ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಚೋರಡಿ ಸೇತುವೆ ಮೇಲೆ ಪೂಜಾ ಸಮಗ್ರಿ ಇಟ್ಟು ನಾಪತ್ತೆಯಾಗಿದ್ದ ವೃದ್ಧೆಯ ಶವವು ಸೋಮವಾರ ಪತ್ತೆಯಾಗಿದೆ.
ಚೋರಡಿ ಗ್ರಾಮದ ನಾಗರತ್ನ (64) ಎಂಬುವವರ ಶವ ಪತ್ತೆಯಾಗಿದೆ. ಕಾಲು ತೊಳೆದುಕೊಳ್ಳುವುದಕ್ಕಾಗಿ ಹೋದಾಗ ಕಾಲು ಜಾರಿ ಒಳಗೆ ಬಿದ್ದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಶನಿವಾರ ಮತ್ತು ಭಾನುವಾರ ಶೋಧ ಕಾರ್ಯ ನಡೆಸಲಾಗಿದೆ. ಆದರೆ ಶವ ಸಿಕ್ಕಿರಲಿಲ್ಲ. ಸೋಮವಾರ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸಿದ ಬಳಿಕ ಮಹಿಳೆ ಶವವು ಸಿಕ್ಕಿದೆ. ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.