ಸುದ್ದಿ ಕಣಜ.ಕಾಂ | CITY | POWER CUT
ಶಿವಮೊಗ್ಗ: ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಫೀಡರ್ 8, 9, 10 ಮತ್ತು 11ರಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಡಿಸೆಂಬರ್ 11ರಂದು ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
READ | ನಿರ್ಜನ ಪ್ರದೇಶದಲ್ಲಿ ಮಹಿಳೆ ರೇಪ್ ಮಾಡಿದ್ದ ಆರೋಪಿಗೆ 10 ವರ್ಷ ಜೈಲು
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ವಿನೋಬನಗರ, 60 ಅಡಿ ರಸ್ತೆ ವಿನೋಬನಗರ, 100 ಅಡಿ ರಸ್ತೆ ವಿನೋಬನಗರ, ಪೊಲೀಸ್ ಚೌಕಿ, ಮೇದಾರ್ ಕೇರಿ, ಕೆ.ಎಚ್.ಬಿ ಕಚೇರಿ, ಎಸ್.ಕೆ.ಎನ್ ಶಾಲೆ, ಕೆಜಿಪಿ ಆಸ್ಪತ್ರೆ, ಕರಿಯಣ್ಣ ಬಿಲ್ಡಿಂಗ್, ಕೆ.ಎಚ್.ಬಿ ಕ್ವಾಟ್ರರ್ಸ್, ದಾಮೋದರ್ ಕಾಲೊನಿ, ಸವಿ ಬೇಕರಿ ಡೌನ್, ಸೂಡಾ ಕಾಂಪ್ಲೆಕ್ಸ್, ವೀರ ಸಾವರ್ಕರ್ ವಾಣಿಜ್ಯ ಮಳಿಗೆ, ವಿನೋಬನಗರ ಪೊಲೀಸ್ ಠಾಣೆ, ಕಾಶೀಪುರ, ಜಯದೇವ ಬಡಾವಣೆ, ಪ್ರಿಯದರ್ಶಿನಿ ಬಡಾವಣೆ, ಶಿವಪ್ಪನಾಯಕ ಬಡಾವಣೆ, , ಇಂದಿರಾಗಾಂಧಿ ಲೇಔಟ್, ಕೆ.ಎಚ್.ಬಿ, ಚೇತನಾ ಸ್ಕೂಲ್, ಕಲ್ಲಹಳ್ಳಿ, ಹೊಸಮನೆ, ಜೈಲು ರಸ್ತೆ, ಶರಾವತಿ ನಗರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹರಿಸಬೇಕು ಎಂದು ಮೆಸ್ಕಾಂ ನಗರ ಉಪ ವಿಭಾಗ 3ರ ಎಇಇ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.