ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದ ಫೀಡರ್ ಎ.ಎಫ್-3ರಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಏ.21 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಲ್ಲೆಲ್ಲಿ ಪವರ್ ಕಟ್?
ಎಸ್.ವಿ.ಬಡಾವಣೆ ಎ ಯಿಂದ ಎಫ್ ಬ್ಲಾಕ್, ಮಹಿಳಾ ಪಾಲಿಟೆಕ್ನಿಕ್ ಕಾಲೇಜ್, ಅಮೃತ ಲೇಔಟ್, ಗಾಡಿಕೊಪ್ಪ, ಸಾಗರ ರಸ್ತೆ, ಪೊಲೀಸ್ ಲೇಔಟ್, ಹರ್ಷ ಫರ್ನ್ ಸುತ್ತಮುತ್ತ, ಡಾ. ಶಶಿಭೂಷಣ್ ಲೇಔಟ್, ಡೆಂಟಲ್ ಕಾಲೇಜ್, ಗೋಲ್ಡನ್ ಸಿಟಿ ಲೇಔಟ್, ಮ್ಯಾಕ್ಸ್ ವರ್ಥ್ ಲೇಔಟ್, ಎ.ಬಿ.ವಿ.ಪಿ. ಬಡಾವಣೆ, ಗಾಯತ್ರಿದೇವಿ ಲೇಔಟ್, ಮಲ್ಲಿಗೇನಹಳ್ಳಿ, ಗೋಪಾಳಗೌಡ ಬಡಾವಣೆ ಎಫ್ ಬ್ಲಾಕ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.