಲಿದ್ದಾರೆ.
ವಿದ್ಯಾರ್ಥಿಗಳು ಮತ್ತು ಪೋಷಕರು ಕಾರ್ಯಾಗಾರದಲ್ಲಿ ಭಾಗವಹಿಸಬಹುದಾಗಿದ್ದು ಗೂಗಲ್ ಫಾರ್ಮ್ https://forms.gle/C3XocwiPHjQodTZg8 ಮೂಲಕ ನೋಂದಾಯಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ: 8095040747, 9448255843 ಸಂಪರ್ಕಿಸಲು ಪ್ರಾಂಶುಪಾಲ ಡಾ.ಕೆ.ನಾಗೇಂದ್ರಪ್ರಸಾದ್ ಕೋರಿದ್ದಾರೆ.

https://suddikanaja.com/2022/05/21/ap-minister-kakani-govardhan-reddy-participated-in-jnnce-program/

Leave a Reply

Your email address will not be published. Required fields are marked *

error: Content is protected !!