ಕೋಟ್ಯಂತರ ಮೌಲ್ಯದ ಚಿನ್ನ, ಬೆಳ್ಳಿಗೆ ಕಳವು, ಪ್ಲ್ಯಾನ್ ಬಳಿಕವೇ ಕನ್ನ

Bhadravati taluk

 

 

ಸುದ್ದಿ‌ ಕಣಜ.ಕಾಂ | DISTRICT | CRIME NEWS
ಭದ್ರಾವತಿ: ಇಲ್ಲಿನ ಚನ್ನಗಿರಿ ರಸ್ತೆಯಲ್ಲಿರುವ ಎಸ್.ಎಸ್.ಜ್ಯುವೆಲರ್ಸ್ ಕೋಟ್ಯಂತರ ಮೌಲ್ಯದ ಚಿನ್ನ, ಬೆಳ್ಳಿ ಸೇರಿದಂತೆ ಇನ್ನಿತರ ವಸ್ತುಗಳಿಗೆ ಕನ್ನ ಹಾಕಲಾಗಿದೆ.
ಚಿನ್ನಾಭರಣ ಮಳಿಗೆಯ ಹಿಂಭಾಗದಲ್ಲಿ ಗೋಡೆ ಕೊರೆದು ಕಳ್ಳರು ಒಳ ನುಗ್ಗಿದ್ದಾರೆ. ಅಂದಾಜು 1.25 ಕೆಜಿ ಚಿನ್ನದ ಆಭರಣ, 50 ಕೆಜಿ ಬೆಳ್ಳಿಯ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ಗ್ರಾಹಕರಿಗೆ ತೋರಿಸಲು ಅಂಗಡಿಯಲ್ಲಿ ಇರಿಸಿದ್ದ ಆಭರಣಗಳನ್ನು ಬೀರುವಿನಲ್ಲಿ ಇರಿಸಲಾಗಿತ್ತು. ಬೀರು ಬಾಗಿಲು ಒಡೆದು ಚಿನ್ನಾಭರಣ ಕಳವು ಮಾಡಲಾಗಿದೆ.

READ | ಕುಮದ್ವತಿಯಲ್ಲಿ ಬಿದ್ದಿದ್ದ ಮಹಿಳೆ ಶವವಾಗಿ ಪತ್ತೆ

ಪಕ್ಕಾ ಯೋಜನೆ ಬಳಿಕವೇ ಕನ್ನ
ಗ್ಯಾಸ್ ಕಟರ್, ದೊಡ್ಡ ರಾಡ್ ಗಳನ್ನು ಬಳಸಿ ಕಳವು ಮಾಡಲಾಗಿದೆ. ಅಲ್ಲದೆ ಅಂಗಡಿಯೊಳಗೆ ಇದ್ದ ಸಿಸಿಟಿವಿ ಉಪಕರಣಗಳನ್ನು ಕಳವು ಮಾಡಲಾಗಿದೆ.
ಶ್ವಾನ ದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೆಚ್ಚುವರಿ ರಕ್ಷಣಾಧಿಕಾರಿ ವಿಕ್ರಮ್ ಆಮ್ಟೆ, ಡಿವೈಎಸ್‌ಪಿ ಜಿತೇಂದ್ರ ಕುಮಾರ್ ದಯಾಮ, ಸರ್ಕಲ್ ಇನ್ಸ್ ಪೆಕ್ಟರ್ ರಾಘವೇಂದ್ರ ಕಾಂಡಿಕೆ ಸ್ಥಳಕ್ಕೆ ಭೇಟಿ ನೀಡಿದ್ದರು. ಹಳೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://suddikanaja.com/2022/03/19/home-minister-aarga-jnanendra-visited-the-farmers-farm-in-keegadi-village-which-was-damaged-by-wild-elephants/

Leave a Reply

Your email address will not be published. Required fields are marked *

error: Content is protected !!