ಭದ್ರಾವತಿಯ ವಿಐಎಸ್‍ಎಲ್ ವಸತಿಗೃಹದಲ್ಲಿ ಚಿರತೆ ಪ್ರತ್ಯಕ್ಷ, ಅರಣ್ಯ ಇಲಾಖೆ ಹೈ ಅಲರ್ಟ್

ಸುದ್ದಿ ಕಣಜ.ಕಾಂ | TALUK | LEOPARD 
ಭದ್ರಾವತಿ: ಪಟ್ಟಣದ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಸ್ಥಾವರ (ವಿಐಎಸ್‍ಎಲ್) ವಸತಿ ಗೃಹದಲ್ಲಿ ಬುಧವಾರ ಬೆಳಗ್ಗೆ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.
ಪ್ರಸ್ತುತ VISL ವಸತಿ ಗೃಹಗಳಲ್ಲಿ ಬಹುತೇಕ ಖಾಲಿ ಇವೆ. ಆದರೆ, ಇನ್ನೂ ಕೆಲವು ಮನೆಗಳಲ್ಲಿ ಜನರು ವಾಸವಾಗಿದ್ದು, ಚಿರತೆ ಸಂಚಾರ ಭೀತಿಗೆ ಕಾರಣವಾಗಿದೆ.
ವಿಡಿಯೋ ವೈರಲ್, ಅರಣ್ಯ ಸಿಬ್ಬಂದಿ ಗಸ್ತು
ಆಸ್ಪತ್ರೆಯ ಪಕ್ಕದಲ್ಲಿಯೇ ಚಿರತೆ ಓಡಾಡುತ್ತಿರುವುದಾಗಿ ಜನರು ಹೇಳುತ್ತಿದ್ದಾರೆ. ಜತೆಗೆ, ವಸತಿ ಗೃಹದ ಮನೆಯೊಂದರ ಆವರಣದಲ್ಲಿ ಚಿರತೆ ಓಡಾಡುತ್ತಿರುವ ವಿಡಿಯೋ ತುಣುಕೊಂದು ವೈರಲ್ ಆಗಿದೆ.
ಚಿರತೆಯ ಓಡಾಟದ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಸಾಕಷ್ಟು ಜನರು ಸೇರಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಸಾರ್ವಜನಿಕರು ಚಿರತೆ ಕಂಡುಬಂದಿರುವ ಪ್ರದೇಶದ ಸುತ್ತಮುತ್ತ ಓಡಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

Leave a Reply

Your email address will not be published.