ಮಣಿಪಾಲ್ ಆರೋಗ್ಯ ಕಾರ್ಡ್ ನೋಂದಣಿ ಆರಂಭ, ಯಾರೆಲ್ಲ ಚಿಕಿತ್ಸೆ ಪಡೆಯಬಹುದು?

Manipal health card

 

 

ಸುದ್ದಿ ಕಣಜ.ಕಾಂ | DISTRICT | HEALTH NEWS 
ಶಿವಮೊಗ್ಗ: ಪ್ರಸಕ್ತ ವರ್ಷದ ಮಣಿಪಾಲ್ ಆರೋಗ್ಯ ಕಾರ್ಡ್ (Manipal Health Card) ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ಮೋಹನ್ ಶೆಟ್ಟಿ ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮುದಾಯದ ಎಲ್ಲ ಬಡವರಿಗೂ ಸುಲಭ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಮಣಿಪಾಲ್ ಆರೋಗ್ಯ ಕಾರ್ಡ್ ಅನ್ನು ಜಾರಿಗೆ ತರಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲದೇ ಇಡೀ ರಾಜ್ಯ ಹಾಗೂ ನೆರೆಯ ರಾಜ್ಯಗಳಿಗೂ ಕೂಡ ಈ ಕಾರ್ಡ್ ತಲುಪಿ ಆರೋಗ್ಯ ಸೇವೆಯಲ್ಲಿ ಮಣಿಪಾಲ ಆಸ್ಪತ್ರೆ ಮಹತ್ತರ ಪಾತ್ರ ವಹಿಸಿದೆ ಎಂದರು.
ಕಾರ್ಡಿಗೆಷ್ಟು ಶುಲ್ಕ, ಯಾರೆಲ್ಲ ಚಿಕಿತ್ಸೆ ಪಡೆಯಬಹುದು?
ಈ ಯೋಜನೆಯ ಅನ್ವಯ ಒಂದು ವರ್ಷಕ್ಕೆ ಒಬ್ಬರಿಗೆ 300 ರೂಪಾಯಿ ಶುಲ್ಕ ಇದೆ. ಆದರೆ ಕೌಟುಂಬಿಕ ಕಾರ್ಡ್ ಪಡೆಯಲು ಅವರ ಸಂಗಾತಿ ಮತ್ತು 25 ವರ್ಷದ ಒಳಗಿನ ಮಕ್ಕಳಿಗೆ 600 ರೂಪಾಯಿ ನಿಗದಿಪಡಿಸಲಾಗಿದೆ. ಕುಟುಂಬ ಪ್ಲಸ್ ಯೋಜನೆಯಲ್ಲಿ ಕಾರ್ಡುದಾರ ಅವರ ಸಂಗಾತಿ, 25 ವರ್ಷದೊಳಗಿನ ಮಕ್ಕಳು ಮತ್ತು ಅವರ ನಾಲ್ವರು ಪೋಷಕರು (ತಂದೆ, ತಾಯಿ, ಅತ್ತೆ ಮಾವ) ಸೇರಿ 750 ರೂಪಾಯಿ ನಿಗದಿ ಪಡಿಸಲಾಗಿದ್ದು, ಇದು ಹೆಚ್ಚುವರಿ ಲಾಭವಾಗಿದೆ. ಎರಡು ವರ್ಷದ ಯೋಜನೆಗೆ ಒಬ್ಬರಿಗೆ 500 ರೂ., ಕುಟುಂಬ ಯೋಜನೆಗೆ 800 ರೂ., ಕೌಟುಂಬಿಕ ಪ್ಲಸ್ ಯೋಜನೆಯಲ್ಲಿ 950 ರೂ.ಗಳನ್ನು ನಿಗದಿಪಡಿಸಲಾಗಿದೆ ಎಂದು ಹೇಳಿದರು.

READ | ‘ವಿಂಡೋಸೀಟ್’ ರಿಲೀಸಿಂಗ್ ಡೇಟ್ ಫಿಕ್ಸ್, ಕಥಾ ಹಂದರ ಬಿಚ್ಚಿಟ್ಟ ಶಿವಮೊಗ್ಗದವರೇ ಆದ ಶೀತಲ್ ಶೆಟ್ಟಿ

ಕಾರ್ಡಿನ ಪ್ರಯೋಜನಗಳೇನು?

  • ವೈದ್ಯರ ಸಮಾಲೋಚನೆಯಲ್ಲಿ ಶೇ.50, ಪ್ರಯೋಗಾಲಯ ಪರೀಕ್ಷೆಯಲ್ಲಿ ಶೇ.30, ಒಳರೋಗಿಗಳಾಗಿ ಸಾಮಾನ್ಯ ವಾರ್ಡ್‍ನಲ್ಲಿ ದಾಖಲಾಗಿದ್ದರೆ ಶೇ.25ರಷ್ಟು, ಕೋವಿಡ್ ರೋಗಿಗಳಿಗೆ ಜನರಲ್ ವಾರ್ಡ್‍ನಲ್ಲಿ ಸರ್ಕಾರದ ಅನುಮೋದಿತ ಪ್ಯಾಕೇಜ್ ಮೇಲೆ ಶೇ.10ರಷ್ಟು, ಸಿ.ಟಿ., ಎಂಆರ್.ಐ, ಆಲ್ಟ್ರಾ ಸೌಂಡ್ ಪರೀಕ್ಷೆಗೆ ಶೇ.20ರಷ್ಟು, ಮಧುಮೇಹ ರೋಗಿಗಳ ತಪಾಸಣೆಗೆ ಶೇ. 20ರಷ್ಟು, ಔಷಧಾಲಯಗಳಲ್ಲಿ ಶೇ.12ರಷ್ಟು ರಿಯಾಯಿತಿ ಸಿಗುತ್ತದೆ.
  • ಕಾರ್ಡುದಾರರು ಕರಾವಳಿ, ಕರ್ನಾಟಕ ಮತ್ತು ಗೋವಾದ ಮಣಿಪಾಲ ಆಸ್ಪತ್ರೆ, ಮಣಿಪಾಲದ ಕಸ್ತೂರಬಾ ಆಸ್ಪತ್ರೆ, ಉಡುಪಿಯ ಡಾ. ಟಿ.ಎಂ.ಎ. ಪೈ ಆಸ್ಪತ್ರೆ, ಕಾರ್ಕಳದ ಕೆ.ಎಂ.ಸಿ. ಆಸ್ಪತ್ರೆ, ಅತ್ತಾವರದ ಮತ್ತು ಮಂಗಳೂರಿನ ದುರ್ಗಾ ಸಂಜೀವಿನಿ ಆಸ್ಪತ್ರೆ, ಕಟೀಲಿನ ಮಣಿಪಾಲ ಆಸ್ಪತ್ರೆ ಮುಂತಾದ ಕಡೆಗಳಲ್ಲಿ ಚಿಕಿತ್ಸೆ ಪಡೆಯಬಹುದು.

ಕೂಡಲೇ ಇವರನ್ನು ಸಂಪರ್ಕಿಸಿ
ಮಣಿಪಾಲ ಕಾರ್ಡ್ ಪಡೆಯಲು ಶಿವಮೊಗ್ಗದಲ್ಲಿ ಆ.ನಾ. ವಿಜಯೇಂದ್ರರಾವ್ 9448790127, ಶ್ರೀನಿವಾಸ ಭಾಗವತ್ 8105282146 ಸಂಪರ್ಕಿಸಿ. ಮಣಿಪಾಲ ಆಸ್ಪತ್ರೆಯ ಪ್ರತಿನಿಧಿ ಶ್ರೀನಿವಾಸ್ ಭಾಗವತ್, ಪ್ರತಿನಿಧಿ ಆ.ನಾ. ವಿಜಯೇಂದ್ರರಾವ್, ನವೀನ್ ಇದ್ದರು.

https://suddikanaja.com/2022/04/27/e-shram-card-online-apply-benefits-of-card/

Leave a Reply

Your email address will not be published. Required fields are marked *

error: Content is protected !!