
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಶಿವಮೊಗ್ಗ ವಿಭಾಗದ ಸಾಗರ ಘಟಕದಿಂದ ಸಾಗರ- ಶಿವಮೊಗ್ಗ- ವಿಜಯಪುರ ಮಾರ್ಗದಲ್ಲಿ (ವಯಾ ಹರಿಹರ, ಹೊಸಪೇಟೆ, ಇಳಕಲ್) ನ.19 ರಂದು ನೂತನವಾಗಿ 2 ನಾನ್ ಎಸಿ ಸ್ಲೀಪರ್ (ಪಲ್ಲಕ್ಕಿ) ವಾಹನಗಳನ್ನು ಕಾರ್ಯಾಚರಣೆಗೊಳಿಸಲಾಗಿದೆ.
READ | ಅಡಿಕೆ ಮರದಿಂದ ಸೋಫಾ ಸೆಟ್ ತಯಾರಿಸಿ ಯುವಕ, ಕಾಯಿಲೆಯಿಂದ ಹೊಳೆದ ಐಡಿಯಾ ಈಗ ಸಕ್ಸಸ್
ನಾನ್ ಎಸಿ ಬಸ್ ವೇಳಾಪಟ್ಟಿ
ಈ ವಾಹನವು ಸಾಗರದಿಂದ ರಾತ್ರಿ 7.30 ಗಂಟೆಗೆ ಹೊರಟು ವಿಜಯಪುರ ಬೆಳಗ್ಗೆ 5.30 ಗಂಟೆಗೆ ತಲುಪಲಿದೆ ಹಾಗೂ ವಿಜಯಪುರದಿಂದ ರಾತ್ರಿ 7.30 ಗಂಟೆಗೆ ಹೊರಟು ಸಾಗರ ಬೆಳಗ್ಗೆ 5.30ಕ್ಕೆ ತಲುಪಲಿದೆ ಎಂದು ಕರಾರಸಾನಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.