ಸುದ್ದಿ ಕಣಜ.ಕಾಂ | CITY | HEALTH
ಶಿವಮೊಗ್ಗ: ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಸೆಪ್ಟೆಂಬರ್ 17 ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆವರೆಗೆ ಶಿವಮೊಗ್ಗ ನಗರದ ಈ ಕೆಳಕಂಡ ಸ್ಥಳಗಳಲ್ಲಿ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಿ ಲಸಿಕೆ ಹಾಕುವ ಲಸಿಕಾ ಮೇಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
JOB ALERT | ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿ ನೀಡಿದ ‘ಕೂ’, ಏನದು?
ಶಿವಮೊಗ್ಗ ನಗರದ ಲಸಿಕೆ ಪಡೆದಿರುವ 18 ವರ್ಷ ಮೇಲ್ಪಟ್ಟ ಸಾರ್ವಜನಿಕರು ಮೊದಲ, ಎರಡನೇ ಡೋಸ್ ಉಚಿತ ಲಸಿಕೆ ಹಾಕಿಸಿಕೊಂಡು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ಕೋರಲಾಗಿದೆ.
ಲಸಿಕಾ ಕೇಂದ್ರ ವಿವರ
- ವಾರ್ಡ್ ನಂ 13 ಕೋಟೆ ಸಮುದಾಯ ಭವನ, ಕೋಟೆ ರಸ್ತೆ, ಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರ, ಭಾವಸಾರ ಕ್ಷತ್ರಿಯ ಸಮಾಜ, ಕೋಟೆ.
- ವಾರ್ಡ್ ನಂ 22 ಸರ್ಕಾರಿ ಶಾಲೆ, ದೊಡ್ಡಪೇಟೆ ಕುಂಬಾರಗುಂಡಿ
- ವಾರ್ಡ್ ನಂ 23 ಕಾಳಿಕಾ ಪರಮೇಶ್ವರಿ ಸೊಸೈಟಿ, ಗಾಂಧಿಬಜಾರ್ ಎಡಭಾಗ, ಉರ್ದು ಶಾಲೆ ಟಿಪ್ಪುನಗರ
- ವಾರ್ಡ್ ನಂ 31 ಕನ್ನಡ ಶಾಲೆ, ನ್ಯೂ ಮಂಡ್ಲಿ, ತುಂಗಾನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ತುಂಗಾನಗರ
- ವಾರ್ಡ್ ನಂ 24 ಸರ್ಕಾರಿ ಶಾಲೆ ಪದ್ಮ ಟಾಕೀಸ್ ಹತ್ತಿರ
- ವಾರ್ಡ್ ನಂ 12 ಬಜಾಜ್ ಸುಪ್ರೀಂ ಮೋಟಾರ್ಸ್, ಶಂಕರಮಠ ರಸ್ತೆ, ಅರ್ಬನ್ ಹೆಲ್ತ್ ಸೆಂಟರ್ ಬಾಪೂಜಿನಗರ
- ವಾರ್ಡ್ ನಂ 9 ಮೆಹದಿನಗರ ಮಸೀದಿ
- ವಾರ್ಡ್ ನಂ 21 ದುರ್ಗಿಗುಡಿ ಶಾಲೆ
- ವಾರ್ಡ್ ನಂ 4 ಅಶೋಕ ಶಾಲೆ, ರಾಗಿಗುಡ್ಡ
- ವಾರ್ಡ್ ನಂ 3 ಸರ್ಕಾರಿ ಕನ್ನಡ ಶಾಲೆ ರಾಗಿಗುಡ್ಡ.
- ವಾರ್ಡ್ ನಂ 32 ಶಾದಿ ಮಹಲ್, ಸವಾಯಿಪಾಳ್ಯ
- ವಾರ್ಡ್ ನಂ.27 ಸರ್ಕಾರಿ ಶಾಲೆ, ಆರ್.ಎಂಎಲ್ ನಗರ, ಸರ್ಕಾರಿ ಶಾಲೆ ವಾದ್ ಎ ಹುದಾ, ಪ್ರಾ.ಆರೋಗ್ಯ ಕೇಂದ್ರ ವಿದ್ಯಾನಗರ.
- ವಾರ್ಡ್ ನಂ.01 ಸರ್ಕಾರಿ ಶಾಲೆ ನವುಲೆ, ತಮಿಳ್ತಾಯ್ ಭವನ, ಜೆ.ಹೆಚ್.ಪಟೇಲ್ ಬಡಾವಣೆ. ಪ್ರಾ.ಆ.ಕೇಂದ್ರ ಬೊಮ್ಮನಕಟ್ಟೆ.
- ವಾರ್ಡ್ ನಂ 34 ಸಾಗರ ರಸ್ತೆ ಇಂಡಸ್ಟ್ರೀಸ್, ಶರಾವತಿ ಹೈಸ್ಕೂಲ್ ಹರಿಗೆ, ಸರ್ಕಾರಿ ಶಾಲೆ ಮಲ್ಲಿಗೇನಹಳ್ಳಿ.
- ವಾರ್ಡ್ ನಂ 18 ಪ್ರಾ.ಆರೋಗ್ಯ ಕೇಂದ್ರ ಶ್ರೀರಾಮನಗರ.
- ವಾರ್ಡ್ ನಂ.10 ಸರ್ಕಾರಿ ಶಾಲೆ ರವೀಂದ್ರನಗರ.
- ವಾರ್ಡ್ ನಂ.19 ಆಯನೂರು ಗೇಟ್ ಅಂಗನವಾಡಿ.
- ವಾರ್ಡ್ ನಂ.20 ಸರ್ಕಾರಿ ಶಾಲೆ ಹೊಸಮನೆ.
- ವಾರ್ಡ್ ನಂ.15 ದುರ್ಗಮ್ಮ ದೇವಸ್ಥಾನ ವಡ್ಡಿನಕೊಪ್ಪ.
- ವಾರ್ಡ್ ನಂ.16 ಪ್ರಾ.ಆರೋಗ್ಯ ಕೇಂದ್ರ ಸೀಗೆಹಟ್ಟಿ ಓ.ಟಿ.ರಸ್ತೆ.
- ವಾರ್ಡ್ ನಂ. 29 ಸರ್ಕಾರಿ ಶಾಲೆ ಕಾಶಿಪುರ.
- ವಾರ್ಡ್ ನಂ. 6 ಜಿಲ್ಲಾ ತರಬೇತಿ ಕೇಂದ್ರ, ಕುವೆಂಪು ರಸ್ತೆ, ಶಿವಮೊಗ್ಗ.
- ವಾರ್ಡ್ ನಂ.30 ಸಿಮ್ಸ್ ವೈದ್ಯಕೀಯ ಕಾಲೇಜು, ಬಿ.ಎಚ್.ರಸ್ತೆ, ಶಿವಮೊಗ್ಗ. ಇಲ್ಲಿ ಸಾರ್ವಜನಿಕರು ಲಸಿಕೆ ಪಡೆಯಬಹುದೆಂದು ಪ್ರಕಟಣೆ ತಿಳಿಸಿದೆ.
https://www.suddikanaja.com/2021/04/30/mandatory-to-display-duty-doctor-names-before-ward-board/