ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಸಾವರ್ಕರ್ ನಗರದ ಒಂದು ಅಂಗಡಿಯ ಮುಂದೆ ಅಸ್ವಸ್ಥಳಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸುಮಾರು 45 ರಿಂದ 50 ವರ್ಷದ ಮಹಿಳೆಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು ಮಹಿಳೆ ಮೃತಪಟ್ಟಿರುತ್ತಾರೆ.
READ | ಇಲಿಯಾಸ್ ನಗರದಲ್ಲಿ ಚಾಕುದಿಂದ ಚುಚ್ಚಿ ಕೊಲೆ
ಮೃತ ಮಹಿಳೆಯ ಹೆಸರು ಸೌಮ್ಯ ಎಂದು ತಿಳಿದುಬಂದಿದ್ದು 5 ಅಡಿ 5 ಇಂಚು ಎತ್ತರ, ಸಾಧಾರಣ ಮೈಕಟ್ಟು, ಬಿಳಿ ಮೈಬಣ್ಣ, ಕಪ್ಪು ಬಿಳಿ ಮಿಶ್ರಿತ ತಲೆ ಕೂದಲು ಇರುತ್ತದೆ. ನೀಲಿ ಬಣ್ಣದ ಸೀರೆ, ಹಳದಿ ಬಣ್ಣದ ಲಂಗ ಹಾಗೂ ಕಪ್ಪು ಮತ್ತು ಸಿಮೆಂಟ್ ಬಣ್ಣದ ಚೌಕುಳಿಯ ರವಿಕೆಯನ್ನು ಧರಿಸಿರುತ್ತಾರೆ. ಮೃತಳ ವಾರಸುದಾರರು ಯಾರಾದರೂ ಇದ್ದಲ್ಲಿ ಕೋಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು.
ಅಪರಿಚಿತ ವ್ಯಕ್ತಿ ಸಾವು
ನಗರದ ಸರ್ಕಾರಿ ಬಸ್ ನಿಲ್ದಾಣದ ಎದುರು ಅಶೋಕ ಡಿಲಕ್ಸ್ ಲಾಡ್ಜ್ ಹತ್ತಿರದ ಫುಟ್ಪಾತ್ನಲ್ಲಿ ಅಸ್ವಸ್ಥನಾಗಿ ಮಲಗಿದ್ದ ಸುಮಾರು 55 ರಿಂದ 60 ವರ್ಷದ ಅನಾಮದೇಯ ವ್ಯಕ್ತಿಯನ್ನು ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.
ಮೃತನು 5 ಅಡಿ 10 ಇಂಚು ಎತ್ತರ, ದೃಢ ಮೈಕಟ್ಟು, ಕಪ್ಪುü ಮೈಬಣ್ಣ, ದುಂಡು ಮುಖ, ತಲೆಯಲ್ಲಿ ಬಿಳಿ ಕೂದಲು, ಕುರುಚಲು ಗಡ್ಡ, ಮೀಸೆ ಇರುತ್ತದೆ. ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414/ 9611761255 ಗಳನ್ನು ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.