Hindu mahasabha ganesh | ಹಿಂದೂ ಮಹಾಸಭಾ ಗಣೇಶ ಮೆರವಣಿಗೆಗೆ ಹೈಸೆಕ್ಯೂರಿಟಿ, ಎಷ್ಟು ಪೊಲೀಸ್ ಸಿಬ್ಬಂದಿ ನಿಯೋಜನೆ? ಡ್ರೋಣ್ ಬಳಕೆ

Police Gandhi nagar

 

 

ಸುದ್ದಿ‌ ಕಣಜ.ಕಾಂ ಶಿವಮೊಗ್ಗ
SHIVAMOGGA: ಸೆ.28ರಂದು ಶಿವಮೊಗ್ಗ ನಗರದ ಹಿಂದೂ ಮಹಾಸಭಾ ಗಣಪತಿ (hindu mahasabha ganesh) ವಿಸರ್ಜನಾ ಮೆರವಣಿಗೆ ಬಂದೋಬಸ್ತ್ ಕಲ್ಪಿಸಲು ಪೊಲೀಸ್ ಇಲಾಖೆ ಎಲ್ಲ ಪೂರ್ವ ತಯಾರಿಗಳನ್ನು ಮಾಡಿಕೊಂಡಿದೆ.

READ | ಹಿಂದೂ ಮಹಾಸಭಾ ಗಣೇಶ ಸಿದ್ಧವಾಯ್ತು ಮುಖ್ಯ ದ್ವಾರ, ಏನೆಲ್ಲ ವಿಶೇಷ, ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

ಎಷ್ಟು ಸಿಬ್ಬಂದಿ‌ ನಿಯೋಜನೆ?
ಬಂದೋಬಸ್ತ್ ಕರ್ತವ್ಯಕ್ಕೆ 5 ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 14 ಪೊಲೀಸ್ ಉಪಾಧೀಕ್ಷಕರು, 40 ಪೋಲಿಸ್ ನಿರೀಕ್ಷಕರು, 75 ಪೊಲೀಸ್ ಉಪನಿರೀಕ್ಷಕರು, 2,500 ಎಎಸ್ಐ, ಎಚ್.ಸಿ, ಪಿಸಿ ಮತ್ತು ಹೋಮ್ ಗಾರ್ಡ್ ಸಿಬ್ಬಂದಿ, 10 ಡಿಎಆರ್ ತುಕಡಿ, 15 ಕೆಎಸ್ಆರ್.ಪಿ ತುಕಡಿ, 2 ಆರ್.ಎ.ಎಫ್ ಕಂಪನಿಗಳು, 100 ವಿಡಿಯೋ ಕ್ಯಾಮರಾಗಳು ಮತ್ತು 8 ಡ್ರೋಣ್ ಕ್ಯಾಮರಾಗಳನ್ನು ನಿಯೋಜಿಸಲಾಗಿರುತ್ತದೆ.‌ ಮೆರವಣಿಗೆ ಮಾರ್ಗ ಮತ್ತು ಪ್ರಮುಖ ಸ್ಥಳಗಳಲ್ಲಿ 500 ಕ್ಕೂ ಹೆಚ್ಚು ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿರುತ್ತದೆ.
ಇಂದು ಪಥ ಸಂಚಲನ
ಹಿಂದೂ ಮಹಾ ಸಭಾ ಗಣಪತಿ ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ ಬುಧವಾರ ಸಂಜೆ 4 ಗಂಟೆಗೆ ನಗರದಲ್ಲಿ
ರೂಟ್ ಮಾರ್ಚ್ (ಪಥ ಸಂಚಲನ) ಅನ್ನು ಹಮ್ಮಿಕೊಂಡಿದ್ದು, ಪಥ ಸಂಚಲನ ನಗರದ ಗೋಪಿ ವೃತ್ತದಿಂದ ಪ್ರಾರಂಭಿಸಿ, ಅಮೀರ್ ಅಹಮ್ಮದ್ ವೃತ್ತ, ಶಿವಪ್ಪ ನಾಯಕ ವೃತ್ತ, ಗಾಂಧಿ ಬಜಾರ್ ರಸ್ತೆ, ಎಂಕೆಕೆ ರಸ್ತೆ, ಕೆ ಆರ್ ಪುರಂನಿಂದ ಆರ್‌.ಎಂ.ಎಲ್ ನಗರದ ಟೆಂಪೋ ಸ್ಟಾಂಡ್ ಗೆ ಬಂದು ಮುಕ್ತಾಯ ಮಾಡಲಾಗುವುದು.

error: Content is protected !!