ಖಡಕ್ ನಿಯಮಗಳ ನಡುವೆಯೂ ಅಡಿಕೆಗೆ ಆಮದು ಕಂಟಕ

arecanut

 

 

ಸುದ್ದಿ ಕಣಜ.ಕಾಂ | NATIONAL | MARKET TREND
ಶಿವಮೊಗ್ಗ: ಸರ್ಕಾರ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಆದರೂ ಹೊರದೇಶಗಳಿಂದ ಆಮದು ಆಗುತ್ತಿರುವ ಅಡಿಕೆಗೆ ಮೂಗುದಾರ ಹಾಕಲು ಸಾಧ್ಯವಾಗಿಲ್ಲ. ಪರಿಣಾಮ, ಅಡಿಕೆ ಬೆಳೆಗಾರರಿಗೆ ಮತ್ತೆ ಕಂಟಕ ಎದುರಾಗಿದೆ.
ನೇಪಾಳ, ಮ್ಯಾನ್ಮಾರ್, ಇಂಡೋನೇಷ್ಯಾ, ಶ್ರೀಲಂಕಾದಂತಹ ದೇಶಗಳಿಂದ ಯಥೇಚ್ಛವಾಗಿ ಭಾರತಕ್ಕೆ ತೆರಿಗೆ ಹಾಗೂ ಅಕ್ರಮ ಮಾರ್ಗದಲ್ಲಿ ಅಡಿಕೆ ಪೂರೈಕೆಯಾಗುತ್ತಿತ್ತು. ಇದರ ತಡೆಗೆ ಸರ್ಕಾರ ನಾನಾ ಪ್ರಹಸನಗಳನ್ನು ಮಾಡಿದರೂ ಪ್ರಯೋಜನ ಮಾತ್ರ ಆಗಿರಲಿಲ್ಲ.

Arecanut FB group joinಕೋವಿಡ್ ನಿಂದಾಗಿ ನಿಯಂತ್ರಣದಲ್ಲಿತ್ತು
ಕೋವಿಡ್ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಆಮದ ಸಂಪರ್ಕವೇ ಸಂಪೂರ್ಣ ಕಡಿದುಹೋಗಿತ್ತು. ಹೀಗಾಗಿ, ಅಡಿಕೆ ಕೂಡ ಹೊರದೇಶಗಳಿಂದ ಆಮದು ಆಗುತ್ತಿರಲಿಲ್ಲ. ಆಗ ಮಲೆನಾಡಿನ ಸಾಂಪ್ರದಾಯಿಕ ಬೆಳೆಯಾದ ಅಡಿಕೆಗೆ ಅಧಿಕ ಬೆಲೆಯೂ ಲಭಿಸಿತ್ತು. ಆದರೀಗ, ಮತ್ತೆ ಗಲ್ಫ್ ಆದಿಯಾಗಿ ನಾನಾ ದೇಶಗಳಿಂದ ಅಡಿಕೆ ಆಮದು ಆಗುತ್ತಿದೆ.

READ | 04/06/2022ರ ಅಡಿಕೆ ಧಾರಣೆ, ಯಾವ ಮಾರುಕಟ್ಟೆಯಲ್ಲಿ ಎಷ್ಟು ಬೆಲೆ ಇದೆ?

ಏಪ್ರಿಲ್ ವೊಂದರಲ್ಲಿಯೇ ಅಂದಾಜು 439 ಕೋಟಿ ರೂಪಾಯಿ ಮೌಲ್ಯದ 9,822 ಮೆಟ್ರಿಕ್ ಟನ್ ಅಡಿಕೆ ಅಧಿಕೃತವಾಗಿ ತೆರಿಗೆ ಪಾವತಿಸಿ ಆಮದು ಮಾಡಿಕೊಳ್ಳಲಾಗಿದೆ.
ಕೇಂದ್ರ ಸರ್ಕಾರದ ಮೌನ
ಕೋವಿಡ್ ಸಂದರ್ಭದಲ್ಲಿ ಚಾಲಿ ಅಡಿಕೆಯ ಬೆಲೆ ಉತ್ತಮ ಸ್ಥಿತಿಯಲ್ಲಿತ್ತು. ಇದೇ ದರ ಕಾಪಾಡುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅದಕ್ಕಾಗಿ, ಬಾಹ್ಯ ದೇಶಗಳಿಂದ ಆಮದು ಮಾಡಿಕೊಳ್ಳುವ ಅಡಿಕೆಯ ಮೇಲಿನ ಕನಿಷ್ಠ ದರ ಹೆಚ್ಚುವ ಬಗ್ಗೆ ಸರ್ಕಾರದ ಗಮನಕ್ಕೆ ತಂದರೂ ಹೆಚ್ಚೇನೂ ಪ್ರಯೋಜನವಾಗಿಲ್ಲ. ಕೇಂದ್ರ ಸರ್ಕಾರ ತಕ್ಷಣ ಇದರೆಡೆಗೆ ಗಮನಹರಿಸಬೇಕು.

https://suddikanaja.com/2021/09/27/sericulture-farmers-will-get-pass-soon/

Leave a Reply

Your email address will not be published. Required fields are marked *

error: Content is protected !!