ರಾಗಿಗುಡ್ಡದಲ್ಲಿ ಗೋಡೆ ಕುಸಿದು ತಾಯಿ, ಮಗಳಿಗೆ ಗಾಯ, ಅವಶೇಷ ಅಡಿ ಸಿಲುಕಿದವರು ಸೇಫ್

KE Kantesh

 

 

ಸುದ್ದಿ ಕಣಜ.ಕಾಂ | CITY | RAIN DAMAGE
ಶಿವಮೊಗ್ಗ: ನಗರದಲ್ಲಿ ನಿರಂತರ ಸುರಿಯುತ್ತಿರುವ ಜಿಟಿ ಮಳೆಗೆ ಹಲವೆಡೆ ಅನಾಹುತಗಳು ಸಂಭವಿಸಿದ್ದು, ರಾಗಿಗುಡ್ಡದಲ್ಲಿ ಶನಿವಾರ ಬೆಳಗ್ಗೆ ಮನೆಯೊಂದರ ಗೋಡೆ ಕುಸಿದುಬಿದ್ದಿದ್ದು, ತಾಯಿ ಮತ್ತು ಮಗಳು ಗಾಯಗೊಂಡಿದ್ದಾರೆ.
ಭವಾನಿರಾವ್ ಎಂಬುವವರ ಪತ್ನಿ ಉಮಾ ಹಾಗೂ ಪುತ್ರಿ ಕಾವ್ಯಾ ಗಾಯಗೊಂಡಿದ್ದು, ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

READ | ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಬೆನ್ನಲ್ಲೇ ಸರ್ಕಾರದಿಂದ ಹೊಸ ಸುತ್ತೋಲೆ

ಬೆಳಗಿನ ಜಾವ ಬಿದ್ದ ಮನೆ, ಅವಶೇಷ ಅಡಿ ಸಿಲುಕಿದವರ ರಕ್ಷಣೆ
ಮಳೆಯಿಂದಾಗಿ ಗೋಡೆಗಳು ತೇವಗೊಂಡಿದ್ದು, ಬೆಳಗಿನ ಜಾವ ಮೂರು ಗಂಟೆ ಹೊತ್ತಿಗೆ ಗೋಡೆಗಳು ಕುಸಿದಿವೆ. ಮನೆಯ ಹಾಲ್ ನಲ್ಲಿ ಮಲಗಿದ್ದ ಕುಟುಂಬದ ಸದಸ್ಯರು ಬಿದ್ದ ಗೋಡೆಯ ಅವಶೇಷಗಳಡಿ ಸಿಲುಕಿದ್ದಾರೆ. ತಕ್ಷಣವೇ ಸ್ಥಳೀಯರು ಅವರನ್ನು ಹೊರಗಡೆ ತೆಗೆದಿದ್ದಾರೆ. ಉಮಾ ಅವರ ಕೈಕಾಲು ಹಾಗೂ ಸೊಂಟಕ್ಕೆ ಪೆಟ್ಟಾಗಿದ್ದು, ಕಾವ್ಯಾಗೆ ಭುಜದ ಮೂಳೆ ಮುರಿದಿದೆ ಎಂದು ತಿಳಿದುಬಂದಿದೆ.
ಮೆಗ್ಗಾನ್’ಗೆ ಭೇಟಿ ನೀಡಿದ ಕಾಂತೇಶ್
ಗಾಯಾಳುಗಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಇ. ಕಾಂತೇಶ್, ಪಾಲಿಕೆ ಸದಸ್ಯ ಧೀರರಾಜ್ ಹೊನ್ನವಿಲೆ, ಉಪ ಮೇಯರ್ ಶಂಕರ್ ಗನ್ನಿ ಸೇರಿದಂತೆ ಇತರರು ಭೇಟಿ ಆರೋಗ್ಯವನ್ನು ವಿಚಾರಿಸಿ, ಧೈರ್ಯ ತುಂಬಿದರು.

https://suddikanaja.com/2021/09/15/illegal-construction-of-religoius-centres/

Leave a Reply

Your email address will not be published. Required fields are marked *

error: Content is protected !!