ಧಾರಾಕಾರ‌ ಮಳೆಗೆ ಕುಸಿದ ಮನೆಗಳು, ಸಂಕಷ್ಟದಲ್ಲಿ‌ ಜನ

Beluru

 

 

ಸುದ್ದಿ ಕಣಜ.ಕಾಂ | CITY | RAINFALL
ಸಾಗರ: ತಾಲ್ಲೂಕಿನ ಆನಂದಪುರ ಸಮೀಪದ ಆಚಾಪುರ, ಹೊಸೂರು ಮತ್ತು ಗೌತಮಪುರದಲ್ಲಿ ಮಳೆಯ ಅಪಾರ ಪ್ರಮಾಣಕ್ಕೆ ಮನೆಯ ಗೋಡೆ ಬಿದ್ದು ಸಾಕಷ್ಟು ಹಾನಿಯಾಗಿದೆ.
ಆಚಾಪುರದಲ್ಲಿ ಪ್ಯಾರಿಜಾನ್ ಅವರ ಮನೆ ಭಾಗಶಃ ಬಿದ್ದಿದ್ದು ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗೌತಮಪುರದಲ್ಲಿ ನಾಗಮ್ಮ ಎಂಬುವರ ಮನೆ ಸಂಪೂರ್ಣವಾಗಿ ಬಿದ್ದಿದ್ದು ಬಡ ಕುಟುಂಬ ಈಗ ಬೀದಿಗೆ ಬಿದ್ದಂತಾಗಿದೆ.

READ | ವಿಶ್ವ ಹಾವುಗಳ ದಿನ ಇಂದು, ಸರ್ಪ ಜಗತ್ತಿನ ವಿಶೇಷ ಇಲ್ಲಿದೆ, ಕಡಿತ ತಪ್ಪಿಸಲು ಹೀಗೆ ಮಾಡಿ

ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಭೇಟಿ
ಮಳೆಯಿಂದ ಮನೆಯ ಗೋಡೆಗಳು ಬಿದ್ದಿರುವ ಸ್ಥಳಗಳಿಗೆ ಶನಿವಾರ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿ ವೈಯಕ್ತಿಕ ಧನ ಸಹಾಯ ಕೂಡ ಮಾಡಿದರು.
ಸ್ಥಳಕ್ಕೆ ಗೋಪಾಲಕೃಷ್ಣ ಬೇಳೂರು ಭೇಟಿ ನೀಡಿದಾಗ ಪ್ರತಿ ಮನೆಯಲ್ಲೂ ಮಹಿಳೆಯರು ತಮ್ಮ ಕಷ್ಟಗಳನ್ನು ಹೇಳಿಕೊಂಡು ಗಳಗಳನೆ ಅತ್ತ ಹೃದಯವಿದ್ರಾವಕ ಘಟನೆ ನಡೆಯಿತು.
ತಕ್ಷಣ ಮಲಂದೂರಿನ ಮನೆಬಿದ್ದ ಮಹಿಳೆಯ ಕುಟುಂಬಕ್ಕೆ ಊಟಕ್ಕೆ ಬೇಕಾಗುವಷ್ಟು ಅಕ್ಕಿ ವ್ಯವಸ್ಥೆಯನ್ನು ಸ್ಥಳದಲ್ಲಿಯೇ ಮಾಡಿದರು.
ಇತ್ತ ಮಾಜಿ ಜಿಪಂ ಸದಸ್ಯೆ ಅನಿತಾ ಕುಮಾರಿ ಬಟ್ಟೆಯ ವ್ಯವಸ್ಥೆಯನ್ನು ಮಾಡಿದರು. ಸೋಮಶೇಖರ್ ಲಾವಿಗೆರೆ ವೈಯಕ್ತಿಕ ಧನ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಪರಿಹಾರಕ್ಕೆ ಆಗ್ರಹ
ಮಳೆಯಿಂದ ಮನೆ ಬಿದ್ದಿರುವ ಸಂತ್ರಸ್ತರಿಗೆ ಸರ್ಕಾರ ಕೂಡಲೇ ಪರಿಹಾರ ಒದಗಿಸಬೇಕು ಎಂದು ಮಾಜಿ ತಾಲೂಕು ಪಂಚಾಯತ್ ಸದಸ್ಯ ಸೋಮಶೇಖರ್ ಲಾವಿಗೆರೆ, ಮಾಜಿ ಜಿ ಪಂ ಸದಸ್ಯೆ ಅನಿತಾ ಕುಮಾರಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಆನಂದ್ ಹರಟೆ ಆಗ್ರಹಿಸಿದ್ದಾರೆ.

https://suddikanaja.com/2021/07/15/rain-in-shivamogga-5/

Leave a Reply

Your email address will not be published. Required fields are marked *

error: Content is protected !!