ಕೆ.ಎಸ್.ಈಶ್ವರಪ್ಪ ವಿರುದ್ಧ ಕೆ.ಬಿ.ಪ್ರಸನ್ನಕುಮಾರ್ ಮಾಡಿದ ಟಾಪ್‌4 ಆರೋಪಿಗಳೇನು?

KB Prasanna kumar

 

 

ಸುದ್ದಿ ಕಣಜ.ಕಾಂ | DISTRICT | POLITICAL NEWS
ಶಿವಮೊಗ್ಗ: ಪತ್ರಿಕಾ ಭವನದಲ್ಲಿ ಬುಧವಾರ ಕರೆದ ಮಾಧ್ಯಮಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಅವರು ಮಾಜಿ ಸಚಿವ, ಶಾಸಕ‌ ಕೆ.ಎಸ್.ಈಶ್ವರಪ್ಪ ವಿರುದ್ಧ ಆರೋಪಗಳ ಸುರಿಮಳೆ ಗೆರೆದರು.

READ | ದಿನಸಿ ಅಂಗಡಿ ನೋಂದಣಿಗೆ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ FDA

ಪ್ರಸನ್ನಕುಮಾರ್ ಮಾಡಿದ ಆರೋಪಗಳೇನು?

  1. ಸ್ಮಾರ್ಟ್‌ ಸಿಟಿ ಕಾಮಗಾರಿಗಳಲ್ಲಿ ಭ್ರಷ್ಟಾಚಾರಕ್ಕೆ ಬುನಾದಿ ಹಾಕಿದವರೆ ಶಾಸಕ ಕೆ.ಎಸ್.ಈಶ್ವರಪ್ಪ. ಅವರು ನಗರಕ್ಕೆ ನೀಡಿರುವ ಕೊಡುಗೆಗಳೇನು?
  2. ಭಾರೀ ಆಶಯದೊಂದಿಗೆ ಸ್ಮಾರ್ಟ್ ಸಿಟಿ ಯೋಜನೆ ಜಾರಿಗೆ ತರಲಾಗಿದೆ. ನಗರದ ವಾರ್ಡ್‌’ಗಳಲ್ಲಿ ನಾಗರಿಕ ಸಮಿತಿಗಳನ್ನು ರಚಿಸಿ ಸಮಿತಿಗಳು ಕೊಟ್ಟ ಸಲಹೆಗಳನ್ನು ಪಡೆಯಲಾಗಿತ್ತು. ಆದರೆ, ಎಲ್ಲ‌ ಕನಸುಗಳ ಮೇಲೆ ನೀರೆರೆದಂತಾಗಿದೆ. ಶಾಸಕರು ಜವಾಬ್ದಾರಿ ಮರೆತಿದ್ದು, ಕಾಲ ಇನ್ನೂ ಮಿಂಚಿಲ್ಲ. ಅವರು ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳಲಿ.
  3. ನಗರದಲ್ಲಿ 24/7 ಕುಡಿಯುವ ನೀರಿನ ಯೋಜನೆ ಇನ್ನೂ ಜಾರಿಯಾಗಿಲ್ಲ. 59 ಜೋನ್‌’ಗಳಿವೆ. ಯಾವ ಜೋನ್‌’ಗಳೂ ಪೂರ್ಣಗೊಂಡಿಲ್ಲ. ಅವ್ಯವಸ್ಥೆಯ ತಾಂಡವವಾಡುತ್ತಿದೆ. ಕೆಲವು ಬಡಾವಣೆಗಳಿಗೆ ಮೀಟರ್ ಅಳವಡಿಸಿ ಹೆಚ್ಚು ದರ ವಿಧಿಸಲಾಗಿದೆ. ನಾಗರಿಕ ಹೋರಾಟ ಸಮಿತಿಯವರು ಪ್ರತಿಭಟನೆ ನಡೆಸಿದ ನಂತರ ಸಭೆ ಕರೆದು ತಿಂಗಳಿಗೆ 175 ರೂ. ನೀರಿನ ಶುಲ್ಕ ವಿಧಿಸುವುದಾಗಿ ಘೋಷಿಸಿದ್ದಾರೆ. ಆದರೆ ಇದರಲ್ಲಿ ಈಶ್ವರಪ್ಪ ಅವರ ಚಾಣಾಕ್ಷತನವೆನಿಲ್ಲ.
  4. ಧರ್ಮದ ಹೆಸರಲ್ಲಿ ರಾಜಕೀಯ ಮಾಡುವುದನ್ನು ಈಶ್ವರಪ್ಪ ನಿಲ್ಲಿಸಬೇಕು. ನಾನು ಶಾಸಕನಾಗಿದ್ದಾಗ ಆಚಾರ್ಯತ್ರಯರ ಭವನವನ್ನು ನಿರ್ಮಿಸಿದ್ದು, ನಾಲ್ಕೂವರೆ ವರ್ಷವಾದರೂ ಅದಿನ್ನು ಉದ್ಘಾಟಿಸಿಲ್ಲ‌. ಇದರ ಜೊತೆಗೆ ಆಂಜನೇಯ ಸ್ವಾಮಿ ದೇವಾಲಯದ ಪ್ರಸಾದ ಕೊಠಡಿ ಕೂಡ ಕೆಡವಿದ್ದಾರೆ. ಹಿಂದೂ ಧರ್ಮದ ಹೆಸರು ಹೇಳಿಕೊಳ್ಳುತ್ತಾರೆ ವಿನಹ ಯಾವ ಪುರಾತನ ದೇವಾಲಯಗಳನ್ನು ಪುನರುಜ್ಜೀವನಗೊಳಿಸಿಲ್ಲ.

ಪ್ರಮುಖರಾದ ಎಸ್.ಟಿ.ಹಾಲಪ್ಪ, ಲಕ್ಷ್ಮಣ್, ದೀಪಕ್ ಸಿಂಗ್, ಪ್ರಸನ್ನ, ಶಿವಾನಂದ್, ಮಂಜುನಾಥ್, ಸುವರ್ಣಾ, ಚಂದ್ರು, ರಘು, ಶಾಮಸುಂದರ್, ವೆಂಕಟೇಶ, ಮಂಜುನಾಥ್ ಬಾಬು ಮೊದಲಾದವರಿದ್ದರು.

https://suddikanaja.com/2021/10/13/legal-fight-against-property-tax-called-for-public-support-by-nagarika-hitarakshana-vedikegala-vakkuta/

Leave a Reply

Your email address will not be published. Required fields are marked *

error: Content is protected !!