ಶಿವಮೊಗ್ಗದಲ್ಲಿ‌ ಭಾರೀ ಮಳೆಗೆ 129 ಮನೆಗಳಿಗೆ ಹಾನಿ

shivamogga rain 1

 

 

ಸುದ್ದಿ‌ ಕಣಜ.ಕಾಂ | DISTRICT | RAIN FALL
ಶಿವಮೊಗ್ಗ: ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ಸಾರ್ವಜನಿಕರ ಆಸ್ತಿ-ಪಾಸ್ತಿಗಳಿಗೆ ನಷ್ಟವಾಗಿದೆ ಎಂದು ಜಿಲ್ಲಾಧಿಕಾರಿ‌ ಡಾ.ಆರ್.ಸೆಲ್ವಮಣಿ‌‌ (Dr.R.Selvamani) ಅವರು ವಿವರವಾದ‌‌‌ ಮಾಹಿತಿ‌ ನೀಡಿದರು.
ಜಿಲ್ಲೆಯಲ್ಲಿ‌ 129 ಮನೆಗಳು ಭಾಗಶಃ ಕುಸಿದಿವೆ. 24 ಮನೆಗಳಿಗೆ ಹಾನಿಯಾಗಿದೆ. 3 ಜಾನುವಾರು ನೀರಿನಲ್ಲಿ ಕೊಚ್ಚಿ ಹೋಗಿವೆ. ವ್ಯಕ್ತಿಯೊಬ್ಬರು ಬಾವಿಗೆ ಜಾರಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಹೀಗೆ ಜಿಲ್ಲೆಯಲ್ಲಿ ಆಸ್ತಿ ಪಾಸ್ತಿಗಳಿಗೆ ನಷ್ಟವಾಗಿದೆ. ಇವೆಲ್ಲವನ್ನು ಅಧಿಕಾರಿಗಳಿಂದ ವರದಿ ತರಿಸಿಕೊಂಡು ಸರ್ಕಾರದ ಮಾರ್ಗಸೂಚಿಯ ಪ್ರಕಾರ ಆದಷ್ಟು ಬೇಗನೇ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.

READ | ಶಿವಮೊಗ್ಗದಲ್ಲಿ ಭಾರೀ ಮಳೆ ಹಿನ್ನೆಲೆ ಮೂರು ತಾಲೂಕುಗಳ ಶಾಲೆಗಳಿಗೆ ರಜೆ ಘೋಷಣೆ

ಜುಲೈ 30ರವರೆಗೆ ಲಘು ಮಾತ್ರ ಸಂಚಾರ
ಆಗುಂಬೆ ಘಾಟ್ ನಲ್ಲಿ ಭೂಕುಸಿತದಿಂದ ಸಂಚಾರಕ್ಕೆ ತೊಂದರೆಯುಂಟಾಗಿದೆ. ಈಗಾಗಲೇ ತಜ್ಞರು ಸ್ಥಳಕ್ಕೆ ಧಾವಿಸಿದ್ದಾರೆ. ಮಣ್ಣು ತೆರುವುಗೊಳಿಸುವ ಕಾರ್ಯ ಮುಂದುವರಿದಿದೆ. ಮಂಗಳವಾರದೊಳಗೆ ಸಂಚಾರಕ್ಕೆ ಅವಕಾಶ ನೀಡಲಾಗುವುದು. ಆದರೆ, ಜುಲೈ 30ರವರೆಗೆ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಹೇಳಿದರು.
ಅಂಬಾರಗುಡ್ಡ ಕುಸಿತಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಲ್ಲಿನ ತಹಸೀಲ್ದಾರ್ ಗೆ ಸೂಚನೆ ನೀಡಿ ಅಗತ್ಯಕ್ರಮಕ್ಕೆ ತಿಳಿಸಲಾಗಿದೆ ಎಂದರು.

https://suddikanaja.com/2022/07/10/first-death-in-shimoga-due-to-rain-disaster-in-many-places/

Leave a Reply

Your email address will not be published. Required fields are marked *

error: Content is protected !!