ಶಿವಮೊಗ್ಗ ನಗರಕ್ಕೆ ಕಲುಷಿತ ನೀರು ಪೂರೈಕೆ ವಿರುದ್ಧ ಕಾರ್ಪೋರೇಟರ್ ಖಡಕ್ ವಾರ್ನಿಂಗ್

Rekha Ranganath

 

 

ಸುದ್ದಿ ಕಣಜ.ಕಾಂ | CITY | WATER PROBLEM
ಶಿವಮೊಗ್ಗ: ನಗರದ ಹಲವೆಡೆ ಕಲುಷಿತ ನೀರು ಪೂರೈಕೆ ಮಾಡಲಾಗುತ್ತಿದೆ. ಕೆಲವೆಡೆಯಂತೂ ಮನೆಗಳಿಗೆ ನೀರು ಬರುತ್ತಿಲ್ಲ. ಇದರ ಬಗ್ಗೆ ಮಹಾನಗರ ಪಾಲಿಕೆ ಸೇರಿದಂತೆ ಕರ್ನಾಟಕ ಜಲ ಮಂಡಳಿ ಗಮನಕ್ಕೂ ತರಲಾಗಿದೆ. ಆದರೆ, ಯಾವ ಪ್ರಯೋಜನವೂ ಆಗಿಲ್ಲ ಎಂದು‌ ಮಹಾನಗರ ಪಾಲಿಕೆ ಸದಸ್ಯೆ ರೇಖಾ‌ ರಂಗನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

READ | ಮಣಿಪಾಲ್ ಆರೋಗ್ಯ ಕಾರ್ಡ್ ನೋಂದಣಿ ಆರಂಭ, ಯಾರೆಲ್ಲ ಚಿಕಿತ್ಸೆ ಪಡೆಯಬಹುದು?

ಹೊಸಮನೆಯಲ್ಲಿ ಕಲುಷಿತ ನೀರು ಪೂರೈಕೆ
ಹೊಸಮನೆ ಬಡಾವಣೆಯ 3 ಮತ್ತು 4ನೇ ಮುಖ್ಯ ರಸ್ತೆಯಲ್ಲಿ ಕೊಳೆ ನೀರು ಬರುತ್ತಿದೆ. ಒಂದೆಡೆ ನೀರೇ ಏರುತ್ತಿಲ್ಲ ಎಂದು ಹೇಳಿ 10 ದಿನ ಕಳೆದರೂ ನೀರಿನ ಸಮಸ್ಯೆ ಬಗೆಹರಿಸದ ಅಧಿಕಾರಿಗಳು ಖುದ್ದು ಬಂದು ವೀಕ್ಷಿಸಿದ್ದರು. ದುರಸ್ತಿ ಮಾಡುವ ಕೆಲಸಗಾರರು ಇಲ್ಲದೇ ಸಮಸ್ಯೆ ಬಗೆಹರಿದಿಲ್ಲ. ನೀರಿನ ಸಮಸ್ಯೆ ಜೊತೆಗೆ ಸಿಬ್ಬಂದಿ ಕೊರತೆಯಿಂದ ನಗರದಲ್ಲಿ ನೀರಿಗೆ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ.
ನೀರು ಸರಬಾರಾಜು ಮಂಡಳಿಯಲ್ಲಿ ಎಲ್ಲ ಸ್ತರದ ಅಧಿಕಾರಗಳಿದ್ದು, ಈಗಾಗಲೇ ದುರಸ್ತಿ ಕೆಲಸಕ್ಕೆ ಗುತ್ತಿಗೆದಾರರಿಂದ ಮಾನವ ಸಂಪನ್ಮೂಲ ಪಡೆದು ಅವರ ಕೆಲಸ ಮುಗಿದ ಮೇಲೆ ಬಿಲ್ಲು ಪಾವತಿಸದೇ ಇರುವುದರಿಂದ ಯಾವೊಬ್ಬ ಗುತ್ತಿಗೆದಾರರೂ ಮಂಡಳಿ ಕೆಲಸಕ್ಕೆ ಮುಂದೆ ಬರುತ್ತಿಲ್ಲ. ಈ ಎಲ್ಲ ಸಮಸ್ಯೆಗಳೆಡೆಗೆ ಜಿಲ್ಲಾಧಿಕಾರಿಗಳು ಗಮನ ಹರಿಸಬೇಕು. ನೇರವಾಗಿ ಈ ಸಮಸ್ಯೆಯನ್ನು ಪರಿಹರಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

https://suddikanaja.com/2020/11/14/short-circuit-in-mandli-feeder-kptcl/

Leave a Reply

Your email address will not be published. Required fields are marked *

error: Content is protected !!