
ಸುದ್ದಿ ಕಣಜ.ಕಾಂ | DISTRICT | TALENT JUNCTION
ಶಿವಮೊಗ್ಗ: ನಗರದ ಕೋಟೆ ಬಯಲು ರಂಗಮಂದಿರಲ್ಲಿ ನಡೆದ ನಟ ಮತ್ತು ನಿರ್ದೇಶಕÀ ರಿಷಬ್ ಶೆಟ್ಟಿ ಅವರ ಹೊಸ ಚಲನಚಿತ್ರದ ಆಡಿಷನ್ನಲ್ಲಿ ಸ್ಟೈಲ್ ಡ್ಯಾನ್ಸ್ ಕ್ರಿವ್ ಸಂಸ್ಥೆಯ ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
READ | ‘ವಿಂಡೋಸೀಟ್’ ರಿಲೀಸಿಂಗ್ ಡೇಟ್ ಫಿಕ್ಸ್, ಕಥಾ ಹಂದರ ಬಿಚ್ಚಿಟ್ಟ ಶಿವಮೊಗ್ಗದವರೇ ಆದ ಶೀತಲ್ ಶೆಟ್ಟಿ
ಅಭಿಷೇಕ್, ಅಜಿತ್, ಸಮರ್ಥ್ ಆಯ್ಕೆಯಾದ ಪ್ರತಿಭಾನ್ವಿತ ಮಕ್ಕಳು. ಈ ಮಕ್ಕಳು ನಗರದ ಸ್ಟೈಲ್ ಡ್ಯಾನ್ಸ್ ಕ್ರಿವ್ ಸಂಸ್ಥೆಯಲ್ಲಿ ನೃತ್ಯ ಮತ್ತು ಸಾಂಸ್ಕೃತಿಕ ವಿಷಯಗಳನ್ನು ಕಲಿಯುತ್ತಿರುವ ವಿದ್ಯಾರ್ಥಿಗಳಾಗಿದ್ದಾರೆ.
ಇವರಿಗೆ ನೃತ್ಯ ಸಂಸ್ಥೆಯ ಗೌರವಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ಅಧ್ಯಕ್ಷ ಕೆ.ಈ.ಕಾಂತೇಶ್, ಉಪಾಧ್ಯಕ್ಷ ಇ.ವಿಶ್ವಾಸ್, ಸಲಹೆಗಾರ ಸಿಂಪ್ಲೆಕ್ಸ್ ರಮೇಶ್, ಸಂಸ್ಥಾಪಕ ಎನ್. ಶಶಿಕುಮಾರ್ ಅಭಿನಂದಿಸಿದ್ದಾರೆ.