ಕ್ರಿಟಿಕಲ್ ಶಸ್ತ್ರಚಿಕಿತ್ಸೆ ಮೂಲಕ ಬ್ರೈನ್ ಟ್ಯೂಮರ್ ಚಿಕಿತ್ಸೆ , ಅಭಿನಂದನೆ ಸಲ್ಲಿಸಿದ ರೋಗಿ

 

 

ಸುದ್ದಿ ಕಣಜ.ಕಾಂ | KARNATAKA | HEALTH NEWS
ಬೆಂಗಳೂರು: ಅತ್ಯಂತ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯ ಮೂಲಕ ಬ್ರೈನ್ ಟ್ಯೂಮರ್ ತಗೆದು ಪ್ರಾಣ ಉಳಿಸಿದ ವೈದ್ಯರುಗಳಿಗೆ 70 ವರ್ಷದ ರೋಗಿಯೊಬ್ಬರು ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದ ಘಟನೆಗೆ ಜಯನಗರದ ಯುನೈಟೆಡ್ ಆಸ್ಪತ್ರೆ ಸಾಕ್ಷಿಯಾಯಿತು.
ಜೂನ್ 8 ವಿಶ್ವ ಬ್ರೈನ್ ಟ್ಯೂಮರ್ ದಿನಾಚರಣೆಯ ಹಿಂದಿನ ದಿನ ಇಂತಹದ್ದೊಂದು ಕಾರ್ಯಕ್ರಮ ನಡೆದಿದ್ದು ವಿಶೇಷ.
ವಿಶ್ವ ಬ್ರೈನ್ ಟ್ಯೂಮರ್ ದಿನಾಚರಣೆಯ ಅಂಗವಾಗಿ ಮಾಹಿತಿಯನ್ನು ನೀಡುವ ಕಾರ್ಯಕ್ರಮದಲ್ಲಿ ಆಕಸ್ಮಿಕವಾಗಿ ಬಂದ ರೋಗಿಗಳು ವೈದ್ಯರನ್ನು ಅಭಿನಂದಿಸಿದರು.

READ | ಗಾಂಧಿ ಬಜಾರ್ ನಲ್ಲಿ ಮಾರಕಾಸ್ತ್ರಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಬೆನ್ನಲ್ಲೇ ಆತಂಕ

ಒಂದು ವರ್ಷದ ಹಿಂದೆ ಪ್ರಾರಂಭವಾಗಿರುವ ಜಯನಗರದ ಯುನೈಟೆಡ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಬ್ರೈನ್ ಟ್ಯೂಮರ್ ಶಸ್ತ್ರಚಿಕಿತ್ಸಾ ಸೌಲಭ್ಯಗಳನ್ನು ಅಳವಡಿಸಿಕೊಳ್ಳಲಾಗಿದೆ. ಸರ್ಜಿಕಲ್ ಇನ್ಪೇಕ್ಷನ್ ಕಡಿಮೆ ಮಾಡುವಂತಹ ಹಾಗೂ ದಕ್ಷತೆಯನ್ನು ಹೆಚ್ಚಿಸುವಂತಹ ಹೈ ಎಂಡ್ ಮಾಡ್ಯೂಲರ್ ಆಪರೇಷನ್ ಥಿಯೇಟರ್‍ಗಳು, ವಿದೇಶದಿಂದ ತರಿಸಲಾದ ಡೆಡಿಕೇಟೆಡ್ ಆಪರೇಟಿಂಗ್ ನ್ಯೂರೋ ಮೈಕ್ರೋಸ್ಕೋಪಿ, ಲ್ಯಾಪ್ರೋಸ್ಕೋಪಿ ಟವರ್‍ಗಳನ್ನು ಹೊಂದಿದೆ.
ಈ ಸೌಲಭ್ಯಗಳನ್ನು ಬಳಸಿಕೊಂಡು ಕೆಲವು ದಿನಗಳ ಹಿಂದೆ ಜಯನಗರದ ಯುನೈಟೆಡ್ ಆಸ್ಪತ್ರೆಯ ನುರಿತ ನ್ಯೂರೋ ಸರ್ಜನ್‍ಗಳು ಅತ್ಯಂತ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯ ಮೂಲಕ ಬ್ರೈನ್ ಟ್ಯೂಮರ್ ಅನ್ನು ತಗೆದು ಹಾಕಿ 70 ವರ್ಷದ ರೋಗಿಯ ಜೀವವನ್ನು ಉಳಿಸಿದ್ದಾರೆ. ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನಡೆದ ಮರುದಿನವೇ ರೋಗಿ ಯಾರ ಸಹಾಯವೂ ಇಲ್ಲದೇ ತನ್ನ ಸ್ವಂತ ಬಲದಿಂದ ನಡೆದಿದ್ದಾರೆ. ಅದರಲ್ಲೂ ಆ ರೋಗಿ ಪ್ರಾಣ ಉಳಿಸಿದ ವೈದ್ಯರಿಗೆ ಆಭಿನಂದನೆ ಸಲ್ಲಿಸಲು ಮುಂದಾಗಿದ್ದು ಯಾವುದೇ ವೈದ್ಯರಿಗೂ ಸಿಗುವ ಅತ್ಯಂತ ಸಂತಸದ ವಿಷಯ ಎಂದು ಯುನೈಟೆಡ್ ಆಸ್ಪತ್ರೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ. ವಿಕ್ರಮ್ ಸಿದ್ದಾರೆಡ್ಡಿ ತಿಳಿಸಿದರು.

READ | 12 ಚೀಲಗಳಲ್ಲಿ ತುಂಬಿಟ್ಟಿದ್ದ 675 ಕೆಜಿ ಅಡಿಕೆ ಕದ್ದಿದ್ದ ಆರೋಪಿಗಳು ಅರೆಸ್ಟ್

ಬ್ರೈನ್ ಟ್ಯೂಮರ್ ಎಂದಾಕ್ಷಣ ಪ್ರತಿಯೊಬ್ಬರಲ್ಲೂ ಭಯದ ಛಾಯೆ ಆವರಿಸಿಕೊಳ್ಳುತ್ತದೆ. ಬ್ರೈನ್ ಟ್ಯೂಮರ್ ಬಂತೆಂದರೆ ಜೀವನವೇ ಮುಗಿದು ಹೋಯಿತು ಎನ್ನುವ ಭಾವನೆ ಕೆಲವರಲ್ಲಿ ಮೂಡುತ್ತದೆ. ಆದರೆ, ಭಯ ಹೊಂದದೇ ಸಾಕಷ್ಟು ನೂತನ ಚಿಕಿತ್ಸಾ ಪದ್ದತಿಗಳ ಆವಿಷ್ಕಾರ ಹೊಂದಿರುವ ಚಿಕಿತ್ಸೆ ಪಡೆದುಕೊಂಡಲ್ಲಿ ಭಯಪಡುವ ಅಗತ್ಯವಿಲ್ಲ. 70 ವರ್ಷದ ಈ ರೋಗಿಯ ಮೆದುಳಿನ ಪೋಸ್ಟೀರಿಯರ್ ಪೋಸಾದ ಆಳದಲ್ಲಿ ಅಪಾಯಕಾರಿಯಾದ ಗೆಡ್ಡೆಯೊಂದು ಬೆಳೆದುಕೊಂಡಿತ್ತು. ಇದನ್ನು ತಗೆಯಲು ಬಹಳ ಕಷ್ಟವಾಗುವಂತ ಜಾಗದಲ್ಲಿ ಇದ್ದು ಅಕ್ಕಪಕ್ಕದ ಯಾವುದೇ ಮೆದುಳಿನ ಭಾಗಕ್ಕೆ ಹಾನಿಯಾದರೆ ವ್ಯಕ್ತಿಯ ಜೀವಕ್ಕೂ ಅಪಾಯವಾಗುವ ಸಂಭವವಿತ್ತು.ನಮ್ಮ ನುರಿತ ನ್ಯೂರೋ ಸರ್ಜರಿ ವೈದ್ಯರ ತಂಡ 4 ಗಂಟೆಗಳ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ನಡೆಸಿ ಗೆಡ್ಡೆಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾಯಿತು. ಆ ರೋಗಿ ಶಸ್ತ್ರಚಿಕಿತ್ಸೆಯ ನಂತರ ಚೆನ್ನಾಗಿ ಚೇತರಿಸಿಕೊಂಡರು.
ಯುನೈಟೆಡ್ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಶಾಂತಕುಮಾರ್ ಮುರುಡಾ ಮಾತನಾಡಿದರು. ಜಯನಗರದ ಯುನೈಟೆಡ್ ಆಸ್ಪತ್ರೆಯ ನ್ಯೂರೋಸರ್ಜರಿ ವಿಭಾಗದ ವೈದ್ಯರು ಉಪಸ್ಥಿತರಿದ್ದರು.

https://suddikanaja.com/2021/09/25/kidney-surgery-to-10-months-baby-at-shivamogga/

Leave a Reply

Your email address will not be published. Required fields are marked *

error: Content is protected !!