ಕಮೀಷನ್ ದಂಧೆಯ ಹಿಂದಿದೆ RSS, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಗಂಭೀರ‌ ಆರೋಪ

hd kumarswamy

 

 

ಸುದ್ದಿ ಕಣಜ.ಕಾಂ | KARNATAKA | POLITICAL NEWS
ಶಿವಮೊಗ್ಗ: ಕಮೀಷನ್ ದಂಧೆಯ ಚರ್ಚೆ ಇಷ್ಟಕ್ಕೆ ಮುಗಿಯುವ ಲಕ್ಷಣ ಕಾಣುತಿಲ್ಲ. ಈಗ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತೊಂದು‌ ಗಂಭೀರ ಸ್ವರೂಪದ ಆರೋಪ ಮಾಡಿದ್ದು, ಆರ್.ಎಸ್.ಎಸ್. ಕಡೆಗೆ ನೇರ ಬೆರಳು ಮಾಡಿದ್ದು ರಾಜ್ಯದಲ್ಲಿ ಮತ್ತೊಂದು ಹಂತದ ಚರ್ಚೆಗೆ ಪಂಥಾಹ್ವಾನ ನೀಡಿದಂತಾಗಿದೆ.
ನಗರದ ಮಲವಗೊಪ್ಪ ಸಮೀಪ ಭಾನುವಾರ ಆಯೋಜಿಸಿದ್ದ ವನ್ನಿಕುಲ ಕ್ಷತ್ರಿಯರ ಸಮಾವೇಶದಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿರುವ ಎಚ್.ಡಿ.ಕೆ ಕಮಿಷನ್ ದಂಧೆಯ ಬಗ್ಗೆ ಮಾತನಾಡಿದರು.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮಾಡಿದ ಆರೋಪಗಳೇನು?

  • ರಾಜ್ಯ ಸರ್ಕಾರ ಹಾಗೂ ಶಾಸಕರು, ಸಂಸದರಿಗೆ ಕಮಿಷನ್ ಬಗ್ಗೆ ಸರೊಯಾದ ಮಾಹಿತಿಯೇ ಇಲ್ಲ. ಕೋಟ್ಯಂತರ ಹಣ ವ್ಯಯ ಮಾಡಿ ಬೆಂಗಳೂರಿನಲ್ಲಿ ರಸ್ತೆ ಮಾಡಲಾಗಿದೆ. ಅದರಲ್ಲಿ ಎಷ್ಟು ಕಮಿಷನ್ ಹೋಗುತ್ತಿದೆ? ಇದರ ಬಗ್ಗೆ ಯಾರೂ ಮಾತನಾಡುವುದಿಲ್ಲ.
  • ರಾಜ್ಯದ ಆರ್.ಎಸ್.ಎಸ್ ಪ್ರಮುಖರಿಗೆ ಈ ಕಮಿಷನ್ ನಲ್ಲಿ ಹಣ ತಲುಪುತ್ತಿದೆ. ಬರುವ ಚುನಾವಣೆಯಲ್ಲಿ ಕ್ಷೇತ್ರಕ್ಕೆ 20-30 ಕೋಟಿ ಎಲೆಕ್ಷನ್ ಬಜೆಟ್ ಈ ಕಮಿಷನ್ ನಿಂದಲೇ ಸಂಗ್ರಹ ಮಾಡಲಾಗುತ್ತಿದೆ.
  • ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬಂದಾಗ ಹಾಕಲಾಗಿದ್ದ ಟಾರ್ ಈಗಾಗಲೇ ಕಿತ್ತು ಹೋಗಿದೆ. ಈ ಅನುದಾನದಲ್ಲಿ ಹಳ್ಳಿಯೊಂದನ್ನು ಅಭಿವೃದ್ಧಿ ಪಡಿಸಬಹುದಾಗಿತ್ತು. ಜನರ ತೆರಿಗೆ ಹಣ ಪೋಲು ಮಾಡಲಾಗಿದೆ.

https://suddikanaja.com/2020/11/17/ishwarappas-comments-on-congress-leaders/

 

Leave a Reply

Your email address will not be published. Required fields are marked *

error: Content is protected !!