ಇಂದು ವಿಶ್ವ ಸೈಕಲ್‌ ದಿನ‌ | ಸೈಕಲ್ ದಿನದ ವಿಶೇಷವೇನು? ಸೈಕಲ್‌ ತುಳಿಯುವ ಮುನ್ನ ವಹಿಸಬೇಕಾದ ಎಚ್ಚರಿಕೆಗಳೇನು?

ಸುದ್ದಿ ಕಣಜ.ಕಾಂ | DISTRICT | GUEST COLUMN
ಶಿವಮೊಗ್ಗ: ಸೈಕಲ್‌ ಬರೀ ವಾಹನವಲ್ಲ. ಅದು ನೆನಪುಗಳ‌‌‌ ಮೆರವಣಿಗೆ. ಕ್ಷಣ ಹೊತ್ತು ಕಣ್ಮುಚ್ಚಿ‌ ಕುಳಿತು ಯೋಚಿಸಿದರೆ ಸ್ಮೃತಿ ಪಟಣದಲ್ಲಿ‌ ಅಚ್ಚಾದ ‘ಸೈಕಲ್’ ಸವಾರಿಯ ಚಿತ್ತಾರಗಳ ಮೆರವಣಿಗೆಯೇ ಹೊರಲಾರಂಭಿಸುತ್ತದೆ. ಬನ್ನಿ ವರ್ಷದ ‘ವಿಶ್ವ ಸೈಕಲ್ ದಿನಾಚರಣೆ’ಯಂದು ನೆನಪುಗಳ ಸವಿಯನ್ನು ಆಸ್ವಾದಿಸೋಣ.
ಪ್ರತಿಯೊಬ್ಬರ ಬಾಲ್ಯದಲ್ಲೂ ಸೈಕಲ್ ಕಲಿಯುವಾಗ ಆಗುವ ಗಾಯ ಅದರಿಂದ ಪಡೆದ ವಿಶೇಷ ಅನುಭವ, ಸ್ನೇಹಿತರ ಜೊತೆಗಿನ ಬೈಸಿಕಲ್ ಸವಾರಿ ಅವಿಸ್ಮರಣೀಯ.
ಬೈಸಿಕಲ್ ಕೊಳ್ಳಲೂ ಕಷ್ಟವಿದ್ದ ಕಾಲದಲ್ಲಿ ಗಂಟೆಗೆ ಇಂತಿಷ್ಟು ಬಾಡಿಗೆ ನೀಡಿ ಸೈಕಲ್‌ ಅನ್ನು ಊರುಗಳಲ್ಲಿ ಸುತ್ತಾಡಿಸಿದ ಕ್ಷಣ ನೆನಪಾಗುತ್ತದೆ. ಮೈಕೆಲ್ ಪಾಲೆನ್ ಅವರು ‘ನನ್ನ ಜೀವನದ ಪ್ರಮುಖ ದಿನಗಳಲ್ಲಿ ಒಂದು, ನಾನು ಬೈಸಿಕಲ್ ಸವಾರಿ ಮಾಡಲು ಕಲಿತಾಗ’ ಎಂದು ಹೇಳಿತ್ತಾರೆ.

READ | ಇಂದು ವಿಶ್ವ ಆಟಿಸಂ ಜಾಗೃತಿ ದಿನ, ಏನಿದು ಆಟಿಸಂ, ಮಕ್ಕಳಲ್ಲಿನ ಆರಂಭಿಕ ಲಕ್ಷಣಗಳೇನು? ಅದಕ್ಕೇನು ಪರಿಹಾರ? ಹೆತ್ತವರಿಗೆ ಗೊತ್ತಿರಲಿ ಈ ಮಾಹಿತಿಗಳು

ಸೈಕಲ್‌ ದಿನದ ಇವರಿಗೆ ಸಲ್ಲುತ್ತದೆ!
ವಿಶ್ವ ಬೈಸಿಕಲ್ ದಿನವನ್ನು ಪ್ರತಿ ವರ್ಷ ಜೂನ್ 3 ರಂದು ಆಚರಿಸಲಾಗುತ್ತದೆ. ಇದರ ಕೀರ್ತಿ ಅಮೆರಿಕ ಮೂಲದ ಪ್ರೊ.ಲೆಸ್ಜರ್ ಸಿಬಿಲ್ಸ್ಕಿ ಅವರಿಗೆ ಸಲ್ಲುತ್ತದೆ. ಇವರು ಯುನೈಟೆಡ್ ನೇಷನ್ಸ್ ವಿಶ್ವ ಬೈಸಿಕಲ್ ದಿನಾಚರಣೆಯ ಕುರಿತು ನಿರ್ಣಯ ಕೈಗೊಳ್ಳಲು ತಳಮಟ್ಟದಲ್ಲಿ ಅಭಿಯಾನ ನಡೆಸಿದ ಶ್ರಮದ ಫಲವಾಗಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು 2018 ರಲ್ಲಿ ಪ್ರತಿ ವರ್ಷ ಜೂನ್ 3 ರಂದು ವಿಶ್ವ ಬೈಸಿಕಲ್ ದಿನವಾಗಿ ಆಚರಿಸಲು ಘೋಷಿಸಿತು. ಇಂಧನ ಉಳಿತಾಯ, ಪರಿಸರ ಸಂರಕ್ಷಣೆ, ಆರ್ಥಿಕ ಉಳಿತಾಯ, ಆರೋಗ್ಯಕರ ಜೀವನ, ಮಾನಸಿಕ ಉಲ್ಲಾಸದೊಂದಿಗೆ ಹವಾಮಾನದ ಮೇಲೆ ಬೀರುವ ಸಕಾರಾತ್ಮಕ ಪರಿಣಾಮಗಳನ್ನು ತಿಳಿಸುವ ಮೂಲಕ ಬೈಸಿಕಲ್ ಸವಾರಿಯನ್ನು ಜನಪ್ರಿಗೊಳಿಸುವ ಉದ್ದೇಶದಿಂದ ವಿಶ್ವ ಬೈಸಿಕಲ್ ದಿನವನ್ನು ಆಚರಿಸಲಾಗುತ್ತದೆ.
ಎಲ್ಲರೂ ಕೊಳ್ಳಬಹುದಾದ ಸೈಕಲ್‍ಗಳಲ್ಲಿ ತರಹೇವಾರಿ ಬಗೆ. ಸಾಮಾನ್ಯ ಸೈಕಲ್‍ನಿಂದ ಹಿಡಿದು ಕ್ರೀಡಾ ಸ್ಪರ್ದೆಯವರೆಗೆ ಅವುಗಳ ಬೆಲೆಗೆ ಅನುಗುಣವಾಗಿ ಇರುತ್ತವೆ. ಬೇರೆ ದೇಶಗಳಲ್ಲಿ ಶ್ರೀಮಂತರು ಕಚೇರಿಗಳಿಗೆ ತೆರಳಲು ಬೈಸಿಕಲ್‍ಗಳನ್ನೇ ಅವಲಂಬಿಸುತ್ತಾರೆ. ಆದರೆ ನಮ್ಮಲ್ಲಿ ಪ್ರತಿಷ್ಠೆಗೆ ಬಿದ್ದು ಬಳಸುತ್ತಿರಲಿಲ್ಲ. ಇದು ಕೇವಲ ಮಕ್ಕಳು ಬಳಸುವ ಸಾಧನವಾಗಿತ್ತು. ಆದರೆ ಈಗ ಕಾಲ ಬದಲಾಗಿದೆ ಮಾಯವಾಗಿದ್ದ ಬೈಸಿಕಲ್‍ಗಳು ಮನೆಗಳಿಂದ ಹೊರ ಬರುತ್ತಿದ್ದು, ಸೈಕಲ್ ಬಳಸುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಶೇ.12.4ರಷ್ಟು ಬೈಸಿಕಲ್‌ ಉತ್ಪಾದನೆ
ಅಮೆರಿಕದಲ್ಲಿ ಶೇ.12.4 ರಷ್ಟು ಬೈಸಿಕಲ್‍ಗಳನ್ನು ಉತ್ಪಾದಿಸಲಾಗುತ್ತದೆ. ಟಂಡಮ್ ಬೈಕ್ 67 ಅಡಿ ಉದ್ದವಿದ್ದು, 35 ಆಸನಗಳನ್ನು ಒಳಗೊಂಡಿದೆ. ಇದು ವಿಶ್ವದ ಅತಿ ಉದ್ದವಾದ ಬೈಸಿಕಲ್ ಆಗಿದೆ. ಡೆನ್ಮಾರ್ಕ್ ದೇಶದಲ್ಲಿ ಪ್ರತಿ 10 ಜನರಿಗೆ 9 ಜನರು ಬೈಸಿಕಲ್ ಬಳಸುವುದರಿಂದ ಪ್ರಪಂಚದಲ್ಲಿ ಅತಿ ಹೆಚ್ಚು ಸೈಕಲ್ ಬಳಸುವ ರಾಷ್ಟ್ರವಾಗಿದೆ.

READ | ಹರ್ಷ ಕೊಲೆ ಪ್ರಕರಣ ತನಿಖೆ ಇನ್ನಷ್ಟು ಟೈಟ್, ‘ಯುಎಪಿಎ’ ಕಾಯ್ದೆ ಎಂಟ್ರಿ, ಏನಿದು ಕಾಯ್ದೆ, ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

ಬೈಸಿಕಲ್‍ನಿಂದಾಗುವ ಅನುಕೂಲಗಳು

 • ಸೈಕ್ಲಿಂಗ್ ಮಾಡುವುದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಸುಧಾರಿಸಲು ಸಾಧ್ಯವಾಗುತ್ತದೆ.
 • ಸೈಕ್ಲಿಂಗ್ ಮಾಡುವುದರಿಂದ ಮಾನಸಿಕ ಒತ್ತಡ, ಖಿನ್ನತೆ, ತೂಕ ಮತ್ತು ಭಯ ಅಥವಾ ಗಾಬರಿಯಂತಹ ಭಾವನೆಗಳನ್ನು ನಿವಾರಿಸಿ ಮನಸ್ಸಿಗೆ ಉತ್ಸಾಹ ನೀಡುತ್ತದೆ.
 • ಸೈಕಲ್ ತುಳಿಯುವಾಗ ನಮ್ಮ ಗಮನ ರಸ್ತೆ ಮೇಲೆ ಕೇಂದ್ರೀಕರಿಸುವುದರಿಂದ ಏಕಾಗ್ರತೆ ಹೆಚ್ಚಾಗುತ್ತದೆ.
 • ಹೃದಯದ ರಕ್ತನಾಳಗಳು ಉತ್ತಮಗೊಳ್ಳುವುದರಿಂದ ಹೃದಯವನ್ನು ಆರೋಗ್ಯವಾಗಿರಿಸುತ್ತದೆ.
 • ಕ್ಯಾನ್ಸರ್ ಬಂದು ಚೇತರಿಸಿಕೊಳ್ಳುತ್ತಿರುವವರಿಗೆ ಸೈಕ್ಲಿಂಗ್ ಉತ್ತಮ ಆಯ್ಕೆ. ಇದರಿಂದ ದೇಹ ಸದೃಢವಾಗುವುದರ ಜೊತೆಗೆ ತೂಕ ಕಡಿಮೆ ಮಾಡಬಹುದು.
 • ಇದು ಸ್ತನ ಕ್ಯಾನರ್ ಮುಂತಾದ ರೋಗಗಳು ಬರದಂತೆ ತಡೆಗಟ್ಟಿ ಅಪಾಯದ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
 • 2019ರ ಸಂಶೋಧನೆಯ ಪ್ರಕಾರ ನಿಯಮಿತವಾಗಿ ತುಳಿಯುವುದರಿಂದ ಅಪಾಯದ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಜೀವನ ಮಟ್ಟವನ್ನು ಸುಧಾರಿಸಬಹುದು.
 • ಸೈಕ್ಲಿಂಗ್ ಮಾಡುವುದರಿಂದ ಕಾರ್ಡಿಯೋವಾಸ್ಕುಲರ್ ಡಿಸೀಸ್ (ಸಿವಿಡಿ) ಅಥವಾ ಸ್ಟ್ರೋಕ್ ಆಗುವ ಸಾಧ್ಯತೆ ಕಡಿಮೆ ಇದೆ ಎಂದು ಬ್ರಿಟನ್‍ನ ಸಂಶೋಧನೆಯು ತಿಳಿಸಿದೆ. ಸೈಕ್ಲಿಂಗ್‍ನಿಂದ ಟೈಪ್-2 ಮಧುಮೇಹದ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಡೆನ್ಮಾರ್ಕ್ ಯುನಿವರ್ಸಿಟಿಯ ಸಂಶೋಧನೆಯು ಬಹಿರಂಗ ಪಡಿಸಿದೆ.

ಬೈಸಿಕಲ್ ಸವಾರರು ಅನುಸರಿಸಬೇಕಾದ ಮುಂಜಾಗ್ರತೆ ಕ್ರಮಗಳು

 • ಬೈಸಿಕಲ್ ತುಳಿಯುವಾಗ ಕೆಲವು ತಪ್ಪು ಮಾಡಿದರೆ ಗಾಯದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ, ಕೆಲವು ಮುಂಜಾಗ್ರತೆ ಕ್ರಮಗಳನ್ನು ಅನುಸರಿಬೇಕು.
 • ಎತ್ತರಕ್ಕೆ ಸರಿಹೊಂದುವಂತಹ ಸೈಕಲ್‍ ಅನ್ನು ಆಯ್ಕೆ ಮಾಡಿಕೊಳ್ಳಬೇಕು. ಇಲ್ಲವಾದರೆ ಸ್ನಾಯುಗಳಿಗೆ ಮತ್ತು ಅಂಗಾಂಶಗಳಿಗೆ ತೊಂದರೆಯಾಗಿ ಬೆನ್ನು ನೋವು ಬರಬಹುದು.
 • ಸಮರ್ಪಕ ಬಟ್ಟೆಗಳು, ಹೆಲ್ಮೆಟ್ ಮತ್ತು ಶೂಗಳನ್ನು ಧರಿಸಬೇಕು. ಖಾಲಿ ಹೊಟ್ಟೆಯಲ್ಲಿ ಸೈಕ್ಲಿಂಗ್ ಮಾಡಬಾರದು. ಇದರಿಂದಾಗಿ ಸಕ್ಕರೆ ಮಟ್ಟವು ಏರಿಕೆಯಾಗಬಹುದು. ಆದ್ದರಿಂದ ಬಾಯಾರಿಕೆ ಆದಾಗ ದಣಿವಾರಿಸಿಕೊಳ್ಳಲು ಒಂದು ಬಾಟಲಿಯಲ್ಲಿ ನೀರನ್ನು ಮರೆಯದೆ ಕೊಂಡೊಯ್ಯಬೇಕು.
 • ಸೈಕಲ್‍ನ ಸವಾರಿ ಮಾಡುವಾಗ ಅತಿಯಾದ ವೇಗದಲ್ಲಿ ಹೋಗಬಾರದು ಜೊತೆಗೆ ಅಗತ್ಯಕಿಂತ ಅತಿಯಾಗಿ ಸೈಕ್ಲಿಂಗ್ ಮಾಡಬಾರದು.
  ವರದಿ | ಎಂ.ಎಸ್.ಭರತ್, ಅಪ್ರೆಂಟಿಸ್ ವಾರ್ತಾ ಇಲಾಖೆ, ಶಿವಮೊಗ್ಗ

7 ದಿನಗಳಲ್ಲಿ 3,350 ಕಿ.ಮೀ ಸೈಕ್ಲಿಂಗ್ ಪಯಣಿಸಿ ಇತಿಹಾಸ ಸೃಷ್ಟಿಸಿದ ಶಿವಮೊಗ್ಗ ಪ್ರತಿಭೆ

Leave a Reply

Your email address will not be published.